ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಶುಕ್ರವಾರ, ಅಕ್ಟೋಬರ್ 30, 2009

ನೀನು

ಹೇಗಿದ್ದ ನಾನು ಹೇಗಾಗಿದೆ
ಜೀವನವೇ ಬದಲಾಗಿವೆ
ನಿನ್ನ ಸುಖ ದು:ಖವೆ
ನನ್ನ ಕಣ್ಣಾಗಿವೆ.
ನಿನ್ನ ಆಸೆಗಳೇ ನನ್ನ ಕನಸಾಗಿವೆ..
ನಿನ್ನ ಮಾತುಗಳೇ
ನನಗೆ ವಾನಿಯಂತಿವೆ
ನಿನ್ನ ಜೊತೆಗಿನ ಜಗಳವೇ
ಚಿಕ್ಕಂದಿರ ಜೊತೆಯ ಆಟವಾಗಿದೆ..
ನಿನ್ನ ಸ್ವಲ್ಪ ಕೋಪವು
ನನ್ನ ಪ್ರೀತಿ ಹೆಚ್ಚು ಮಾಡುತ್ತಿದೆ ..
ನಿನ್ನ ಆ ನಗು ಮತ್ತು ಖುಷಿ
ನನ್ನ ಮನಸ್ಸಿನ ಕಾಯಿಲೆ ದೂರ ಮಾಡುತ್ತದೆ ..
ಹೀಗೆ ನಿನ್ನ ಜೀವವು
ನನ್ನ ಜೀವ ಮತ್ತು ಜೀವನವಾಗಿದೆ..

ನನ್ನ ಪ್ರೀತಿಯ ಜೀವ :)

ನಿನ್ನ ಪ್ರೀತಿ ಹೀಗಿರಲಿ


ನಗುವ ಮುಖವು ನಿಮ್ಮದಿರಲಿ

ನಿಮ್ಮ ದು:ಖದ ಗೆಳತಿ ನಾನಿರಲಿ

ನನಗೆ ತಿಳಿದಿದೆ ನಿಮ್ಮ ಮನಸ್ಸು

ಹೀಗಾಗಿ ಹೇಳುವೆ ನನ್ನ ಕನಸು .

-ಮೌನವು ನಿಮ್ಮ ಪ್ರೀತಿಯಲ್ಲಿರಲಿ

ಆದರೆ ಆ ಮೌನ ನಿಮ್ಮ

ಮನಸ್ಸು ನೋವಿಸದಿರಲಿ.

-ಕೋಪವು ನಿಮ್ಮ ಪ್ರೀತಿಯಲ್ಲಿರಲಿ

ಆದರೆ ಆ ಕೋಪ ನಿಮ್ಮ

ಪ್ರೀತಿಯನ್ನು ಕಡಿಮೆ ಮಾಡದಿರಲಿ.

-ಹುಡುಗಾಟವು ನಿಮ್ಮ ಪ್ರೀತಿಯಲ್ಲಿರಲಿ

ಆದರೆ ಆ ಹುಡುಗಾಟ ನಿಮ್ಮ

ಜೀವನದ ಜೊತೆ ಆಟವಾಡದಿರಲಿ

-ದು:ಖವು ನಿಮ್ಮ ಪ್ರೀತಿಯಲ್ಲಿರಲಿ

ಆದರೆ ಆ ದು:ಖ ನಿಮ್ಮ

ಜೀವನದಲ್ಲಿ ನಿರಾಸೆಯನ್ನು ತರದಿರಲಿ

-ನಗುವು ನಿಮ್ಮ ಪ್ರೀತಿಯಲ್ಲಿರಲಿ

ಆದರೆ ಆ ನಗುವು ನಿಮ್ಮನ್ನು

ಪ್ರತಿ ಕ್ಷಣವೂ ಸುಖವಾಗಿರಲಿ

-ಕನಸು ನಿಮ್ಮ ಪ್ರೀತಿಯಲ್ಲಿರಲಿ

ನನ್ನ ಕನಸು ನಿಮ್ಮ ಮನಸ್ಸಿನಲ್ಲಿರಲಿ

ಈ ಪ್ರೀತಿಯ ಕನಸ್ಸನ್ನು ನೀವು ಮರೆಯದಿರಿ

ಹೀಗಿರುವ ನನ್ನ ಕನಸ್ಸನ್ನು ನೀವು ನಿಜ ಮಾಡಿರಿ .


