ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಶನಿವಾರ, ಡಿಸೆಂಬರ್ 25, 2010

ಹೊಸ ವರುಷದ ಹರುಷ ..


ಬಂತು ನೋಡಿ ಹೊಸ ವರುಷ
ಮರೆಯದಿರಿ ಹಳೆ ವರುಷದ ಹರುಷ
ಸುಖ ಶಾಂತಿಯ ವರುಷ
ನಿಮ್ಮದಾಗಲಿ ಕೋಟಿ ಹರುಷ

ಬಂತು ನೋಡಿ ಹೊಸ ವರುಷ
ಕಿತ್ತೆಸೆಯಿರಿ ದುಃಖದ ವಿರಸ
ಸ್ನೇಹ ಪ್ರೀತಿಯ ಈ ವರುಷ
ನಿಮ್ಮದಾಗಲಿ ಕೋಟಿ ಹರುಷ

ಬಂತು ನೋಡಿ ಹೊಸ ವರುಷ
ಮಾಡದಿರಿ ಕೆಟ್ಟ ಕೆಲಸ
ಒಳಿತು ಭಾವದ ಈ ವರುಷ
ನಿಮ್ಮದಾಗಲಿ ಕೋಟಿ ಹರುಷ

ಬಂತು ನೋಡಿ ಹೊಸ ವರುಷ
ನೀನಾಗು ಸುಗುಣಿ ಬಂಗಾರದ ಮನುಷ್ಯ
ಸುಂದರ ಜೀವನದ ಈ ವರುಷ
ನಿಮ್ಮದಾಗಲಿ ಕೋಟಿ ಹರುಷ

ಬಂತು ನೋಡಿ ಹೊಸ ವರುಷ
ಹಾರೈಸುವೆ ನಾ ಮನಸಾ
ನೀವು ಬಾಳಿರಿ ನೂರು ವರುಷ
ನಿಮ್ಮದಾಗಲಿ ಕೋಟಿ ವರುಷ


ಎಲ್ಲ ಪ್ರಜೆಗಳಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು..


ಬುಧವಾರ, ಡಿಸೆಂಬರ್ 8, 2010

hostel girls...


