ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಶನಿವಾರ, ಜನವರಿ 29, 2011

ನೀ ಎಲ್ಲಿ ಹೋದೆ?ಬಿಟ್ಯಾಕೋದೆ ನನ್ನ ಬಿಟ್ಯಾಕೋದೆ
ಕೊಟ್ಯಾಕೋದೆ ಪ್ರೀತಿ ಕೊಟ್ಯಾಕೋದೆ

ಹೃದಯದಲ್ಲಿ ಬಂದೆ
ಪ್ರೇಮ ಗೀತೆ ಅಂದೆ
ನನ್ನ ಜೀವ ಕದ್ದು ಹೋದೆ
ಬಿಟ್ಯಾಕೋದೆ ನನ್ನ ಬಿಟ್ಯಾಕೋದೆ
ಕೊಟ್ಯಾಕೋದೆ ಪ್ರೀತಿ ಕೊಟ್ಯಾಕೋದೆ

ಪ್ರೇಮದ ಕಥೆ ಹೇಳಿದ್ದೆ
ನಗಿಸಿ ನಲಿದಾಡಿದ್ದೆ
ಮನಸ್ಸಿಗೆ ಗಾಯ ಮಾಡಿ ಹೋದೆ
ಬಿಟ್ಯಾಕೋದೆ ನನ್ನ ಬಿಟ್ಯಾಕೋದೆ
ಕೊಟ್ಯಾಕೋದೆ ಪ್ರೀತಿ ಕೊಟ್ಯಾಕೋದೆ

ಮೆಲ್ಲನೆ ಅಪ್ಪಿದ್ದೆ
ಬೇಡೆಂದರೂ ಮುತ್ತು ನೀಡಿದ್ದೆ
ಏಕಾಂಗಿಯಾಗಿ ಮಾಡಿ ಹೋದೆ
ಬಿಟ್ಯಾಕೋದೆ ನನ್ನ ಬಿಟ್ಯಾಕೋದೆ
ಕೊಟ್ಯಾಕೋದೆ ಪ್ರೀತಿ ಕೊಟ್ಯಾಕೋದೆ

ನನ್ನ ನೆರಳಾಗಿ ಕಾಣಿಸಿದ್ದೆ
ಪ್ರೇಮಲೋಕಕ್ಕೆ ಕರೆದೋದಿದ್ದೆ
ಪ್ರೀತಿ ಮರೆತು ಕೊಲೆ ಮಾಡಿ ಹೋದೆ
ಬಿಟ್ಯಾಕೋದೆ ನನ್ನ ಬಿಟ್ಯಾಕೋದೆ
ಕೊಟ್ಯಾಕೋದೆ ಪ್ರೀತಿ ಕೊಟ್ಯಾಕೋದೆ