ನನ್ನ ಪ್ರೀತಿಯ ಜೀವ :)




ಗುರುವಾರ, ಅಕ್ಟೋಬರ್ 29, 2009

ಈ ಬಂಧನ


ಏನು ಈ ಬಂಧನ ತಿಳಿಯಲಾಗಿದೆ ನನಗೆ

ಮಾಯಾಲೋಕದಲ್ಲಿ ಸಿಲುಕಿದ ಹಾಗೆ

ಪ್ರತಿ ಬಡಿತವು ನಿನ್ನ ಹೆಸರನ್ನೇ ಹೇಳುತಿದೆ

ಪ್ರತಿ ಉಸಿರು ನಿನ್ನ ನೆನಪೇ ತರುತಿದೆ

ನೆನಪು ಬಂದಾಗ ಏನೋ ಒಂಥರಾ ಸುಖ !

ಆ ಸುಖದಲ್ಲಿ ಸ್ವರ್ಗ ಕಾಣುವ ಹಾಗೇ..

ನನ್ನನ್ನು ನೀನು ಅಪ್ಪಿಕೊಂಡು

ಪ್ರೀತಿಯ ಮಾತು ಹೇಳಿದ ಹಾಗೇ..

ಎಷ್ಟು ಸುಂದರ ನಿನ್ನ ಪ್ರೀತಿ

ಮೌನದಲ್ಲಿಯೇ ಪ್ರೀತಿಸುವ ಹಾಗೇ..

ಮುದ್ದು ಮಾಡಿದೆ ನೀನು

ನಾನು ಚಿಕ್ಕ ಮಗು ಇರುವ ಹಾಗೇ..

ನಿಜವಾಗಲೂ ನೀನೆಂದರೆ ನನಗೆ

ಪ್ರೀತಿಯ ಚಿಹ್ನೆ ಇದ್ದ ಹಾಗೇ...


ನನ್ನ ಪ್ರೀತಿಯ ಜೀವ :)

जीवन म्हणजे मी का ?

जीवन म्हणजे सुंदर असत
बगा ॥ अस विचार करून
कस छान वाटत जस
- नदी शांत असत तस
मन खूप छान असत
एकदा इथे तर, एकदा तिथे
आणि नंतर म्हणत तू तिथे मी
"म्हणून सगळ्यान्ना माझा मन खूप आवडत "
-जस आभाळ किती मोठ असत
तसच मैत्री आणि प्रेम असत
किती पाउल ठेवल तरी
अंत होतच नसत
पाउला इतकेच छानस आठवण राहत
"म्हणून सग्ळ्यान्ना माझ्या बरोबर पाउल ठेवायला खुप आवडत "
- जस जोकर म्हणजे सगळ्यान्ना
हसायला येत पण हसण्या पेक्षा
हसवायच खूप आवडत असत
"म्हणून सगळ्यान्ना माझ्या बरोबर
हसायला खूप आवडत "
आता सांगा बगू मी म्हणजे काय वाटत
मला माहीत आहे .... जीवन म्हणजे मी अस वाटत ना ॥

नन्ना प्रीतिया जीवा :)

ಸ್ತ್ರೀ..


ಸ್ತ್ರೀ ಎಂಬ ಶಬ್ದಕ್ಕೆ ತುಂಬು ಅರ್ಥವುಂಟು ...