ಹಾಸ್ಟೇಲನಲ್ಲಿರುವ ಹುಡುಗಿಯರಿಗೆ ಹಗಲಾಗಲಿ ಇರುಳಾಗಲಿ ಕನಸು ಕಾಣುವ ಒಬ್ಬರೆ ಕುಳಿತರು ನಗುವರು, ಮಾತನಾಡುವರು,
ನಾಚುವರು ಮತ್ತು ಭಾವನೆಗಳೊಂದಿಗೆ ಆಟವಾಡುವರು. ಯಾವ ಹೊತ್ತಿಗೆ ಯಾವ ಹುಡುಗ ಅವರ ಮನದಲ್ಲಿ ನೆಲೆಸುವನೊ
ತಿಳಿಯದು. ಕಿಟಕಿಯಿಂದ ಬರುವ ತಂಗಾಳಿಯು ಪ್ರತಿ ಕ್ಷಣಕೆ ಹೊಸ ಬಯಕೆ ಹೊತ್ತು ತರುವುದೋ? ಹೊಸ ಪ್ರೀತಿ ಮಾತು 
ಆಲಿಸಿವುದೊ? ಕಾಣಲಾರೆವು. ಸ್ನೇಹ- ಪ್ರೀತಿ ತುಂಬಿದ ಭಾವನೆಗಳ ಸುಂಟರಗಾಳಿ ಆ ಹುಡುಗಿಯರನ್ನು ಮುತ್ತಿ ಬಿಟ್ಟಿರುತ್ತದೆ.
ಅವರ ಆತ್ಮೀಯವಾದ ಗೋಡೆಗಳು ಪ್ರೀತಿ ಮಾತುಗಳಿಗೆ ಸ್ಪಂದಿಸುವವು. ತಮ್ಮೆಲ್ಲ ಭಾವನೆಗಳನ್ನು, ಕದ್ದು ನೋಡಲು, ಸುಖ
ದುಃಖದ ಗಳಿಗೆಯನ್ನು ಹಂಚಿಕೊಳಲು ಬಂದಿರುವ ಅವರ ಜೀವದ ಗೆಳೆಯ ಸುಂದರವಾದ ಕನ್ನಡಿಯಾಗಿರುತ್ತದೆ.
        ಯಾವ ಕ್ಷಣದಲ್ಲಿ ದಿಂಬನ್ನು ಅಪ್ಪಿ ಮುತ್ತು ನೀಡುವರೊ? ತಿಳಿಯದು. ಪ್ರತಿದಿನ ಮುಂಜಾನೆ ನಿದ್ದೆಯಿಂದ ಎದ್ದರೆ
ಅವರು ಹೊಸ-ಹೊಸ ಕನಸುಗಳನ್ನು ಹೊತ್ತು ತರುವರು. ಆ ಕನಸನ್ನು ನನಸಾಗಿಸಲು ತಮ್ಮ ಮನೆಯವರ ಜೊತೆ ಕೋಪ
ಗೊಳುವರು. ಅಭ್ಯಾಸ ಮಾಡಲು ಕಡಿಮೆ ಸಮಯ ದೊರೆತರು ಬೇಜಾರಾಗದೆ ರೂಮಮೇಟ್ ಮತ್ತು ಉಳಿದ ಸ್ನೇಹಿತೆಯರ
ಜೊತೆ ರಾತ್ರಿ ಒಂದು ಘಂಟೆಯವರೆಗೆ ಮುದ್ದಾದ ತುಂಟಾದ ಹರಟೆ ಹೊಡೆಯುವರು. ಕಾಲೇಜನಲ್ಲಿ ಧ್ಯಾನ ಕಡಿಮೆಯಾದರು
ಪರವಾಗಿಲ್ಲ ಆದರೆ ಉಡುಪುಗಳ ಬಗ್ಗೆ ವಿಶೇಷ ಧ್ಯಾನ ನೀಡುವರು. ಕಾಲೇಜ್ ಬ್ಯಾಗ್ ಅಂತು ಕೇಳಲೆ ಬೇಡಿ ಗುಲಾಬಿ ,
ಹಾರ್ಟು, ವರ್ಕ್ ಹೊಂದಿದ್ದು ಓದುವ ಪುಸ್ತಕಗಳಿಗಿಂತ ಹೆಚ್ಚೆ ಬೆಲೆ ಕೊಟ್ಟು ಬಳಸುತ್ತಾರೆ. ರೂಮ್ ಎಷ್ಟೆ ಚಿಕ್ಕದಾಗಿರಲಿ
ಅಲ್ಲಿ ಟೆಡ್ಡಿ ಬೀಯರ್ ಇರಲೆಬೇಕು, ಮೆಸ್ ಊಟ ಬಿಟ್ಟರು ಪರವಾಗಿಲ್ಲ ಚೊಕೊಲೆಟ್ ರೂಮಲ್ಲಿ ಕಾಣಲೆಬೇಕು. ಪೆನ್ನಿಡುವ
ಸ್ಟಾಂಡಲ್ಲಿ ಪೆನ್ನು ಕಡಿಮೆ ಮೆಕ್ಅಪ್ ಪೆನ್ಸಿಲಗಳು ತುಂಬಿರತ್ತಾರೆ. ಇದೆಲ್ಲಾ ಬಿಟ್ಟು ತಾವೆ ಮಲಗುವ ಬೆಡ್ ಸೀಟ ಕವರ್ 
ಹೇಗಿರಬೇಕು ಅಂತಾ ಕೇಳಿದ್ರೆ ಹೇಳುವರು- ಬಣ್ಣ ಬಣ್ಣದ ಚಿಟ್ಟೆಗಳು, ಕೆಂಪು ಹೃದಯಗಳು, ಹೂ ಹಾಸಿಗೆ, ಗೊಂಬೆಯ 
ಚಿತ್ರಗಳು ಹೊಂದಿರುವುದನ್ನು ಹತ್ತಾರು ಅಂಗಡಿಗಳನ್ನು ಸುತ್ತಿ ಹುಡುಕಿ ತರುವರು. 
          ಖಾಟಿನ ಪಕ್ಕದ ಗೋಡೆಗೆ ಅಥವಾ ಬಾಗಿಲಿನ ಹಿಂದೆ ತಾವು ಇಷ್ಟಪಡುವ ನಟನ ಪೋಸ್ಟರ್ ಅಂಟಿಸಿರುತ್ತಾರೆ.
ಅದರ ಮೇಲೆ ಇವರ ಮನಸ್ಸು ಮುನಿದಾಗ ತುಟಿಗಳ ಚಾಪಣಿ ಮೂಡಿಸಿರುತ್ತಾರೆ. ಈ ಹಾಸ್ಟೇಲ್ ಹುಡುಗಿಯರೆ ಹೀಗೆ ಃ
ಬಣ್ಣ ಬಣ್ಣದ ಬೆಡಗಿಯರು, ಅವರ ಮಿಂಚುವ ಕಣ್ಣುಗಳು, ಕೆಂಗುಲಾಬಿ ತುಟಿಗಳು, ಕಿವಿ ಓಲೆಗಳು, ಸಾನಿಯಾ ಮೂಗುತಿಗಳು,
ಸಣ್ಣ ಸೊಂಟಗಳು, ಕಲರ್ ಫುಲ್ ಬಿಂದಿಗಳು, ಬ್ರಾಂಡೆಡ್ ಲಿಪಸ್ಟಿಕಗಳು, ಮೇಕಪ್ ಬಾಕ್ಸಗಳು, ಘಮ್ಮೆನ್ನುವ ಸೆಂಟುಗಳು,
ಫ್ಯಾನ್ಸಿ ಡ್ರೆಸ್ಸುಗಳು, ಮ್ಯಾಚಿಂಗ್ ಚಪ್ಪಲಗಳು, ಖಾಲಿ ಪರ್ಸುಗಳು, ಚಿಕ್ಕ ಬ್ಯಾಗುಗಳು, ಮೆಲ್ಲಗಿಡುವ ಕ್ಯಾಟ್ ವಾಕಗಳು, ಚೆಂದದ
ಗೊಂಬೆಗಳು, ಬಾಯ್ ಫ್ರೆಂಡ್ನ್ ಗಿಫ್ಟುಗಳು, ವಿವಿಧ ಚೊಕೊಲೇಟಗಳು, ಮಲಗುವ ಬೇಡಸೀಟಗಳು, ಅಪ್ಪಲು ದಿಂಬುಗಳು,
ಮಸ್ತ ನೈಟಿಗಳು, ಕದ್ದ ಕನಸುಗಳು, ಹ್ರದಯವಂತ ಪೋರಗಳು, ಸ್ನೇಹಿಸುವ ಚಿಹ್ನೆಗಳು, ಪ್ರೀತಿಸುವ ಪರಿಗಳು, ವಿಚಿತ್ರ 
ವಿಚಾರಗಳು,ಸಹಾಯದ ಸ್ನೇಹಿತೆಗಳು, ಹೊಸ ಬಯಕೆಗಳು, ಹಳೆ ನೆನಪುಗಳು.
       ಹೀಗೆ ಹಾಸ್ಟೇಲ್ ಹುಡುಗಿಯರ ಲೈಫು ಇಷ್ಟೇನೆ. ಇವರ ಪಾಲಿಸುವ ಚಿನ್ನದಂತಾಮಾತು ಕೇಳಿರಿಃ
  ನಕ್ಕು ನಲಿಯಿರಿ
  ಕನಸು ಕಾಣಿರಿ
  ಸ್ನೇಹ ಬೆಳೆಸಿರಿ
  ಪ್ರೀತಿ ಮಾಡಿರಿ
  ಮನೆಯವರಿಗೆ ಕೈ ಕೊಟ್ಟು ಹುಡುಗನ ಜೊತೆ ಓಡಿ ಹೋಗಿರಿ
  ಮದುವೆ ಆಗಿರಿ
  ಮಕ್ಕಳು ಹಡೆಯಿರಿ
  ಜಗಳ ಆಡಿರಿ
  ಮಕ್ಕಳನ್ನು ಹಾಸ್ಟೇಲ ಸೇರಿಸಿರಿ
  ಆ ಮಕ್ಕಳು ಓಡಿ ಹೋದಾಗ ಬುಧ್ಧಿ ಕಲಿಯಿರಿ.....
{ಈ ಮಾತುಗಳನ್ನು ಯಾವುದೆ ಹುಡುಗಿಯರು ಅಪರ್ಥ ಮಾಡಿಕೊಳಬಾರದು. ಹಾಗೆ ಸುಮ್ಮನೆ ಸ್ವಲ್ಪ ಕಹಿ ಸತ್ಯಗಳನ್ನು ಬರೆದಿರುವ
ಪಿಸುಮಾತಿದು.. ಎಲ್ಲ ಹುಡುಗಿಯರು ಈ ತರಹ್ ಇರುವುದಿಲ್ಲ. ಒಂದು ಹಾಸ್ಟೇಲನಲ್ಲಿ ಒಬ್ಬರು ಹೀಗೆ ಇರುತ್ತಾರೆ ಓಕೆ ಃ ) }