ನಗುವೊಂದಿದ್ದರೆ

ನಗುವೊಂದಿದ್ದರೆ ಸಾಕು
ಬಾಳಾಗುವುದು ಬೆಳಕು

ಮೊಗದಲಿ ನಗುವಿದ್ದರೆ
ಅರಳುವುದು ಮನಸು
ಕಾಣುವುದು ಕನಸು
ಜೀವನ ನನಸು

ಮೊಗದಲಿ ನಗುವಿದ್ದರೆ
ವೀಣೆಯು ಬಾರಿಸಿದಂತೆ
ಬಯಕೆಯು ಚಿಗುರಿದಂತೆ
ಜೀವನ ಹೊಳೆದಂತೆ

ಮೊಗದಲಿ ನಗುವಿದ್ದರೆ
ದು:ಖವೆಲ್ಲ ಮಾಯವು
ಖುಷಿಯೆಂಬ ತಾಣವು
ಸಂಗೀತದ ಗಾನವು

ಮೊಗದಲಿ ನಗುವಿದ್ದರೆ
ಸ್ನೇಹವು ವಿಶ್ವಾಸದಂತೆ
ಸುಂದರ ಪ್ರೀತಿಯಂತೆ
ಭೂಮಿಯು ಸ್ವರ್ಗದಂತೆ

ನಗುವೊಂದಿದ್ದರೆ ಸಾಕು
ಬಾಳಾಗುವುದು ಬೆಳಕು


ಪ್ರೀತಿಯ ಕನಸು


ಚೆಂದಾದ ಕನಸೊಂದು ಕಂಡಿದ್ದೆ
ಚಂದ್ರನ ಬಳಿಗೆ ನಾ ಹೋಗಿದ್ದೆ
ಬೆಳ್ಳಿ ರಥದಲಿ ಕುಳಿತಿದ್ದೆ
ನಕ್ಷತ್ರದ ಹಾಗೆ ಹೊಳೆದಿದ್ದೆ
ಮೋಡಕ್ಕೆ ಬಣ್ಣ ಬಳಿದಿದ್ದೆ
ರಂಬೆ ಊರ್ವಶಿ ಅಪ್ಸರೆಯಾಗಿದ್ದೆ
ನಾದ ಹಾಕುತ್ತ ಹೆಜ್ಜೆ ಹಾಕಿದ್ದೆ
ಸಂಗೀತ ಕಲರವ ಬೀರಿದ್ದೆ
ಪ್ರಿಯತಮನ ಹೃದಯ  ಗೆದ್ದಿದ್ದೆ
ಕದ್ದು ನೋಡಿ ನಾ ನಕ್ಕಿದ್ದೆ
ನಯನಗಳ ಆಟಿನಲಿ ಸೋತಿದ್ದೆ
ಬಳಿ ಬಂದು ಕರೆದಾಗ ನಾಚಿದ್ದೆ
ಪ್ರೇಮಲೋಕದ ಚಿತ್ರ ಬಿಡಿಸಿದ್ದೆ
ಪ್ರೀತಿಯಲ್ಲಿ ನಾ ಮುಳಿಗಿದ್ದೆ
ಸ್ವರ್ಗದ ಸುಖವ ಕಾಣಿದ್ದೆ
ಪ್ರಣಯನ ಅಮೃತ ಹನಿ ಸವಿದಿದ್ದೆ
ಹುಣ್ಣಿಮೆ ರಾತ್ರಿ ಮಂಚದಲಿ  ಮಲಗಿದ್ದೆ
ಚೆಂದಾದ ಕನಸೊಂದು ಕಂಡಿದ್ದೆ

ಬುಧವಾರ, ಜನವರಿ 26, 2011

ನಲ್ಲನಿಗೊಂದು ನೆಲುಮೆಯ ಪತ್ರ..

