ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಮಂಗಳವಾರ, ನವೆಂಬರ್ 23, 2010

ಆಸೆ ಎಂಬುದು ಸ್ವಾರ್ಥ..


  ಮನುಷ್ಯನ ಸ್ವಾರ್ಥ ಬಹಳ ಕೆಟ್ಟದು. ತನ್ನ ಸ್ವಾರ್ಥಕ್ಕಾಗಿ ಬೇರೆಯವರ ಮನಸ್ಸು ನೋವಿಸುತ್ತಾನೆ. ಸ್ವಾರ್ಥ ಎಂಬಲ್ಲಿ ತನ್ನ 
ಮನದ ಆಸೆ ಎಂದರ್ಥ. ಆಸೆ ಎಂಬುದು ಮನಸ್ಸಿನ ಹುಚ್ಚು ಮತ್ತು ಸ್ವಲ್ಪಸಮಯದ ಸಂತೋಷ ಕೊಡುವ ಸಮಯ.ರಾವಣನು
ಸೀತೆಯ ಆಸೆಯಿಂದ ಜಗಕ್ಕೆಲ್ಲ ಕೆಟ್ಟವನಾದ.ಹೀಗೆ ಹಲವಾರು ಜನ ಆಸೆ ಎಂಬ ಸ್ವಾರ್ಥದಲ್ಲಿ ಜೀವನವನ್ನು ಬಲಿ ಕೊಡುತ್ತಾರೆ.
ಯಾವ ಮನುಷ್ಯ ನಿಜವಾಗಿಯೂ ತನ್ನ ಆತ್ಮವನ್ನು ಪ್ರೀತಿಸುತ್ತಾನೆ. ಅದರ ಸಾಮರಸ್ಯವನ್ನು ತಿಳಿದುಕೊಳುತ್ತಾನೆ.ಆ ಮನುಷ್ಯ 
ಯಾವುದೆ ತರಹದ ದುರಾಸೆಯನ್ನು ಇಟ್ಟುಕೊಳುವುದಿಲ್ಲ.ಆತ್ಮಕಲ್ಯಾಣದ ಆಸೆಯಿಂದ ಜೀವಿಸುವ ಜೀವ ಜಗತ್ತಿನಲ್ಲಿ ಹುಟ್ಟಿ 
ಸಾರ್ಥಕನಾಗುತ್ತಾನೆ. ಆಸೆ ಎಂಬುದು ಮನದಲ್ಲಿಯೆ ಹುಟ್ಟಿ ಮನದ ಮೂಲೆಯಲ್ಲಿ ಅಂತ್ಯಗೊಳುವ ವಿಷಯ.
          ಯಾವುದೇ ಮನುಷ್ಯ ತನ್ನ ಸ್ವಾರ್ಥವೆಂದು ತಿಳಿದು ನಡೆದ ದಾರಿಯು ಬೇರೆಯವರಿಗೆ ಕೆಡಕನ್ನು ಉಂಟು
ಮಾಡಬಹುದು.ಅದಕ್ಕಾಗಿ ಬೇರೆಯವರ ಹಿತವೆ ತಮ್ಮ ಹಿತವೆಂದು ಭಾವಿಸುವ ಜೀವದ ಮನುಷ್ಯನಾಗಿರಬೇಕು. ಅವನು ಸ್ವಾರ್ಥಿ
ಎಂದು ಹೇಳುವಲ್ಲಿ ಮಹಾ ಪಾಪಿ ಎಂದು ಹೇಳುವಷ್ಟೇ ಅರ್ಥ ಅಡಗಿರುತ್ತದೆ. ಈ ಜಗತ್ತಿನಲ್ಲಿ ಸ್ವಾರ್ಥದ ದೀಪ ಎಲ್ಲರ್ ಮನೆಯಲ್ಲಿ
ಬೆಳಕು ನೀಡಿದೆ. ಮಾನವೀಯತೆಯೆಂಬ ತಂಪಾದ ಗಾಳಿಯಿಂದ ಸ್ವಾರ್ಥದ ದೀಪವನ್ನು ಆರಿಸಬಹುದು. ಪ್ರೀತಿ, ವಿಶ್ವಾಸ,
ಸಹನೆ, ಒಳೆಯತನ ಮತ್ತು ನಿರಹಂಕಾರ ಎಂಬ ಪಂಚಸೂತ್ರ ಬಳಿಸಿ ಆತ್ಮದ ದೀಪವನ್ನು ಉರಿಸಿದರೆ ಜೀವನವು
ಕಲ್ಯಾಣವಾಗುವುದು & ಬೇರೆಯವರ ಜೀವನದಲ್ಲಿಯೂ ಕೂಡ ನಿಮ್ಮ ದೀಪದ ಬೆಳಕಾಗುವುದು.
         ಮನುಷ್ಯ ಸ್ವಾರ್ಥವನ್ನು ಬಿಟ್ಟು ಎಲ್ಲರೂ ನಮ್ಮವರೆ.. ಅವರ ಒಳಿತು ನನ್ನದು ಅವರ ಕೆಡಿತು ನನ್ನದು ಎಂಬ
ಭಾವದಿಂದ ಬಾಳಬೇಕು. ತನ್ನ ಸ್ವಾರ್ಥದಿಂದ ಬೇರೆಯವರ ಮನಸು ನೋವಿಸುತ್ತಿದ್ದರೆ ಆ ಸ್ವಾರ್ಥದಲ್ಲಿರುವುದು ನನ್ನ ದುರಾಸೆ
ಎಂದು ತಿಳಿದುಕೊಳ್ಬೇಕು. ಈಗಿನ ಕಾಲದಲ್ಲಿ ಸ್ವಾರ್ಥವೆಂಬುದು ಮಗು ಹುಟ್ಟುವ ದಿನದಿಂದಲೆ ಕಲೆತು ಬಿಡುತ್ತದೆ. ಅದಕ್ಕೆ ಕಾರಣ
ಅದೇ ಸ್ವಾರ್ಥದಿಂದ ನೀಡಿರುವ ಮಗುವಿನ ಸಂಸ್ಕಾರಗಳು ಎಂದು ಮರೆಯದಿರಿ. ಮನುಷ್ಯನ ಮನಸ್ಸಿನ ಮೇಲೆ ಅವನ ಜೀವನ
ಆಧಾರಿತವಾಗಿರುತ್ತದೆ.ಹೀಗಾಗಿ ಸ್ವಾರ್ಥವನ್ನು ಅಳಿಸಿ ಪ್ರೀತಿಯಿಂದ ಬೆಳೆಸಿದ ಮನಸ್ಸಿನವರಾಗಿರಬೇಕು ಮತ್ತು ಬೇರೆಯವರ 
ಹಿತವನ್ನು ಬಯಸಬೇಕು. ಜೀವನದಲ್ಲಿ ಆಸೆ ಇರಬೇಕು ಆದರೆ ಅದು ಸ್ವಾರ್ಥವೆಂಬ ದುರಾಸೆಗೆ ಒಳಗಾಗಿರಬಾರದು. ಹೀಗೆ 
ತನ್ನ ಆತ್ಮ ಶುದ್ಧದಿಂದ ಆತ್ಮದ ಕಲ್ಯಾಣದಿಂದ ಜೀವನವನ್ನು ಒಳೆಯತನದಿಂದ ಪರಿಪೂರ್ಣಗೊಳಿಸಬೇಕು..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