ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಶುಕ್ರವಾರ, ಆಗಸ್ಟ್ 13, 2010

ನನ್ನ ಭೂಮಿ

ಹೆಮ್ಮೆಯಿಂದ ಹೇಳುವೆ ನಾನು

ಸ್ವಾತಂತ್ರ ದಿನವು ಇಂದು

ಗೌರವದಿಂದ ಮೆಚ್ಚುವೆ ನಾನು

ಭಾರತೀಯನಿರುವೆ ಎಂದು ..

ಒಳ್ಳೆಯ ವಿಚಾರಗಳ

ಪ್ರೀತಿಯ ಹೃದಯಗಳ

ಅಹಿಂಸೆ ತತ್ವ ಹೇಳುವ

ಮತ್ತು ಸತ್ಯವನ್ನೇ ಸಾರುವ

ಭಾರತ ದೇಶವು ಒಂದು ..

ಶಾಂತಿಯ ನೆಲೆಯಿರುವ

ಒಕ್ಕೂಟ ಸಮಾಜದ

ಪ್ರಜೆಗಳೇ ಆಡುವ

ಭೂಮಿಯೇ ಭಾರತವಿದು..

ಭವ್ಯಾತ್ಮರು ಹುಟ್ಟಿದ

ಧರ್ಮವನ್ನು ನಡೆಯುವ

ಜಾತಿ ಭೇದವಿಲ್ಲದ

ಇದೊಂದೇ ಭವ್ಯ ಭೂಮಿಯಿದು ..

ಇದೆ ರಾಷ್ಟ್ರಭೂಮಿ

ಇದೆ ಪ್ರೇಮಭೂಮಿ

ಇದೇ ನನ್ನ ಭೂಮಿಯಿದು

ಜೈ ಭಾರತವಿದು..

ಜೈ ಹಿಂದ್  ...

ಸೋಮವಾರ, ಆಗಸ್ಟ್ 9, 2010

ಬೃಂದಾವನ...ಬಣ್ಣ ಬಣ್ಣದ ಮೀನು 
ಮಿಂಚಿ ಮಿರುಗುವ ಕಣ್ಣು 
ಅದರ ಜೊತೆಗಿನ ಆಟ
ನಯನಗಳ ಬಲು ಓಟ 
ಮುತ್ತು ಕೊಡಲು ಬಂದೆವು 
ಮುಟ್ಟಿ ನೋಡು ಎಂದವು 
                                 ಪ್ರೀತಿ ಮಾಡಿದ ಹಾಗೆ ಕಣ್ಣೋ೦ದು  ಹೊಡೆದವು 
                                          ಬೃಂದಾವನದ ಮೀನುಗಳು ಈ ರೀತಿ ಕಂಡವು 
ಹಸಿರು ಹುಲ್ಲಿನ ಹೊದಿಕೆ 
ಅಪ್ಪಿಕೊಳ್ಳುವ ಬಯಕೆ 
ಮಂಜು ಹನಿಗಳ ಮುತ್ತು 
ನಕ್ಷತ್ರ ಕಾಣುವುದು ಗಮ್ಮತ್ತು 
ಅರಳಿದ ಹೂಗಳ ನಗುವು 
ಪ್ರೀತಿಯ ನೋಟದ ಮಿಲನವಾಗಿತ್ತು
                                             ನಿಸರ್ಗದ ಸುಖವನ್ನು ಅನುಭವಿಸು ಎಂದವು 
                                             ಬೃಂದಾವನದ ಹಸಿರು ಉಸಿರಲ್ಲಿ ಕಂಡೆವು 
                                                
ಕಾರಂಜಿಯ ರಂಗು ಕಾಮನಬಿಲ್ಲು 
ಚಿಮ್ಮುವ ವೇಗ ಜಿಂಕೆಯ ಮೇಲೂ 
ಹನಿಯ ಸ್ಪರ್ಶ ಸುಖದ  ಸಂಕೇತ 
ಅಲ್ಲಿಯ ನೋಟ ಪ್ರೀಯ ಅತ್ಯಂತ 
ನಾದಕ್ಕೆ ತಾಳ ಹಾಕುವ ಕಾರಂಜಿಯಿದು
ಕಣ್ಣಿನ ಆತ್ಮಕ್ಕೆ ಪುನ್ಯಕೊಟ್ಟ ಸ್ಥಳವಿದು 
                                        ಕಾರಂಜಿಯ ನೋಡಿ ನೀ ನಲಿದಾಡು ಅಂದವು 
                                        ಬೃಂದಾವನದ ಕಾರಂಜಿಗೆ ನಾವೆಲ್ಲರೂ ಮೈನೀದವು 