ಸರ್ವ ಶಕ್ತಿಯನ್ನು ಇವಳು ಹೊಂದಿರುವಳು
ಗೌರವ್ ನೀಡಿದಲ್ಲಿ ಸ್ತ್ರೀಯು ದೇವತೆಯಾಗುವಳು
ಅದೇ ಸ್ತ್ರೀ ಪ್ರೀತಿ ತೋರಿದರೆ ಸ್ವರ್ಗವಾಗುವುದು
ಮಮತೆ ಅವಳಿಗಿದ್ದರೆ ಮಗು ಮಹಾತ್ಮನಾಗುವನು
ಕೋಪದ ಸ್ವಭಾವದವಲಿದ್ದರೆ ಎಲ್ಲ ನಷ್ಟಮಾಡುವಳು
ಅವಳು ನಗುತ್ತಿದ್ದರೆ ಜಗತ್ತಿನಲ್ಲಿ ಶಾಂತಿಯಿರುವುದು
ದುರ್ಗುಣಗಳು ತುಂಬಿದ್ದಾರೆ ಭೂಮಿಯೇ ನರಕವಾಗುವುದು
ತಾಳ್ಮೆ ಎಂಬ ಪದಕ್ಕೆ ತಾಳಿ ಅರ್ಥ ನೀಡುವಳು
ಬೇರೆಯವರ ಜೀವನಕ್ಕಾಗಿ ತನ್ನ ಬಲಿದಾನ ಮಾಡುವಳು
ನೋವನ್ನು ನುಂಗಿ ಪ್ರೀತಿಯಂದಿರುವ ಹ್ರದಯ ಹೊಂದಿರುವಳು
ಮ್ರದು ಮನಸ್ಸಿನವಳು ,ಸಹನಶೀಲೆಯು ...
ಇವಳೇ ಸ್ತ್ರೀ ಇರುವಳು.

ನನ್ನ ಪ್ರೀತಿಯ ಜೀವ :)

ಒಳ್ಳೆಯ ಸ್ತ್ರೀಗೆ ನಿಂದಿಸದಿರಯ್ಯಾ..
ಒಳ್ಳೆಯ ಸ್ತ್ರೀಯೇ ಶೀಲಭಂಗ ಮಾಡದಿರಯ್ಯಾ..
ಒಳ್ಳೆಯ ಸ್ತ್ರೀಯೇ ದೇವತೆ ದು:ಖ ನೀಡದಿರಯ್ಯಾ..

ಬುಧವಾರ, ಅಕ್ಟೋಬರ್ 28, 2009

ನನ್ನ ಪ್ರೀತಿಯ ಹುಡುಗ


ಓ ನನ್ನ ಪ್ರಿಯಾ .. ಪ್ರೀತಿಯಲ್ಲಿ ಕೋಪವಿರಲಿ

ಆದರೆ ಆ ಕೋಪ ನಿನ್ನ ಮನಸ್ಸು ನೋವಿಸದಿರಲಿ
ನಾನು ಏನು ಎಂದು ಗುರುತಿಸಲಾಗದು ನನಗೆ

ನಿನ್ನ ನೆನಪು ಒಂದು ಕಾಡುತಿರುವುದು ನನಗೆ

ನೀನು ಸುಮ್ಮನೆ ಕುಳಿತರೆ ಅಳುವೇ ನಾನು ಇಲ್ಲಿ

ಹೀಗೆ ನಾನಿರುವಾಗ ಜೀವನದ ಆಸೆ ಎಲ್ಲಿ

ಕಣ್ಣು ರೆಪ್ಪೆ ಮುಚ್ಚಿ ಕುಳಿತಿರುವೆ ನಾನು

ನಿನ್ನ ಮುಖವು ಕಾಣಿ ಕಣ್ಣು ಬಿಟ್ಟೆ ನಾನು

ಕಾಣಲಿಲ್ಲ ನೀನು ಹುಡುಕಾಡಿದೆ ಎಲ್ಲ ಕಡೆಗೆ

ಬೆಳಕಿನಲ್ಲಿ ಕೂಡ ಕತ್ತಲಾಯಿತೆಂದು ತಿಳಿದೇ ನಾನು

ಪ್ರೀತಿಯು ಆ ಬೆಳಕಿನ ಹಾಗೆ ಮಾಯವಾಯಿತೆಂದು ನಾನು

ಜೀವವನ್ನು ತ್ಯಾಗ ಮಾಡುವ ಮನಸಾಯಿತು ಇಂದು

ಓ ನನ್ನ ಪ್ರಿಯಾ , ಮನಸ್ಸಿನಲ್ಲಿ ಪ್ರೀತಿಯಿರಲಿ..