ಮಂಗಳವಾರ, ನವೆಂಬರ್ 23, 2010

ಮನಸಿನ ದುಃಖ ..

ಮನಸ್ಸಿನ ಶಾಂತಿಗೆ ನೆಲೆ ಇಲ್ಲದೆ
ಅಶಾಂತಿಯಾದ ಮನ 
ಹುಚ್ಚು ಹಿಡಿದ ನಾಯಿಯ ಹಾಗೇ ಪರದಾಡುತಿದೆ
ಮನಸಿನ ನೋವಿಗೆ ತಾಳ್ಮೆ ಇಲ್ಲದೆ
ಕಣ್ಣೀರಿನಿಂದ ಮನಕೆ
ಪ್ರವಾಹ ಬಂದ ಜನರ ಪರಿಸ್ಥಿತಿ ಉಂಟಾಗುತಿದೆ
ಮನಸಿನ ದುಃಖಕೆ ಸೋಲು ಇಲ್ಲದೆ
ಸಂಕಟದಿಂದ ಮನ 
ಅನಾಥರಾದ ಮಕ್ಕಳ ಹಾಗೆ ಒಂಟಿಯಾಗಿದೆ
ಮನಸಿನ ಅಶಾಂತಿಯೆ ದುಃಖಕೆ ಕಾರಣ
ಎಂದು ನನ್ನ ಮನ ಕೂಗಿ ಹೇಳುತಿದೆ
ಅಶಾಂತಿಯೆ ನೋವಿನ ಕಣ್ಣೀರಿಗೆ ಕಾರಣ
ಎಂದು ಈ ಮನ ದುಃಖ ಹೇಳುತಿದೆ

ಓಂ..

ಓಂ ಅಕ್ಕ್ಷರವೇ ಓಂಕಾರದ ಧ್ವನಿ ಕೇಳಿದೆ
ಓಂ ಎಂದರೆ ಮನ ಶಾಂತಿಯೇ ಹೇಳಿದೆ
ಆತ್ಮವನ್ನು ಗುರುತಿಸಿದವನೇ ದೇವರೆಂದು ಹೇಳಿದೆ
ದೇವರನ್ನು ನಂಬಿದವನೆ ಭಕ್ತನೆಂದು ತಿಳಿದಿದೆ
ಶೃಧ್ಧೆ ಭಕ್ತಿ ತೋರಿದವನು 
ಅಹಿಂಸೆ ಶಕ್ತಿ ಹೊಂದವನು 
ತ್ಯಾಗ ಪ್ರೇಮ ಇದ್ದವನು 
ದೇವರನ್ನು ಪ್ರೀತಿಸುವವನು
ಆಸ್ತಿಕನೆಂದು ಹೇಳಿದೆ..
ಹಿಂಸೆ ದಾರಿಯಲ್ಲಿ ನಡೆದು 
ಅಪಾರ ದ್ವೇಷ ಹೊಂದಿದವನು 
ಅಧರ್ಮವನ್ನು ತಿಳಿದವನು
ನಾಸ್ತಿಕನೆಂದು ಹೇಳಿದೆ..
ಓಂಕಾರವ ಜಪಿಸುತ್ತ ಓಂ ಎಂದು ಹೇಳುತ್ತ 
ಓ ನಿನ್ನ ಮನಕೆ ಶಾಂತಿಯನ್ನು ನೀಡುತ್ತ
ಧರ್ಮವನ್ನು ಅರಿತು ಧರ್ಮವನ್ನು ಬೆಳೆಸಿ
ಧಾರ್ಮಿಕನಾಗಿರುವವನೆ ನಿಜ ದೇವರೆಂದು ಹೇಳಿದೆ..

ಆಸೆ ಎಂಬುದು ಸ್ವಾರ್ಥ..