ಕೃಷ್ಣಸಾಗರ ನಿರ್ಮಿಸಿರುವ ಪುನ್ಯಾತ್ಮನಾರು
ಸರ್.ಎಂ.ವಿಶ್ವೇಶ್ವರಯ್ಯರನ್ನು ಮರೆಯುವರಾರು 
ಕನ್ನಡ ನಾಡಿನ ಹೆಮ್ಮೆಯ ಪುತ್ರ ನೀನು 
ಮೈಸೂರಿನ ಖ್ಯಾತಿಗೆ ಶ್ರಮಿಸಿದ ಕೀರ್ತಿವಂತ ನೀನು 
ಇಲ್ಲಿಯ ಹಸಿರು ನಿನ್ನ ಉಸಿರು 
ನೀರು ಕಾರಂಜಿ  ನಿನ್ನ ಕಣ್ಣು 
ಈ ಕೃಷ್ಣಸಾಗರ ನಿನ್ನ ದೊಡ್ಡ ಮನಸ್ಸು 
                                             ಬೃಂದಾವನದ ಸೊಗಸು ನಿನ್ನ ನನಸಾದ ಕನಸು 
                                             ಈ ಬೃಂದಾವನ ಕಂಡು ನನ್ನ ಮನ ನುಡಿಯಿತು 


ನನ್ನ ಪ್ರೀತಿಯ ಜೀವ :) 


ಗುರುವಾರ, ಆಗಸ್ಟ್ 5, 2010

Mobile Mobile Mobile...


ಎಲ್ಲರಿಗೂ ಇರುವುದು ಒಂದೇ ಹುಚ್ಚು
ಆಧುನಿಕ ಕಾಲದ ಮೊಬೈಲ್ ಹುಚ್ಚು
ಊಟ ನಿದ್ರೆ ಮಾಡದೆ ಕಷ್ಟಪಡುವರಿಲ್ಲಿ
ಮೆಸೇಜ್ ಫೋನಿನಿಂದ ಹಾಳಾಗುವರಿಲ್ಲಿ
ಹುಡುಗ ಹುಡುಕಿದ ಹುಡುಗಿ ನಂಬರ
ಫೋನ ಹಚ್ಚುವುದೇ ಅವನ ಆತುರ
ಅವಳ ಬೈಗುಲ್ ಅವಳಿಗಿಂತ ಸುಂದರ
ಕಾಲೇಜ್ ಹುಡುಗರು ಬಳಿಸುವುದು ಬಲು ಹೆಚ್ಚು
ಕಾರಣ ಹುಡುಗಿಯರ ಸಂಖ್ಯೆಯೇ ಅಷ್ಟು
ಮಗು ಮೊದಲು ಅಮ್ಮ ಎಂದು ಅತ್ತರೆ
ಈಗ ಮೊಬೈಲ್ ಕೊಟ್ಟರೆ ಅದರ ನಗು ಸಕ್ಕರೆ
ಅಮ್ಮಗೆ ಅಳಿಯನ ಹುಡುಕುವ ಚಿಂತೆಯಿಲ್ಲ
ಮಗಳಿಗೆ ಗಂಡನ ಮನೆಯ ಭಯವಿಲ್ಲ
ಅಮ್ಮ ಕಲಿಸುವಳು ಅಡುಗೆ ಮೊಬೈಲಿನಲ್ಲಿ
ಭೇಶ ಎಂದರು ಗಂಡನ ಮನೆಯಲ್ಲಿ
ಅಭ್ಯಾಸಕ್ಕಾಗಿ ಸ್ಟಡಿ ರೂಮ್ ಇಲ್ಲವಾದರೂ ನಡೆಯುತ್ತೆ
ಮಾತನಾಡಲು ಮೊಬೈಲ್ ಜೊತೆ ಪರ್ಸನಲ್ ರೂಮ್ ಬೇಕಂತೆ
ಹುಡುಗಿಯ  ಮೆಸೇಜ್ ಬಂದರೆ ಸಾಕು ಹುಡುಗ ಬಾಯಿ ಬಿಡುವಾನಲ್ಲಿ
sms ನಲ್ಲಿ I ಲವ್ U ಅಂದರೆ ಹುಡುಗಿ ನಾಚುವಳಲ್ಲಿ
ಊಟವಿಲ್ಲದರೂ ಜೀವನ ನಡೆಸುವರು
ಮೊಬೈಲ್ ಇಲ್ಲದ ಮನುಷ್ಯರು ಕಾಣಿಸಲಾರರು
ಆಧುನಿಕದ ಪ್ರಸಿಧ್ಧವಾದ ಸಂಗತಿ ಹೆಚ್ಚು
ಅದೆಂದರೆ ಮನುಷ್ಯರಿಗಿರುವ ಮೊಬೈಲ್ ಹುಚ್ಚು