ನನ್ನ ಪ್ರೀತಿಯ ಜೀವ :)

ಹೀಗಿರುವೆ ನಾನು


ನಾನು ನಿಮ್ಮನ್ನು ಪ್ರೀತಿ ಮಾಡಿದೆ

ನನ್ನ ಮನಸ್ಸನ್ನು ನಿಮಗೆ ನೀಡಿದೆ

ನಿಮ್ಮ ಮನಸ್ಸಿಗಾಗಿ ಕಾದು ನೋಡಿದೆ

ನಿಮ್ಮ ಸುಖವನ್ನೇ ಬಯಸಿದೆ

ಜೀವನ ಎಂಬ ಪದದಲ್ಲಿ

ನಿಮ್ಮ ಅರ್ಥ ತುಂಬಿದೆ..

ನೀವು ದೂರವಿದ್ದರು ಹತ್ತಿರವಿರುವ

ಹಾಗೆ ಒಬ್ಬಳೇ ಮಾತನಾಡಿದೆ

ಕೋಪ ಬಂದರು ನಿಮ್ಮ ನಗು

ನೆನೆಸಿಕೊಂಡು ನಾನು ನಕ್ಕಿದ್ದೆ..

ನಿಮ್ಮ ಮನಸ್ಸು ನೋವಿಸಿದೆ ಎಂದು

ತಿಳಿದು ನಾನು ಅಳುತಿರುವೆ

ನಾನು ಅಳುವುದು ನಿಮಗೆ ಇಷ್ಟವಾಗದು

ಎಂದು ದು:ಖವಾದರು ಮನಸ್ಸಿನಲ್ಲಿಡುವೆ

ಆದರೆ ಮನಸ್ಸು ನಿಮಗೆ ಕೊಟ್ಟಿರುವೆ

ಎಂದು ನೆನೆಸಿಕೊಂಡು ದು:ಖವನ್ನೇ ಮರೆತೆ..

ನಿಮಗೆ ನಾನು ಇಷ್ಟವಾಗದ ಹುಡುಗಿ

ಎಂದು ಭಾವಿಸಿ ಏಕಾ೦ಗಿಯಾಗಿರುವೆ

ನಿಮ್ಮ ಮನಸ್ಸನ್ನು ಅರ್ಥಿಸಿಕೊಳ್ಳುವ

ಪ್ರಯತ್ನ ಮಾಡಿರುವೆ..

ಸೂಕ್ಷ್ಮ ಚಿಂತನೆಯ ಈ ಹುಡುಗಿ

ಪ್ರೀಯವಾದ ನಿಮ್ಮ ಮನಸ್ಸಿನ

ಶಾಂತಿಯೇ ದೂರ ಮಾಡಿರುವಳು
ಮುಗ್ಧ ಮನಸ್ಸಿನವಳು ಎಂದು ತಿಳಿದು ತಪ್ಪನ್ನು ಕ್ಷಮಿಸಿಬಿಡಿ

ಮತ್ತು ನಿಮ್ಮ ಹೃದಯದಿಂದ ಸ್ವಲ್ಪ ಪ್ರೀತಿ ಕೊಡಿ.


ನನ್ನ ಪ್ರೀತಿಯ ಜೀವ :)

ನನ್ನ ಗೆಳೆಯ


ಓ ನನ್ನ ಗೆಳೆಯ .. ಪ್ರೀತಿಯ ಗೆಳೆಯ..

ನನ್ನನ್ನು ನಂಬಿಕೆಯಿಂದ ಕಾಣುವ

ಸುಖಿಯಾಗಿರು ಎಂದು ಹೇಳುವ

ಪ್ರೀತಿಯ ಮುಗುಳ್ನಗೆಯಿಂದ ನೋಡುವ

ನನ್ನ ನೆಳುಮೆಯ ಗೆಳೆಯ...