  ಮನುಷ್ಯನ ಸ್ವಾರ್ಥ ಬಹಳ ಕೆಟ್ಟದು. ತನ್ನ ಸ್ವಾರ್ಥಕ್ಕಾಗಿ ಬೇರೆಯವರ ಮನಸ್ಸು ನೋವಿಸುತ್ತಾನೆ. ಸ್ವಾರ್ಥ ಎಂಬಲ್ಲಿ ತನ್ನ 
ಮನದ ಆಸೆ ಎಂದರ್ಥ. ಆಸೆ ಎಂಬುದು ಮನಸ್ಸಿನ ಹುಚ್ಚು ಮತ್ತು ಸ್ವಲ್ಪಸಮಯದ ಸಂತೋಷ ಕೊಡುವ ಸಮಯ.ರಾವಣನು
ಸೀತೆಯ ಆಸೆಯಿಂದ ಜಗಕ್ಕೆಲ್ಲ ಕೆಟ್ಟವನಾದ.ಹೀಗೆ ಹಲವಾರು ಜನ ಆಸೆ ಎಂಬ ಸ್ವಾರ್ಥದಲ್ಲಿ ಜೀವನವನ್ನು ಬಲಿ ಕೊಡುತ್ತಾರೆ.
ಯಾವ ಮನುಷ್ಯ ನಿಜವಾಗಿಯೂ ತನ್ನ ಆತ್ಮವನ್ನು ಪ್ರೀತಿಸುತ್ತಾನೆ. ಅದರ ಸಾಮರಸ್ಯವನ್ನು ತಿಳಿದುಕೊಳುತ್ತಾನೆ.ಆ ಮನುಷ್ಯ 
ಯಾವುದೆ ತರಹದ ದುರಾಸೆಯನ್ನು ಇಟ್ಟುಕೊಳುವುದಿಲ್ಲ.ಆತ್ಮಕಲ್ಯಾಣದ ಆಸೆಯಿಂದ ಜೀವಿಸುವ ಜೀವ ಜಗತ್ತಿನಲ್ಲಿ ಹುಟ್ಟಿ 
ಸಾರ್ಥಕನಾಗುತ್ತಾನೆ. ಆಸೆ ಎಂಬುದು ಮನದಲ್ಲಿಯೆ ಹುಟ್ಟಿ ಮನದ ಮೂಲೆಯಲ್ಲಿ ಅಂತ್ಯಗೊಳುವ ವಿಷಯ.
          ಯಾವುದೇ ಮನುಷ್ಯ ತನ್ನ ಸ್ವಾರ್ಥವೆಂದು ತಿಳಿದು ನಡೆದ ದಾರಿಯು ಬೇರೆಯವರಿಗೆ ಕೆಡಕನ್ನು ಉಂಟು
ಮಾಡಬಹುದು.ಅದಕ್ಕಾಗಿ ಬೇರೆಯವರ ಹಿತವೆ ತಮ್ಮ ಹಿತವೆಂದು ಭಾವಿಸುವ ಜೀವದ ಮನುಷ್ಯನಾಗಿರಬೇಕು. ಅವನು ಸ್ವಾರ್ಥಿ
ಎಂದು ಹೇಳುವಲ್ಲಿ ಮಹಾ ಪಾಪಿ ಎಂದು ಹೇಳುವಷ್ಟೇ ಅರ್ಥ ಅಡಗಿರುತ್ತದೆ. ಈ ಜಗತ್ತಿನಲ್ಲಿ ಸ್ವಾರ್ಥದ ದೀಪ ಎಲ್ಲರ್ ಮನೆಯಲ್ಲಿ
ಬೆಳಕು ನೀಡಿದೆ. ಮಾನವೀಯತೆಯೆಂಬ ತಂಪಾದ ಗಾಳಿಯಿಂದ ಸ್ವಾರ್ಥದ ದೀಪವನ್ನು ಆರಿಸಬಹುದು. ಪ್ರೀತಿ, ವಿಶ್ವಾಸ,
ಸಹನೆ, ಒಳೆಯತನ ಮತ್ತು ನಿರಹಂಕಾರ ಎಂಬ ಪಂಚಸೂತ್ರ ಬಳಿಸಿ ಆತ್ಮದ ದೀಪವನ್ನು ಉರಿಸಿದರೆ ಜೀವನವು
ಕಲ್ಯಾಣವಾಗುವುದು & ಬೇರೆಯವರ ಜೀವನದಲ್ಲಿಯೂ ಕೂಡ ನಿಮ್ಮ ದೀಪದ ಬೆಳಕಾಗುವುದು.
         ಮನುಷ್ಯ ಸ್ವಾರ್ಥವನ್ನು ಬಿಟ್ಟು ಎಲ್ಲರೂ ನಮ್ಮವರೆ.. ಅವರ ಒಳಿತು ನನ್ನದು ಅವರ ಕೆಡಿತು ನನ್ನದು ಎಂಬ
ಭಾವದಿಂದ ಬಾಳಬೇಕು. ತನ್ನ ಸ್ವಾರ್ಥದಿಂದ ಬೇರೆಯವರ ಮನಸು ನೋವಿಸುತ್ತಿದ್ದರೆ ಆ ಸ್ವಾರ್ಥದಲ್ಲಿರುವುದು ನನ್ನ ದುರಾಸೆ
ಎಂದು ತಿಳಿದುಕೊಳ್ಬೇಕು. ಈಗಿನ ಕಾಲದಲ್ಲಿ ಸ್ವಾರ್ಥವೆಂಬುದು ಮಗು ಹುಟ್ಟುವ ದಿನದಿಂದಲೆ ಕಲೆತು ಬಿಡುತ್ತದೆ. ಅದಕ್ಕೆ ಕಾರಣ
ಅದೇ ಸ್ವಾರ್ಥದಿಂದ ನೀಡಿರುವ ಮಗುವಿನ ಸಂಸ್ಕಾರಗಳು ಎಂದು ಮರೆಯದಿರಿ. ಮನುಷ್ಯನ ಮನಸ್ಸಿನ ಮೇಲೆ ಅವನ ಜೀವನ
ಆಧಾರಿತವಾಗಿರುತ್ತದೆ.ಹೀಗಾಗಿ ಸ್ವಾರ್ಥವನ್ನು ಅಳಿಸಿ ಪ್ರೀತಿಯಿಂದ ಬೆಳೆಸಿದ ಮನಸ್ಸಿನವರಾಗಿರಬೇಕು ಮತ್ತು ಬೇರೆಯವರ 
ಹಿತವನ್ನು ಬಯಸಬೇಕು. ಜೀವನದಲ್ಲಿ ಆಸೆ ಇರಬೇಕು ಆದರೆ ಅದು ಸ್ವಾರ್ಥವೆಂಬ ದುರಾಸೆಗೆ ಒಳಗಾಗಿರಬಾರದು. ಹೀಗೆ 
ತನ್ನ ಆತ್ಮ ಶುದ್ಧದಿಂದ ಆತ್ಮದ ಕಲ್ಯಾಣದಿಂದ ಜೀವನವನ್ನು ಒಳೆಯತನದಿಂದ ಪರಿಪೂರ್ಣಗೊಳಿಸಬೇಕು..