ನನ್ನ ಪ್ರೀತಿಯ ಜೀವ :)

नात / पैसा


नाते ह्या शब्दाचा पूर्ण अर्थ
नात्यान्नाच संबंध म्हणतात
आणि संबंधान्ना प्रेमाच बंध म्हणतात
पैसासाठी माणसाला पण विकतात
प्रेमाच व् पैसेच्या नात लावतात
पैस्याने  नात बनत नसत
नात्यान प्रेम वाडत असत
पिसाने वस्तुला विकत घेवु शकतो
नात्यान फ़क्त प्रेमाला मिळवू शकतो
पैसा नसेल तर किम्मत नाही  मिळत
नात नसेल तर प्रेम नाही मिळत
प्रेम असेल तर भिकारिशी पण नात बनत
सगाल्यान्च्या कड़े पैसे नसत
जिथे असत तिथे व्यवहार असत
आणि काहिंदा जिथे नसत तिथे प्रेमाच मायेच नात असत

माझा जीवा :)

कोणी - नाही ..

राजनीति हा खेळ काडला कोणी
जिंकू या हारू स्पर्धाला खेळनारेच नाही
गांधीजी'च्या  तत्वाला वाचणारे कोणी
शांतपनाने सांभाळनारे जगात कोणच नाही
मानूसकिच्या धर्माला समजून घेणार कोणी
राग-द्वेष्यचा ह्या झाडाला प्रेम मिळनार   नाही
नेतंच्या रामराज्यचा स्वप्न पूर्ण करणार कोणी
सर्व धर्म समानाचे अर्थ समजणार नाही
मंत्र्यांच्या स्वार्था मध्ये जगाला सुधारणार कोणी
ह्या जगात आता सत्याला किम्मत राहिला नाही
राजकारणाला सरकार म्हणूनी जागा दिलेल कोणी
मनात गुन्तलय हा प्रश्न कधीच सुटत नाही

माझा जीवा :)

ನಾ ಕಂಡ ಕನಸು ..


ನೀ ಬಂದೆ ನಾ ಕಂಡ ಕನಸಲ್ಲಿ
ಹೂ ಆಗಿ ಅರಳಿದೆ ನನ್ನ ಹೃದಯದಲ್ಲಿ
ದುಂಬಿಯಾಗಿ ಮಧುರ ಹನಿ ಹೀರಿದೆ
ನನ್ನ ಪ್ರೀತಿಯ ಅಮೃತ ನೀ ಸವಿದೆ

ನೀ ಬಂದೆ ನಾ ಕಂಡ ಕನಸಲ್ಲಿ
ಮಧುಚಂದ್ರನ ಬೆಳಕಿನ ಹೊತ್ತಿನಲ್ಲಿ
ನಕ್ಷತ್ರದ ಹಾಗೆ ಭಾವನೆಗಳ ಮಿಂಚು
ಮಿಲನವಾಯಿತು ನಮ್ಮ ಮನ ಹುಣ್ಣಿಮೆಯಿತ್ತು

ನೀ ಬಂದೆ ನಾ ಕಂಡ ಕನಸಲ್ಲಿ
ಮುಂಗಾರು ಮಳೆಯ ಮೋಡದಲ್ಲಿ
ಹನಿಯ ಸ್ಪರ್ಶದ ಸುಖ ಬಹಳ ಸುಂದರವಾಗಿತ್ತು
ನಮ್ಮ ಪ್ರೀತಿಯ ಒಲುಮೆಯ ಸಂಕೇತವಾಗಿತ್ತು

ನೀ ಬಂದೆ ನಾ ಕಂಡ ಕನಸಲ್ಲಿ
ಅಪ್ಪಿಕೊಂಡಿದ್ದೆ ನೀ ನನ್ನ ಮನದಲ್ಲಿ
ಮಾತಿಲ್ಲದ ಮೌನದ ಸಂಜೆಯಾಗಿತ್ತು
ನಿನ್ನ ನೆನಪಿನ ಬಿರುಗಾಳಿ ಬೀಸಿತ್ತು

ನನ್ನ ಪ್ರೀತಿಯ ಜೀವ :)

समाधानाची बोली..