           
            ನನ್ನ ಪ್ರೀತಿಯ ನಲ್ಲನಿಗೆ ಇಂದು ಪ್ರೀತಿಯ ನೆನಪುಗಳ ಕಾಣಿಕೆ. ಇವತ್ತಿನ ದಿನ ಬಹಳ ಸುಖಮಯ ಸಂತೋಷದಿಂದ ಕೂಡಿದ ದಿನ. ನನ್ನ ನಿಮ್ಮ ಮಿಲನವಾಗಿ ಒಂದು ವರ್ಷ ಕಳೆದವು. ಪ್ರೀತಿಯ ಚೆಲ್ಲಾಟದಲ್ಲಿ ದಿನಗಳು ಮಿಂಚಿನಂತೆ ಹೊಳೆದು ಹೋದವು. ನಾವು ಕಳೆದ ಪ್ರತಿ ಕ್ಷಣದ ಮೊತ್ತ ಮುತ್ತಾಗಿತ್ತು. ನಮ್ಮ ಕೋಪವು ಪ್ರೀತಿಯ ಸಂಕೇತವಾಗಿತ್ತು. ಜಗಳವು ನಮ್ಮ ಸರಸದ ಗುರುತಾಗಿತ್ತು. ಮನಸ್ಸಾರೆ ಪ್ರೀತಿಸುವ ಹುಡುಗಾಟವೇ ನಮ್ಮ ಮುದ್ದು ಪ್ರೀತಿಯ ಗುರಿಯಾಗಿತ್ತು. ಎಲ್ಲದಕ್ಕೂ ಮಿಗಿಲಾಗಿ ಸ್ನೇಹದ ಮುಟ್ಟಿಲುಗಳನ್ನು ಹತ್ತಿ ಸ್ನೇಹಲೋಕದಲ್ಲಿ ಪ್ರೇಮಲೋಕವನ್ನು ಸೃಷ್ಟಿಸಿದೆವು. ಜಗತ್ತಿನಲ್ಲಿರುವ ಎಲ್ಲ ಸುಖವನ್ನು ನಮ್ಮ ಸ್ವರ್ಗವಾದ ಜೀವನದಲ್ಲಿ ಕಾಣುವೆವು. ಪ್ರಪಂಚದಲ್ಲಿರುವ ಶ್ರೇಷ್ಠ ಅಮರ ಪ್ರೀತಿ ಪಾತ್ರರಲ್ಲಿ ನಮ್ಮಿಬ್ಬರ ಹೆಸರು ಕೆತ್ತಿದೆವು. ಎರಡು ಜೀವ - ಒಂದೆ ಉಸಿರು ನಮ್ಮ ಪ್ರೀತಿ ಎಂದು ತಿಳಿದೆವು.
               ಕೆಲವು ನುಡಿಮುತ್ತುಗಳು ನನ್ನ ಜೀವದಲ್ಲಿರುವ ನಿಮ್ಮ ಉಸಿರಿಗಾಗಿಃ-ಯಾವ ಜನುಮದ ಪ್ರೀತಿಯ ಬಂಧ ತಿಳಿಯಲಾರೆ,ಯಾವ  ರೀತಿಯ ಪುಣ್ಯ ಫಲ ತಿಳಿಯಲಾರೆ,ನೀವು ನನ್ನನ್ನು ನಿಮ್ಮ ಜೀವನ ಸಂಗಾತಿಯೆಂದು ಭಾವಿಸಿದರೊ ಆ ಕ್ಷಣದಿಂದ ಪ್ರತಿ ಕ್ಷಣವು ಬಹಳ ಅಮೂಲ್ಯವಾದುದು. ನನ್ನ ಮನಸ್ಸಿನ ಮುಂದೆ ನಿಮ್ಮ ಹೃದಯ/ಮನಸ್ಸು ಬಹಳ ದೊಡ್ಡದು. ನಾನು ನಿಮ್ಮನ್ನು ಪತಿಯ ಬದಲಾಗಿ ಪ್ರಿಯತಮ ಎಂದು ಪ್ರೀತಿಸಿರುವೆ. ನೀವು ಕೂಡ ನನ್ನನ್ನು ಬಹಳ ಪ್ರೀತಿಸುತ್ತೀರಿ ಎಂದು ನನ್ನ ಪುಟ್ಟ ಮನಸ್ಸಿಗೂ ತಿಳಿದಿದೆ.
              ನಿಮ್ಮ ಜೊತೆ ಕಳೆದ ಪ್ರತಿ ಕ್ಷಣವು ಅಮರವಾದುದು. ಗೂಡಿನಲ್ಲಿರುವ ಎರಡು ಪಕ್ಷಿಗಳ ಚಿಲಿಪಿಲಿ ಗಾಣದ ಶಬ್ದ ನಮ್ಮ ಗೂಡಲ್ಲಿ ಕೇಳುವುದು. ಇನ್ನೂ ಕೆಲವು ದಿನಗಳ ನಂತರ ಆ ಗೂಡಲ್ಲಿ ಪ್ರೀತಿಯ ಮುದ್ದಾದ ಮರಿಯೊಂದು ಜನಿಸುವುದು. ಅದೆ ನನ್ನ ನಿಮ್ಮ ಪ್ರೀತಿಯ ನಿಜವಾದ ಸಂಕೇತವು. ನಿಮ್ಮ ಸುಃಖ ದುಃಖ ನನ್ನದಾಗಿದೆ. ನಿಮ್ಮ ಉಸಿರು ನನ್ನ ಜೀವವಾಗಿದೆ. ನಿಮ್ಮ ಪ್ರೀತಿ ನನಗೆ ಜೀವನವಾಗಿದೆ.
              ಈ ದಿನ ದೇವರಲ್ಲಿ ಒಂದೇ ಪ್ರಾರ್ಥನೆ ನನ್ನ ನಲ್ಲನನ್ನು ಸಂತೋಷದಿಂದಿಡು ಮತ್ತು ನನ್ನ ಕುಂಕುಮ ಸೌಭಾಗ್ಯವು ಪ್ರೀತಿಯ ಹಾಗೆ ಅಮರವಾಗಿರಲಿ ಮತ್ತು ಸಂತೋಷ ನಕ್ಷತ್ರದ ಹಾಗೇ ಹೊಳೆಯತಿರಲಿ.