ಸೋಮವಾರ, ನವೆಂಬರ್ 8, 2010

ನನ್ನ ಮನಕೆ..

ಮನದಾಳದಿಂದ ಮನವೊಂದು ಹುಟ್ಟಿ




ಮುತ್ತಿಟ್ಟು ಬಂತು ನನ್ನ ಮನಕೆ



ಮನ ಮನ್ವೆಂದು ಜಪವ ಹಾಕುತ



ಮನಸಾರೆ ಪ್ರೀತಿಸು ನನ್ನ ಮನಕೆ



ಮನದಲ್ಲಿ ಇಣುಕಿ ನೀ ನೋಡಿದಾಗ



ಸವಿ ಸ್ನೇಹ ಕಾಣಿತು ನನ್ನ ಮನಕೆ



ಮನಸ್ಸೆಂಬ ಮನೆಯಲ್ಲಿ ನೀ ಬಂದು



ನೆಲೆದಾಗ ಮೌನ ತುಂಬಿತು ನನ್ನ ಮನಕೆ



ಮನದ ಮುಗಿಲಲಿ ನೀ ಹೊಳೆದಾಗ



ಸ್ವರ್ಗ ಕಾಣಿತು ನನ್ನ ಮನಕೆ



ಮನದಾಳದಿಂದ ಸ್ನೇಹ ನೀ ಬಯಸಿ



ಪ್ರೀತಿ ಮಾಡಿತು ನನ್ನ ಮನಕೆ..

ಸರಸ ..

ಮನದಾಳದಿಂದ ಮಹದಾಸೆಯೊಂದು








ಬೆನ್ನತ್ತಿ ಬಂದಿತು







ಕಗ್ಗತ್ತಲಲ್ಲಿ ಕಿರು ಬೆಳಕನ್ನು







ಹೆಕ್ಕಿ ಹುಡುಕಿತು







ಚಂದ್ರನ ಬೆಳಕಲ್ಲಿ ಮಂದದ







ಇರುಳಲಿ ಪ್ರೀತಿಯ ಕಾದಿತ್ತು







ಮಂದ ವಾಸನೆ ಮೆತ್ತು ಹಾಸಿಗೆ







ಇನಿಯನ ಕರೆದಿತು







ಸುಂದರ ಮೊಗವ ಸವಿಜೇನು ಹನಿಯ







ತಂಪು ತುಟಿಗಳು ಚುಂಬಿಸಿತು







ಕೆಂಪು ಕೆನ್ನೆಗೆ ಹೊಳೆವ ಕಣ್ಣಿಗೆ







ಮುತ್ತಿನ ಮಾಲೆ ಪೋಣಿಸಿತು







ಕಾಲ್ಗೆಜ್ಜೆ ನಾದವ ಕಾಲುಂಗುರ ಬೆರಳ







ಒಬ್ಬಟ್ಟಿನ ಹಾಗೆ ಸುತ್ತಾಡಿತು







ಕಾಣುವ ಸೊಂಟವ ಮೆಲ್ಲಗೆ ಕಚ್ಚಿ







ಮುತ್ತಿಟ್ಟು ಮಲ್ಲಿಗೆ ಮಳೆಯಾಯಿತು







ಉಸಿರು ಹಸಿರಾಗಿ ಮೌನ ಮಾತಾಗಿ







ತುಟಿಯ ಅಂಚು ಪ್ರೀತಿಯ







ಓಲೆ ಬರೆದಿತು...

ಶುಕ್ರವಾರ, ಅಕ್ಟೋಬರ್ 22, 2010

ಪ್ರೀತಿ ಮರೆತಾಗ ..





ನಾ ನಿನ್ನ ಮರೆತಾಗ   
ನೀ ನನ್ನ ನೆನೆದಾಗ 
ನನ್ನದೆಯ ಬಡಿತ       
ನಿನಗಾಗಿ ಮಿಡಿದಾಗ 
ಆ ನಿನ್ನ ನೆನಪು       
ಅಲೆಯಾಗಿ ಬಂದಾಗ 
ನನ್ನೆದೆಯ ಪ್ರೀತಿ 
ಹಬ್ಬಿ ಬೆಳೆದಾಗ 
ನೀ ನನ್ನ ಹೆಸರು 
ಮರೆತು ಬಿಟ್ಟಾಗ 
ಈ ನಿನ್ನ ಪ್ರೀತಿ 
ಕರಗಿ ಹೋದಾಗ 
ನೀನಿಲ್ಲದ ಬದುಕ 
ಬಾಡಿದ ಹೂಹಾಂಗ
ನೆನಪಿನ ಜೀವ 
ಅಗಲಿ ಹೋದಾಗ 
ನಿನ್ನ ಜೊತೆಯ ಉಸಿರು 
ನನ್ನನ್ನು ಮರೆತಾಗ 
ನನ್ನಿನ್ನ ಹೆಸರು 
ಅಳಿಸಿ ಹಾಕಿದಾಂಗ
ಆ ನಿನ್ನ ಪ್ರೀತಿ 
ನೆನಪು ಬಂದಾಗ 
ದು:ಖದ ನೆಪಕೆ 
ಕಣ್ಣೀರು ಹರೆದಾಗ 
ನೀನಿಲ್ಲದ ಜೀವ 
ಬತ್ತಿದ ಹೊಳೆಹಾಂಗ 
ನಿನ್ನ ನಗು ಮುಖವ 
ಕನಸಲ್ಲಿ ಕಂಡಾಗ 
ಚೆಂದಾದ ಮುತ್ತಿಟ್ಟು 
ಪ್ರೀತಿ ಮಾಡಿದಂಗ 
ಒಲವಿನ ದೀಪ 
ಹತ್ತಿ ಉರಿಯುವಾಗ 
ನಾ ಕಂಡ ನನಸಲ್ಲ 
ಕನಸೆಂದು ತಿಳಿದಾಗ 
ಸೋತ ಜೀವದ ಮನ 
ನಿಟ್ಟುಸಿರು ಬಿಟ್ಟಾಗ 
" ನಾ ನಿನ್ನ ನೆನೆದೆ 
  ನೀ ನನ್ನ ಮರೆತೆ 
  ಪ್ರೀತಿಯ ಕೊರತೆ 
  ಕಾಣದ ಬದುಕೇ "