ನಿನ್ನ ಕೋಮಲವಾದ ಮಾತು

ನನ್ನ ಮನಸ್ಸು ಮುಟ್ಟಿದೆ

ನೀನು ಒಳ್ಳೆಯ ಗೆಳೆಯ

ಎಂದು ಹೇಳಿ ನಕ್ಕಿದೆ...

ನಾನು ಕಷ್ಟದಲ್ಲಿರುವಾಗ

ಕೈ ಹಿಡಿದ ಗೆಳೆಯ ನೀನು

ನಾನು ಏನು ಎಂದು

ಅರ್ಥಿಸಿಕೊಂಡಿರುವೆ ನೀನು...

ನಿನ್ನ ಸುಖವನ್ನು ಮತ್ತು ಸ್ನೇಹವನ್ನು

ಬಯಸುವ ಈ ಗೆಳತಿ

ಸದಾಸುಖಿಯಾಗಿರು ಎಂದು

ಆ ದೇವರಲ್ಲಿ ಪ್ರಾರ್ಥಿಸುವಳು ....


ನನ್ನ ಪ್ರೀತಿಯ ಜೀವ :)

ಮಂಗಳವಾರ, ಅಕ್ಟೋಬರ್ 27, 2009

प्रश्ण मनाचे देवाला..


जग अस का असत?

आपण जे समजतो तस का नसत

जग सुंदर अस वाटत

पण जगात आणि जगण्यात

काहीच नाही अस का वाटत?

जग एक पण जगण्याचे रूप अनेक

मन एक पण विचार का अनेक?

मन म्हणजे उंदर असत न !!!

मग तेच्याशी वाईट का होत ?

कायम वाईटच होणार असेल

तर सहनशक्ति का नसत?

कर्ता देव अस म्हणतात

मग तो दुखी का ठेवतो ?

करणारे आणि भोगानारे आम्हीच

तर तो देव काय करतो ?

देवाला सगल्या शक्ति असतात ना

मग तो सहन शक्ति का दिला नाही ?

आपल आत्मा म्हणजेच देव तर

तो स्वत:ला इतक दुखी का ठेवतो ?

जग जग जगासाठी अस म्हानायाच

आणि एक दिवस मरूं जायच

हेलाच.... " जग " (World) म्हानायाच !!!!


माझा जीवा :)

ಸ್ನೇಹ...


ಸ್ನೇಹವೆಂದರೆ ಹೀಗೆ, ಪ್ರೀತಿ ಇಲ್ಲದೆ ಹೇಗೆ?

ಕೋಪ ಜಗಳ ಉಂಟು

ಸಿಹಿ ಮಾತು ಉಂಟು..

ಮನವೆಂಬ ಪದದಲ್ಲಿ ಅಡಗಿರುವ ಸ್ನೇಹವಿದು..

ಭಾವನೆಗಳ ದಾರಿಯಲ್ಲಿ

ಹೆಜ್ಜೆ ಇಡುವ ಪ್ರೀತಿ ಇದು..

ಮನಸ್ಸು ಎರಡೂ ಸೇರಿದಾಗ

ಸುಖ- ದುಃಖ ಹಂಚಿದಾಗ..

ಪ್ರೀತಿ ಜಗಳ ಇದ್ದಾಗ ನೆನಪಾಗುವ ಪದವೊಂದು

ಅದೆಯೇ ಸ್ನೇಹವೆಂದು..

ಕಣ್ಣು ರೆಪ್ಪೆಯ ಹಾಗೆ

ರಕ್ಷಣೆ ಇದು ಮಾಡುವುದು

ಬೆಲ್ಲ ಸಕ್ಕರೆ ಹಾಗೆ

ಸಿಹಿತನವೇ ನೀಡುವುದು

ಇದಕ್ಕೆ ಇಂದು ನಾವು ಸ್ನೇಹವೆಂದು ಹೇಳುವುದು.