MADE FOR EACH OTHER

ಸೋಮವಾರ, ಜನವರಿ 24, 2011

ಮುಂಜಾವು

ಮಂಜು ಮುಸುಕಿದ ಮುಂಜಾವಿನಲಿ
ಕೊಗಿಲೆವೊಂದು  ಕೂಗುತಿದೆ
ಪ್ರೀತಿ ನೆನಪನ್ನು ಹೆಕ್ಕಿ ಹುಡುಕುತಿದೆ
ಚಿಟ್ಟೆಯು ಮಕರಂದ ಹೀರಲು ಹೊರಟಿದೆ
ಮೊಗ್ಗು ಅರಳಿ ಹತ್ತಿರ ಬಾ ಎಂದು ಹೇಳಿದೆ
ಹಸಿರೆಲೆಗಳು ಇಬ್ಬನಿಯ ಹನಿಯಲಿ
ಸೂರ್ಯನ ಬೆಳಕಿಗಾಗಿ ಕಾಯುತಿದೆ
ಮಂದವಾದ ತಂಪು ಸೂಸಿ
ಮೌನದ  ಮಾತು ನಿಸರ್ಗ ಆಡುತಿದೆ

ಮೊದಲ ಸಲ


ಮೊದಲ ಸಲ
ನಾ ನಿನ್ನ ಕಂಡಾಗ
ನೀ ನಕ್ಕಿದ್ದೆ ಮೋಡಿ ಮಾಡಿ
ನಾ ನಾಚಿದ್ದೆ ಸನ್ನೆ ಮಾಡಿ
ಮೊದಲ ಸಲ
ನೀ ಅಪ್ಪಿಕೊಂಡಾಗ
ನಾ ಓಡಿದ್ದೆ ಮುತ್ತು ನೀಡಿ
ನೀ ಬಳಿ ಬಂದೆ ಕಾಡಿ ಬೇಡಿ
ಮೊದಲ ಸಲ
ನಾ ಪ್ರೀತಿಸಿದಾಗ
ನೀ ಕಂಡಿದ್ದೆ ಸ್ವರ್ಗ ಮಹಡಿ
ನಾ ಬಂದಿದ್ದೆ ತನುವ ಮುದುಡಿ
ಮೊದಲ ಸಲ
ನೀ ಖುಷಿಯಾದಾಗ
ನಾ ಕುಣಿದಿದ್ದೆ ಅಪ್ಸರೆಯಾಗಿ
ನೀ ವರ್ಣಿಸಿದ್ದೆ ಕವಿಮನವಾಗಿ 

ಸಾಕಾದ ಜೀವನ


ಮುದುಡಿದ ಮನ
ನೂಕುತಿದೆ ಕ್ಷಣ
ಕರೆದರೂ ಬಾರದ ಶಾಂತಿ
ಏಕಾಂಗಿ ಎಂಬ ಭ್ರಾಂತಿ
ಬತ್ತಿದೆ ಪನ್ನೀರು
ಕಾಣಿಕೆಗೆ ಕಣ್ಣೀರು
ಹೃದಯ ಬಡಿತ ನಿಂತರು
ಜೀವನ ಸಾಗಿದೆ ತುಂತುರು
ಆಳವಾದ ಚಿಂತೆ
ಕಷ್ಟಗಳ ಸಂತೆ
ನಾನಾದೆ ಸುಡುವ ಚಿತೆ
ಜೀವನವೇ ದು:ಖದ ಕಥೆ 

ಕಾಯುತ್ತಿರುವೆ ನಿನಗಾಗಿ


ಹುಣ್ಣಿಮೆ ಚಂದ್ರನ ರಾತ್ರಿಯಲಿ
ನಕ್ಷತ್ರಗಳು ಹೊಳೆಯುತಲಿ
ನಾ ಕಂಡೆ ನಿನ್ನ ಬಾನಿನಲಿ
ಕಾಯುತ್ತಿರುವೆ ನೀ ಪ್ರೀತಿಯಲಿ

ಧರೆಗಿಳಿದು ಬಂದೆ ಕನಸಿನಲಿ
ನನ್ನವನಾದೆ ನೀ ಮನಸಿನಲಿ
ಪ್ರೀತಿ ಮಾತು ಹೇಳಿದೆ ರಾತ್ರಿಯಲಿ
ಹೃದಯ ಕದ್ದು ಮಾಯವಾದೆ ಮುಂಜಾವಿನಲಿ

ನಾ ಹುಡುಕುತಿರುವೆ ಲೋಕದಲಿ
ಒಮ್ಮೆ ಕಾಣಿಸು ಸತ್ಯದಲಿ
ಜೀವದ ಗೆಳೆಯ ನೀ ಸ್ನೇಹದಲಿ
ಬಾ ಪ್ರೀತಿಸುವಾ ಹೃದಯದಲಿ 