ನನ್ನ ಪ್ರೀತಿಯ ಜೀವ :)

ಗುರುವಾರ, ಅಕ್ಟೋಬರ್ 21, 2010

ಹಾಸ್ಯ ರೋಮಾಂಚನ ಕನಸು

ಒಂದು ದಿನ ಕಾಲೇಜಿಗೆ




ಹುಡುಗಿ ಹೊಸದಾಗಿ ಬಂದಿತ್ತು



ಅವಳ ಸೌಂದರ್ಯ



ವರ್ಣಿಸಲು ಬಾರದಿತ್ತು



ಅವಳನ್ನು ನೋಡಬೇಕೆನಿಸಿತು



ಅವಳನ್ನು ಮಾತಾಡಬೇಕೆನಿಸಿತು



ಮರು ದಿನ ಹಲೋ ಎಂದೆ



ಅವಳು ಹಾಯ್ ಎಂದಳು



ಮತ್ತೊಂದು ದಿನ ಆಯ್ ಲವ್ ಯು ಎಂದೆ



ಅವಳು ಸೇಮ್ ಟು ಯು ಎಂದಳು



ನಮ್ಮಿಬ್ಬರ ಮಿಲನ ಪಾರ್ಕನಲ್ಲಿ ಎಂದೆ



ಅವಳು ಆಗ್ಲಿ ಎಂದಳು



ಮರುದಿನ ನಾನು ಪಾರ್ಕಗೆ ಬಂದೆ



ಅವಳು ಪಾರ್ಕಗೆ ಬಂದಳು



ಇಬ್ಬರೂ ಇದಿರು - ಬದಿರು



ಒಬ್ಬರಿಗೊಬ್ಬರು ನೋಡುತ್ತಾ ಕುಳಿತೆವು



ನೋಡುತ್ತಾ - ನೋಡುತ್ತಾ ನೋಟ ಸಮೀಪಿಸುತ್ತಾ



ಇನ್ನೇನು ಕೈಗೆ ಕೈ ತುಟಿಗೆ ತುಟಿ



ಸೇರಬೇಕೆನ್ನು ವಷ್ಟರಲ್ಲಿ



ಕನಸೊಡೆದೆದ್ದೆ



ಬಚ್ಚಲಿಗೆ ಹೋಗಿ ಬಿದ್ದೆ

ಬುಧವಾರ, ಅಕ್ಟೋಬರ್ 20, 2010

ದೂರಾದ ಪ್ರೀತಿ..

 ಪ್ರೀತಿಯೇ ದೂರವಾದಾಗ

 ಮನಸ್ಸಿನ ಮಿಲನವೆಲ್ಲಿ

 ಸ್ನೇಹವೇ ಮರೆತಿರುವಾಗ

 ಅರ್ಥಿಸುವ ಭಾವಗಳೆಲ್ಲಿ

 ಮನಸ್ಸೇ ನೊಂದಿದಾಗ

 ಖುಷಿಯ ನೆನಪುಗಳಲ್ಲಿ

 ಮೌನವೇ ನೆಲೆಸಿದಾಗ

 ಶಬ್ದಗಳ ಹುಡುಕಾಟವೆಲ್ಲಿ

 ತನುಮನವೇ ಏಕಾಂಗಿಯಾದಾಗ

 ಪ್ರೀತಿಯ ಚಿಹ್ನೆಗಳೆಲ್ಲಿ



ಮಂಗಳವಾರ, ಅಕ್ಟೋಬರ್ 5, 2010

ನೀಡು ಹೊಸ ರೂಪ ಹಾಳಾದ ಮನಕೆ



ದೂರವಾದ ನೆನಪಲ್ಲಿ ಕೊರಗಿ ಪ್ರಯೊಜನವೇನು?
ಬತ್ತಿ ಹೋದ ಬೆಳೆಗೆ ಚಿಂತಿಸಿ ಫಲವೇನು?
ಆರಿ ಹೋದ ದೀಪಕೆ ಬೆಳಕು ಕಾಣುವುದೇನು?
ಅದಕ್ಕೆ 
ಹೊಸ ನೆನಪಿನ ನೆಪದಲ್ಲಿ ನಗುವುದೆ ಜೀವನ
ಹೊಸ ಬೆಳೆಯೆ ಬಿತ್ತುವ ಚಿಂತನೆಯೆ ಜೀವನ
ಸ್ನೇಹದ ದೀಪದಲ್ಲಿ ಪ್ರೀತಿಯ ಬೆಳಕು ಕಾಣುವುದೇ ಜೀವನ.

ಶನಿವಾರ, ಅಕ್ಟೋಬರ್ 2, 2010

ನೆನಪಿನ ಸಂಪುಟ ..