 मनाचे प्रष्न सोडवू कसे कलेण
मलाच मी शोधू कुठे कलेण
विचारंचा यात्रेत मी हरवली आहे
प्रेमाच्या बंधनात मी  गुंतावली   आहे
कुठे कसे आहे मी कलेन मला
सांगू तरी सगळ कस समजेन  तुला
आठवणी'ची झाड आज लावली आहे
आपलापनाच नात मी जोडली आहे
मी कशी आहे इथे ते तुला कल्णार नाही
माझ प्रेम किती रुतलय समजणार नाही
तू माझा म्हणून स्वार्थ केलि आहे
तू मला न समजता दु:ख दिलेल आहे
स्वतःचाच जीवाला त्रास केलेल आहे
विसरु नको कधी दोन देह पण एक जीव आहे 
तुला प्रेम देणार ह्या जगात हे एकच जीव जगत आहे 

माझा जीवा :)

प्रेमळ मैत्री


माझा मित्र तू माझा जीव तू
आहेस फ़क्त माझाच तू
जगाला आपली मैत्री वाटते
जीवलाच माहिती किती प्रेम करते
दूर राहून समजत असते
जवळ असून पण काळात नसते
रादावास झाल तर तेच्या फुडेच रडते
मी खुश असले की तेला पण हसवते
करमल नाही की खूप आठवण येते
आठवण आली की भेटू सारख वाटते
भेटून खूप काही बोलू असे होते
माझ्या साथी तू आहेस असे वाटते
प्रेमळ मैत्रिच बंधन आपल्यात दिसून येते

माझा जीवा :)

ಬುಧವಾರ, ಆಗಸ್ಟ್ 4, 2010

ಕಿವಿ ಮಾತು (ಮೋಸದ ಪ್ರೀತಿಗೆ)

 
ಅರಿಯದೆ ಮೋಸದ ಪ್ರೀತಿಯ ನ0ಬದಿರಿ
ನಂಬಿಕೆಯೆಂಬ ಕಾಣಿಕೆ ಮುಕ್ತವಾಗಿ ನೀಡದಿರಿ
ಹೃದಯ ತುಂಬಿ ಪ್ರೀತಿ ಹೆಸರು ಬರೆಯದಿರಿ
ಅಮ್ಮ- ಅಪ್ಪನ ಮರ್ಯಾದೆ ಬೀದಿ ಪಾಲು ಮಾಡದಿರಿ
 
ಬಹಿರಂಗ ಪ್ರೀತಿಯನ್ನು ನೀವು ನಂಬದಿರಿ
ಪ್ರೀತಿಯಲ್ಲಿ ಸೌಂದರ್ಯಕ್ಕೆ ಮೋಡಿಯಾಗದಿರಿ
ಬಂಧನಗಳನ್ನು ತೊರೆದು ಪ್ರೀತಿ ಮಾಡದಿರಿ
 
ಪ್ರೀತಿಯ ಮಂದಿರದ ಮೆಟ್ಟಲನ್ನು ಹತ್ತದಿರಿ
ನಿಜವಾದ ಪ್ರೀತಿ ಮೋಸಮಾಡುವುದಿಲ್ಲ ತಿಳಿಯಿರಿ
ದ್ವೇಷವು ಪ್ರೀತಿಯ ಅಂಗವಲ್ಲ ಗೊತ್ತಿರಲಿ
ಕನಸು ಒಡೆದರೆ ನಿಮಗಾಗಿ ಅಳುವರಾರಿಲ್ಲಿ
 
ಪ್ರೀತಿಯಲ್ಲಿ ತಪ್ಪು ಹೆಜ್ಜೆ ತಪ್ಪಿಯೂ ಇಡದಿರಿ
ಜೀವನದಲ್ಲಿ ಪ್ರೀತಿಗೆ ಮೋಸ ಹೋಗದಿರಿ
ಪ್ರೀತಿಗಾಗಿ ವಿಷ ಕುಡಿದು ಸಾಯದಿರಿ
ನಿಮ್ಮ ಜೀವನಕ್ಕೆ ಮೋಸದ ಪ್ರೀತಿಯ ಬೆಂಕಿ ಹತ್ತದಿರಲಿ
 
ನನ್ನ ಪ್ರೀತಿಯ ಜೀವ :)