ಮಿಲನದ ಭಾವ


ಮದುವೆಯ ನಂತರ ಮಿಲನವಾಗುವುದು
ಎರಡು ಮನಸ್ಸಿನ ಭಾವನೆಗಳು
ಸಿಹಿ-ಕಹಿ ಹಂಚುತ್ತ
ಪ್ರೀತಿ ಕೋಪ ಮಾಡುತ್ತ
ಭಾವನೆಗಳ ಸುರಿಮಳೆಯಿಂದ
ಕನಸಿನ ಲೋಕವನ್ನು ನೋಡುತ್ತ
ಬಣ್ಣ ಬಂನಾಗಿರುವ ಜೀವನವನ್ನು ಕಲ್ಪಿಸುವುದೇ
ಈ ಎರಡು ಪ್ರೀತಿಯ ಮನಸ್ಸಿನ ಭಾವನೆಗಳು 

ಸಕಾರಾತ್ಮಕ ಭಾವ


ದೂರವಾದ ನೆನಪಲ್ಲಿ ಕೊರಗಿ ಪ್ರಯೋಜನವೇ
ಬತ್ತಿ ಹೋದ ಬೆಲೆಗೆ ಚಿಂತಿಸಿ ಫಲವೇ
ಆರಿ ಹೋದ ದೀಪಕೆ ಬೆಳಕು ಕಾಣುವುದೇ
ಇಲ್ಲವಲ್ಲ
ಹೊಸ ನೆನಪಿನ ನೆಪದಲ್ಲಿ ನಗುವುದೇ ಜೀವನ
ಹೊಸ ಬೆಳೆಯ ಬಿತ್ತುವ ಚಿಂತನೆಯ ಜೀವನ
ಸ್ನೇಹದ ದೀಪದಲ್ಲಿ ಪ್ರೀತಿಯ ಬೆಳಕು ಕಾಣುವುದೇ ಜೀವನ
ಬಯಕೆಯ ಬಳ್ಳಿ ನೆಟ್ಟು ಗುರಿಯ ಹಣ್ಣು ತಿನ್ನುವುದೇ ಜೀವನ 

ಪ್ರೀತಿಯಂದ್ರೆ ?


ಮನದಾಳದ ಮಾತೆ ಪ್ರೀತಿ 
ಮುನದ ಆಳವೇ ಪ್ರೀತಿ 
ವಿಶ್ವಾಸದ ಮರವೇ ಪ್ರೀತಿ 
ಸ್ನೇಹದ ಹೂವೇ ಪ್ರೀತಿ 
ಮರೆಯದ ನೆನಪೇ ಪ್ರೀತಿ 
ಸುಂದರ ಕವನವೇ ಪ್ರೀತಿ 
ದಡವಿಲ್ಲದ ಸಮುದ್ರವೇ ಪ್ರೀತಿ 
ಸರಸದ ಆಟವೇ ಪ್ರೀತಿ 
ಸ್ವಾರ್ಥವೇ ಇಲ್ಲದ ಪ್ರೀತಿ 
ಬಾಳಿನ ಹೂವೇ ಪ್ರೀತಿ 
ಬದುಕಿನ ಬಳ್ಳಿಯೇ ಪ್ರೀತಿ 
ಮುಗಿಯದ ಕಥೆಯೇ ಪ್ರೀತಿ 

ನಿನಗಾಗಿ


ನನ್ನ ಜೀವಕೆ ನೀನು ಬೇಕು
ನಿನ್ನ ಉಸಿರು ನನಗೆ ಸಾಕು
ನಾ ಕಂಡ ಪ್ರೀತಿಯ ಕನಸು
ನೀ ನಗುತ ಆಗಿಸು ನನಸು
ನಿನಗಾಗಿ ಮಿಡಿಯುವ ಹೃದಯದ
ನಿನ್ನ ಗೂಡಿನ ಅಂಚಿನಲ್ಲಿ ಅಡಗಿಸು
ನನ್ನ ಮನದ ದು:ಖದ
ನೀ ಅರ್ಥಿಸಿ ಹಂಚಿಕೊಳ್ಳು
ನನ್ನ ಅಳುವ ಕಣ್ಣಿಗೆ
ನೀ ರಕ್ಷಣೆಯ ರೆಪ್ಪೆಯಾಗು
ನಾ ಜೀವಿಸುವೆ ನಿನಗಾಗಿ
ನೀನು ಉಸಿರಾಗು ನನಗಾಗಿ 