   ಆ ಹಳೆ ನೆನಪುಗಳು ಇಂದು  ಮಾತಾಗಿ ಬಂದವು.ಈ ಕಾಗದಕ್ಕೆ ಹೊಸ ರೂಪ ತಂದವು .ಚಿಕ್ಕವರಿದ್ದಾಗ ಶಾಲೆಯಲ್ಲಿನ ಆ ಹಳೇ ನೆನಪುಗಳೇ ಇವತ್ತು ಹೊಸ ನಗುವಿನ ಉಲ್ಲಾಸ ನೀಡಿದವು .ಶಾಲೆಯ ಎಲ್ಲ ಮಕ್ಕಳಿಗೆ  ಗಾಂಧಿ ಜಯಂತಿ ಎಂದರೆ ಬಲು ಹಿಗ್ಗು  .ಒಂದು ತಿಂಗಳ  ಮುಂಚಿತವಾಗಿಯೇ ನಾವು ದಾರಿ ಕಾಯುತ್ತಿದ್ದೇವು. ನೀವು ನಾನು ಮತ್ತು ನಮ್ಮ ಶಾಲೆಯ ಮಕ್ಕಳು ಗಾಂಧೀಜಿಯವರ ಪ್ರೀಯರೆಂದು  ಭಾವಿಸಿರಬಹುದು .ಆದರೆ ನಿಜವಾದ ಸತ್ಯ ಸಂಗತಿಯನ್ನು ಇಂದು ನೆನಪಿಸಿದರೆ ಮುಖದಲ್ಲಿ ತುಂಬಾ ನಗುವಿನ ನಾಚಿಕೆ ಕಾಣಬಹುದು .
     ಚಿಕ್ಕವರಿದ್ದಾಗ ನಮಗೆ ಅಜ್ಜಿ ಊರಿಗೆ ಹೋಗುವ ಮಹದಾಸೆ ಇರುತಿತ್ತು. ಗಾಂಧಿಜಯಂತಿಯ ನಂತರ ನಮಗೆ ಒಂದು ತಿಂಗಳ ಕಾಲ ರಜೆ ಇರುತಿತ್ತು .ಹೀಗಾಗಿ ನಾವೆಲ್ಲರೂ ಗಾಂಧಿಜಯಂತಿಯ ಸಂಭ್ರಮವನ್ನು ಆಚರಿಸಲು ತಿಂಗಳ ಮೊದಲಿನಿಂದಲೇ ದಾರಿ ಕಾಯುತಿದ್ದೆವು . ಇದಕ್ಕಾಗಿ ಗಾಂಧಿಜಿಯವರು ನಮ್ಮೆಲ್ಲರ ಪ್ರೀಯರಾಗಿದ್ದರು .ಅಕ್ಟೋಬರ್ ೦೨ ರಂದು ನಾವು ಅವರ ಬಗ್ಗೆ ಭಾಷಣ ಹೇಳುತಿದ್ದೆವು ಜೊತೆಗೆ ಅಭಿನಯವನ್ನು ಮಾಡುತಿದ್ದೆವು .ಆ ದಿನದ ವೇಷ ಭೂಷಣ ಬಲು ಆನಂದಮಯವಾಗಿರುತಿತ್ತು ಯಾವುದೋ     ಹುಡುಗನಿಗೆ  ಗಾಂಧೀ ವೇಷ ಧರಿಸಲು ತಲೆ ಬೋಳಿಸುತ್ತಿದ್ದರು. ಹುಡುಗಿಯರು ಖಾದಿ ಬಿಳಿ ಸೀರೆ ಉಟ್ಟು , ಕುಂಕುಮದ ಬೊಟ್ಟಿಟ್ಟು ಭಾರತೀಯ ನಾರಿ ನಾ ಅಬಲೆಯಲ್ಲ ಎಂದು ಎತ್ತಿ ತೋರುವ ಸಂಕೇತ ಕಾಣುತ್ತಿತ್ತು . ಗಾಂಧೀಜಿಯವರ ಪಾತ್ರದ ಸಲುವಾಗಿ ನಾವೆಲ್ಲರೂ ಕೂಡಿ ಚರಕವನ್ನು ಮಾಡುತ್ತಿದ್ದೆವು.
    ಹಳೆಯ ಅಜ್ಜರ ಹತ್ತಿರ ಹೋಗಿ ಅವರ ಕನ್ನಡಕವನ್ನು ಬೇಡುತಿದ್ದೆವು. ಆ ಅಜ್ಜ ಮನಸಿಲ್ಲದೇ ಅಥವಾ ಒಡೆಯುವರೋ ಎಂಬ ಹೆದರಿಕೆಯಿಂದ ಕನ್ನಡಕವನ್ನು ನೀಡುತ್ತಿದ್ದರು . ಆ ಹುಡುಗ ಗಾಂಧಿಜಿಯಾದಾಗ ಕನ್ನಡಕ ಧರಿಸಿದ್ದನ್ನು ನೋಡಿ, ಅಜ್ಜ ನಾನು ಗಾಂಧೀಜಿ ಆಗಬೇಕೆಲ್ಲವೇ ಎಂದು ಕನಸು ಕಂಡು ಮುಗುಳ್ನಗೆ ಬೀರಿದ್ದೇನು ಸುಳ್ಳಲ್ಲ .
    ಗಾಂಧೀಜಿಗೆ ಕೋಲು ಹುಡುಕುವ ಸಲುವಾಗಿ ಅರ್ಧ ದಿನ ಶಾಲೆಗೆ ಚಕ್ಕರ ಹಾಕಿ ಹೊಲದೊಳಗೆ ಆಟವಾಡಿ ಬರುವಾಗ ಕೋಲು ತರುತ್ತಿದ್ದೆವು .ಗಾಂಧಿಜಿಯವರ ಮಿತ್ರರ ಪಾತ್ರದಲ್ಲಿ ಸುಭಾಷ ಚಂದ್ರ ಭೋಸ್ ,ಸರದಾರ್ ವಲ್ಲಭ ಭಾಯಿ ಪಟೇಲ ,ಜವಾಹರ ಲಾಲ ನೆಹರು,ಲಾಲ ಬಹಾದ್ದೂರ ಶಾಸ್ತ್ರೀ ಮುಂತಾದ ಗಣ್ಯ ವ್ಯಕ್ತಿಗಳ ಪಾತ್ರದಲ್ಲಿ ಉಳಿದ ಹುಡುಗರು ಕಾಣುತ್ತಿದ್ದರು .ನಮ್ಮ ಶಾಲೆಗೆ ಅತಿಥಿಗಳಾಗಿ ಬಂದವರು ಗಾಂಧೀಜಿಯವರ ಬಗ್ಗೆ ಮಾತನಾಡುತ್ತಿದ್ದರು .
  ಕಾರ್ಯಕ್ರಮದ ಅಧ್ಯಕ್ಷರೇ ಗುರು - ಹಿರಿಯರೇ , ಶಾಲೆಯ ಮಕ್ಕಳೇ ಇವತ್ತು ಗಾಂಧೀಜಿಯವರ ಹುಟ್ಟುಹಬ್ಬ .ನಮ್ಮ ದೇಶಕ್ಕೆ ಸ್ವಾತಂತ್ರವನ್ನು ತಂದು ಕೊಟ್ಟ ಮಹಾನ್ ವ್ಯಕ್ತಿ .ಗಾಂಧೀಜಿಯವರು ಅಶಾಂತಿಯನ್ನು ಹೋಗಲಾಡಿಸಿದರು ಸತ್ಯವೇ ತನ್ನ ತತ್ವ ಎಂದು ಹೇಳುವಷ್ಟರಲ್ಲಿಯೇ ಸೊಳ್ಳೆಯೊಂದು ನಮ್ಮ ಅತಿಥಿಗಳಿಗೆ ಕಚ್ಚಿತು , ಆಗಲೇ ಅವರು ಹೊಡೆದು ಕೊಂದರು .ನಂತರ ಅಹಿಂಸೆಯ ದಾರಿ ತೋರಿಸಿದ ರಾಷ್ಟ್ರಪಿತ ಎಂದು ಹೇಳಿದರು.ನಮ್ಮ ದೇಶ ರಾಮರಾಜ್ಯವಾಗಲಿ ಎಂದು ಹಾರೈಸಿದರು .
      ಇದರಲ್ಲಿ ಹಿಂದೆ ಕುಳಿತ ಮಕ್ಕಳು ಭಾಷಣ ಮುಗಿದ ನಂತರ ಅಹಿಂಸೆಯ ದಾರಿ ಹೇಳಿ ನಮ್ಮುಂದೆಯೇ ಸೊಳ್ಳೆ ಕೊಂದರಲ್ಲವೇ ಎಂದು ವಕ್ರ ನಗೆ ಬೀರಿದರು. ಆದರೆ ಇದರಲ್ಲಿ ಖುಷಿಯ ಸಂಗತಿ ಏನೆಂದರೆ ನಮ್ಮ ಶಾಲೆಯ ಮಕ್ಕಳು ದೊಡ್ಡವರ ಕಹಿ ಸಣ್ಣ ತಪ್ಪನ್ನು ಕಂಡು ಹಿಡಿದಿದ್ದರು .ತಾವು ಆ ತಪ್ಪು ಮಾಡಬಾರದೆಂದು ನಿರ್ಧರಿಸಿದರು. ಸಣ್ಣ ಪ್ರಾಣಿಯ ಹಿಂಸೆಯೂ ಅಹಿಂಸೆಯನ್ನು ದೂರ ಮಾಡುವುದು ,ಸಣ್ಣ ಸುಳ್ಳು ಸತ್ಯವನ್ನು ಮುಚ್ಚಿಡುವುದು ಮತ್ತು ಸ್ವಲ್ಪ ಕೋಪವೇ ಈ ದೇಶದ ಶಾಂತಿಯನ್ನು ಹೋಗಲಾಡಿಸುವುದು ಎಂದು ಮಕ್ಕಳು ತಮ್ಮ ತಮ್ಮಲ್ಲಿಯೇ ಆಡಿಕೊಳ್ಳುತ್ತಿದ್ದರು .
      ಎಲ್ಲರ ಭಾಷಣ ಮುಗಿದ ನಂತರ ನಮಗೆ ಸಿಹಿಯನ್ನು ಕೊಟ್ಟು ಒಂದು ತಿಂಗಳ ರಜೆಯನ್ನು ಘೋಷಿಸಿದರು . ಹೀಗೆ ನಮ್ಮ ಶಾಲೆಯಲ್ಲಿ ಗಾಂಧೀ ತಾತನ ಹುಟ್ಟುಹಬ್ಬ ಸಂತೋಷದಿಂದ ಆಚರಿಸುತ್ತಿದ್ದೆವು . ಹೀಗೆ ನಮ್ಮ ಶಾಲೆ ನೈತಿಕ ಶಿಕ್ಷಣದ ಕೇಂದ್ರವಾಗಿತ್ತು -ಪ್ರೀತಿಯ ನಂದನವನವಾಗಿತ್ತು . ಇಂದಿನ ದಿನ ನಾನು ನನ್ನ ಶಾಲೆಯ ಹಿಂದಿನ ಆ ದಿನಗಳನ್ನು ನೆನೆದು ಮತ್ತೆ ಚಿಕ್ಕವಳಾಗಬೇಕಲ್ಲವೇ  ? ಎಂದು ಕನವರಿಸಿದೆ. ಹಳೇ ನೆನಪುಗಳನ್ನು ನಿಮ್ಮೆಲ್ಲರ ಮುಂದೆ ಹೇಳಿ ನಾನು ಖುಷಿ ಪಟ್ಟೆ.

ಎಲ್ಲರಿಗೂ ಮಹಾತ್ಮಾ ಗಾಂಧೀಜಿ ಹುಟ್ಟುಹಬ್ಬದ ಶುಭಾಶಯಗಳು