ನೊಂದಿದ ಮನಸ್ಸು


ಮನಸ್ಸು ನೊಂದಿದಾಗ
ಹಾರುವ ಪಕ್ಷಿಯ
ರೆಕ್ಕೆ ಕಿತ್ತೆಸೆದ ಹಾಗೆ

ಮನಸ್ಸು ನೊಂದಿದಾಗ
ಬಿಡಿಸಿದ ರಂಗೋಲಿಗೆ
ಮಳೆ ನೀರು ಬಿದ್ದ ಹಾಗೆ

ಮನಸ್ಸು ನೊಂದಿದಾಗ
ಕಾಮನಬಿಲ್ಲಿನ ರಂಗು
ಖುಷಿಯ ಕಸಿದ ಹಾಗೆ

ಮನಸ್ಸು ನೊಂದಿದಾಗ
ಚಿಗುರೊಡೆದ ಬಳ್ಳಿಗೆ
ಚಿವುಟಿ ಒಣಗಿಸಿದ ಹಾಗೆ

ಮನಸ್ಸು ನೊಂದಿದಾಗ
ನಗುವ ಮಗುವಿಗೆ
ಕಣ್ಣೀರು ಬರಿಸಿದ ಹಾಗೆ

ಮನಸ್ಸು ನೊಂದಿದಾಗ
ನಗುವ ಮಗುವಿಗೆ
ಕಣ್ಣೀರು ಬರಿಸಿದ ಹಾಗೆ

ಮನಸ್ಸು ನೊಂದಿದಾಗ
ಸಂಪತ್ತು ಕಾಣಿದರು
ಭಿಕ್ಷುಕನ ದು:ಖದ ಹಾಗೆ

ಮನಸ್ಸು ನೊಂದಿದಾಗ
ಜೀವ ಉಸಿರಾಡಿದರು
ಜೀವನ ಮುಗಿದ ಹಾಗೆ 

ಭಾನುವಾರ, ಜನವರಿ 23, 2011

ಆಸೆ


ಆಸೆಯೆಂಬ ಬೆಂಕಿಗೆ ದುರಾಸೆಯ
ತುಪ್ಪ ಸುರಿದು
ಬೆಂಕಿ ಹಬ್ಬಿದ ಮನಸಿಗೆ
ದುರಾಸೆ ನೋವು ನೀಡಿತು
ಆಸೆಯೆಂಬ ಬೆಂಕಿಗೆ ನಿಸ್ವಾರ್ಥದ
ತುಪ್ಪ ಸುರಿದು
ಬೆಂಕಿ ಹಬ್ಬಿದ ಮನಸಿಗೆ
ಪ್ರೀತಿ ನೆಮ್ಮದಿ ನೀಡಿತು 

ವಿರಸ


ಮಂದ ಮುನದ ಭಿನ್ನ
ತರಹದ ನೋವು ನನ್ನಲಿ ನೆಲೆದಿದೆ
ಮನವು ಕೇಳದು ಹೃದಯ ತಿಳಿಯದು
ಯಾವ ದಾರಿಯು ಕಾಣದು
ತಪ್ಪು ಸರಿಯೋ ದೋಚದ ಮನ
ಪಾಪಿ ಆತ್ಮ ಆಗಿರುವುದು
ಕತ್ತಲಲಿ ಬೆಳಕು ಕಾಣದ
ಬೆಳಕಲಿ ಇರುಳು ತುಂಬಿತು
ಎದೆಯ ಬಡಿತಕೆ ನೋವು ತಗಲಿ
ಜೀವ ಅಳಿದು ಹೋಯಿತು 

ಕಾಣಿಕೆ


ಮುಗ್ಧ ಮನವು ಬೆಳೆದು
ಹರೆಯದಾಗಿದೆ
ಹದಿ ಹರೆಯ ಹೃದಯ ಬಲು
ಪ್ರೀಯವಾಗಿದೆ
ಪ್ರೀತಿ ಪ್ರೇಮ ಸ್ನೇಹದ
ಭಾವ ಮೆಚ್ಚುಗೆಯಾಗಿದೆ
ಮೆಚ್ಚುಗೆಯ ಮನದ ಪ್ರೀತಿಗೆ
ಸ್ನೇಹ ಸಾಕ್ಷಿಯಾಗಿದೆ
ಸಾಕ್ಷಿಯಾದ ಗೆಳೆತನ ವಿಶ್ವಾಸದ
ದೀಪವಾಗಿದೆ
ವಿಶ್ವಾಸ ತುಂಬಿದ ಹೃದಯಕೆ
ಪ್ರೇಮದ ಕಾಣಿಕೆಯಾಗಿದೆ 

ನನ್ನವರು


ಅಮ್ಮನ ಮಮತೆಯ ಭಾವ 
ಅಪ್ಪನ ಒಲವಿನ ಜೀವ 
ಅಮ್ಮ ಸಂಸ್ಕಾರ ಪಾಠ ನೀಡಿದರೆ 
ಶಿಕ್ಷಣ ಗುರುತು ಅಪ್ಪ ಹೇಳುವರು 
ಅಮ್ಮ ಕೈ ತುತ್ತು ಉನಿಸಿದರೆ 
ಬೆರಳ ಹಿಡಿದು ಅಪ್ಪ ನಡೆಸುವರು 
ಅಮ್ಮನ ಮಡಿಲಲಿ ಹಾಯಾಗಿದ್ದರೆ
ಜಗತ್ತಿನ ಅರಿವು ಅಪ್ಪ ಹೇಳುವರು 
ಅಮ್ಮನ ಮುದ್ದು ಸಲಿಗೆಯಾಗಿದ್ದರೆ 
ಸತ್ಯ ಗೆಲುವಿನ ಪಾಠ ಅಪ್ಪನದು 

ನಲ್ಲ - ನಲ್ಲೆ


ಓ ನನ್ನ ನಲ್ಲೆ
ತಿರುಗಿ ನೋಡು ಒಮ್ಮೆ
ಕಾಯುವೆ ನಾ ಇಲ್ಲೇ
ಬಾ ಪ್ರೀತಿಸುವ ಒಮ್ಮೆ

ನೀ ಕರೆದೆ ನನ್ನ ನಲ್ಲ
ನಕ್ಕು ಹಿಡಿದೆ ಗಲ್ಲ
ನೀ ಹೇಳಿದೆ ನನಗೆ ಮೆಲ್ಲ

ಓ ನನ್ನ ನಲ್ಲೆ
ಹೇಳು ಮತ್ತೊಮ್ಮೆ
ಸವರುವೆ ನಿನ್ನ ಕೆನ್ನೆ
ಮುತ್ತು ಕೊಡುವೆ ಒಮ್ಮೆ

ಪ್ರೀತಿಸುವೆ ನಿನ್ನ ನಲ್ಲ
ಬೇಡ ಮುತ್ತಿನ ಬೆಲ್ಲ
ನೀನು ನನಗೆ ಎಲ್ಲ
ಬಾ ಪ್ರೀತಿಸು ನಲ್ಲ


ನನ್ನ ಕಂದ


ಮುದ್ದಿನ ಕಂದ ನೀನು
ಪ್ರೀತಿ ಪಾತ್ರದ ಕಣ್ಣು
ನಕ್ಕು ನಲಿಸುವ ನೀನು
ಮನ ಹೇಳಿತು ನೀ ಚಿನ್ನು
ಮಲಗು ಬೇಗ ನೀನು
ಚಂದ್ರ ಹಾಡುವನು ಇನ್ನು
ಆಡು ಆಟವ ನೀನು
ಮಣ್ಣು ಕಾಣಿತು ಹೊನ್ನು
ಸ್ವಲ್ಪ ತುಂಟ ನೀನು
ಹೊಡೆದ ಹುಡುಗಿಗೆ ಕಣ್ಣು
ಬಲು ಹಟವಾದಿ ನೀನು
ಕದ್ದು ಬೆಣ್ಣೆಯ ತಿನ್ನು
ಪೋಲಿ ಹುಡುಗ ನೀನು
ಕಲ್ಲೆಸೆದು ತೆಗೆದ ಹಣ್ಣು 

ಗುರುವಾರ, ಜನವರಿ 20, 2011

ಪ್ರೀತಿ

ಪ್ರೀತಿ ಸರಸ ಎಂದೆ ನೀನು
ಬೇಡ ನಾಚಿಕೆ ಅಂದೆ ನಾನು
ಪ್ರೇಮ ಲಹರಿಯ ಪುಸ್ತಕ ನೀನು
ಗಾನ ಹೇಳುವ ಗೀತೆ ನಾನು
ಮಾತು ಮುತ್ತು ಬಲ್ಲೆ ನೀನು
ಪ್ರೇಮ ರಸದ ಹೂ ನಾನು
ಬಣ್ಣ ಬದುಕಿನ ಚಿಟ್ಟೆ ನೀನು
ನಿನಗಾಗಿ ಅರಳುವ ಮೊಗ್ಗು ನಾನು
ಪ್ರೀತಿಸುವ ಬಯಕೆ ಹೊತ್ತೆ ನೀನು
ಪ್ರೀತಿಗಾಗಿ ಬದುಕಿರುವೆ ನಾನು


ಪ್ರೀತಿಯ ಗಾಯಣ

ನೆನಪಿನ ಅಲೆಗಳು ಹ್ರದಯದ 
ತೀರಕೆ ಅಪ್ಪಳಿಸಿ 
ಬಿರುಕು ಬಿಡುವ ಭಾವಗಳ 
ಬಂಡೆಯ ಮೌನಾಗಿಸಿ 
ಮುಸ್ಸಂಜೆ ಸೂರ್ಯಾಸ್ತದಲಿ 
ಪ್ರೇಮಿಗಳು ಮಿಲನದಲಿ
ಕೆಂಪು ಕಾಣುವ ಸೂರ್ಯ ಬಣ್ಣ 
ತಂಪು ತುಟಿಗೆ ಬಣ್ಣಿಸಿ 
ಮಧುರ ಕ್ಷನದ ಮರಳಿನಲಿ 
ತನು ಮಾನವ ಒಂದಾಗಿಸಿ 
ಮಂದ ಭಾವದಿ ತದಿಗೆ ಬಂದು 
ಪ್ರೀತಿ ಪಲ್ಲವಿ ಹಬ್ಬಿಸಿ 
ಸಣ್ಣ ತೆರೆಗಳ ಶಬ್ದಕೆ ನಾಚಿದ 
ಮನ ತಲ್ಲೆನ್ನಿಸಿ
ಮೆಲ್ಲ ಹನಿಯ ಸ್ಪರ್ಶದಲಿ 
ಎರಡು ಮನಗಳು ಮುಳಿಗಿಸಿ
ಚಂದ್ರ ಬಿಂಬದಿ ರವಿಯು ಮೂಡಿ 
ಅವನಲ್ಲಿ ಅವಳ ನೆರಳಾಗಿಸಿ
ಉಪ್ಪು ನೀರಲಿ ನೆನೆದ ಹಾಗೆ 
ಪ್ರೀತಿ ನೆನಪಲಿ ತೇಲಾಡಿಸಿ
ಬೀದಿಗೆ ಮರೆತು ಸ್ವರ್ಗ ಕಾಣಿದ
ಪ್ರೇಮಿಗಳ ಪ್ರೀತಿ ಅಮರವಾಗಲಿ 


ಚಿಟ್ಟೆ

ಹಲವು ಬಣ್ಣದ ನಿನ್ನ ದೇಹ
ಮಾಯವಾದರೂ ಬೆಳೆವ ಮೋಹ
ಕ್ಷಣ ಮಾತ್ರದ ನಿನ್ನ ನೋಟ
ನಯನಗಳಿಗೆ ಹುಡುಕುವ ಆಟ
ಅರಳಿದ ಹೂವು ನಿನ್ನ ಇನಿಯ
ನಲಿ ನಲಿದಾಡು ಕಾಣುವ ಸವಿಯ
ಹೂವಿಂದ ಹೂವಿಗೆ ನಿನ್ನ ಪಯಣ
ಮನದಾಳದಿ ಮೂಡಿದೆ ಗಾಯನ
ಚೆಲುವ ತುಂಬಿದ ನಿನ್ನ ಚಿತ್ತಾರ
ನಗು ಚುಮ್ಮಿದೆ ಮಾಡಿ ಪ್ರಚಾರ
ಸುಂದರ ಲತೆಯ ನಿನ್ನ ಬಣ್ಣ
ಖುಷಿಯಿಂದ ಮುತ್ತಿದು ಬಾ ಚಿನ್ನ
ಬಣ್ಣದ ಚಿಟ್ಟೆ ನಿನ್ನ ಹೆಸರು
ಪ್ರೀತಿಗೆ ಬಿದ್ದು ನಾನಾದೆ ಕೆಸರು