ನನ್ನ ಪ್ರೀತಿಯ ಜೀವ :)

ಅಮ್ಮ...


ಅಮ್ಮ ನನ್ನ ಮುದ್ದಿನ ಅಮ್ಮ

ಎಷ್ಟು ಮಮತೆಯ ನನ್ನ ಅಮ್ಮ

ತಪ್ಪಾದರೆ ಹೊಡೆಯುವಳು

ಇಲ್ಲಾದರೆ ಯಾವಗಲೂ ಪ್ರೀತಿ ಮಾಡುವಳು

ನಿಧಾನ ಬಂದು ಮುತ್ತು ಕೊಡುವಳು

ನನ್ನ ಮುದ್ದಿನ ಕಂಡ ಎಂದು ನಗುತ ಹೇಳುವಳು

ನಾನು ನಕ್ಕರೆ ಅವಳು ನಗುವಳು

ನಾನು ಬಿದ್ದರೆ ಅವಳೇ ಹೆಚ್ಚು ಅಳುವಳು

ಕಾಳಜಿ ನನ್ನ ಅಮ್ಮ ಮಾಡುವಳು

ಸಂಸ್ಕಾರ ನನಗೆ ಅವಳೇ ಕೊಡುವಳು

ಚಿಕ್ಕವರ ತರಹ ನನ್ನ ಜೊತೆ ಆಟವಾದುವಳು

ಆದುವಾಗಲೇ ಅಭ್ಯಾಸ್ ಕೂಡ ಹೇಳುವಳು

ಮಾಡಲಿಲ್ಲಂದರೆಕೊಪ ಮಾಡುವಳು

ಆದರೆ ಕೊನೆಗೆ ಅವಳೇ ಅಳುವಳು

ಮತ್ತೆ ನಿಧಾನವಾಗಿ ನನ್ನನ್ನು ಅಪ್ಪಿಕೊಳ್ಳುವಳು

ಮತ್ತು ಮುಗುಳ್ನಗೆಯನ್ನು ನೀಡುವಳು

ಅಮ್ಮ ನನ್ನ ಪ್ರೀತಿಯ ಅಮ್ಮ

ಎಷ್ಟು ಮುದ್ದಾದ ನನ್ನ ಅಮ್ಮ....
ನನ್ನ ಪ್ರೀತಿಯ ಜೀವ :)

ನಿಸರ್ಗವೇ ದೇವರು..


ಸೃಷ್ಟಿ ಎಷ್ಟು ಸುಂದರ..

ಸೃಷ್ಟಿಕರ್ತ ದೇವರ ಸ್ಥಳ ಮಂದಿರ

ಆ ದೇವರು.. ನಿಸರ್ಗ ಎಂಬಲ್ಲಿ

ಏನೋ ಒಂಥರಾ ಭಾವನೆ ಮೂಡಿಸಿದ

ಮನದಲ್ಲಿ ಖುಷಿಯ ನಗು ತೋರಿಸಿದ

ತನ್ನದೇ ಆದ ಕಲೆಯಿಂದ ಸುಂದರ

ನಿಸರ್ಗದ ಚಿತ್ರ ಬಿಡಿಸಿದ

ಮಾಯಾಲೋಕದ ರೂಪವನ್ನು ಇದರಲ್ಲಿ ಬಣ್ಣಿಸಿದ..

ತಂಪಾದ ಗಾಳಿಯಲ್ಲಿ ಉಸಿರಿನ -

ಪವಿತ್ರತೆಯನ್ನು ತೋರಿಸಿದ.

ಇಂಪಾದ ಪಕ್ಷಿಗಳ ಚಿಲಿಪಿಲಿ ಶಬ್ದದಲ್ಲಿ -

ಸ್ವರಗಳನ್ನು ನುಡಿಸಿದ.

ಆ ಬಿಳಿ ಮೋಡದಲ್ಲಿ ಮನಸ್ಸಿನ ಶುದ್ಧ -

ಭಾವನೆಗಳನ್ನು ಹೊಮ್ಮಿಸಿದ.

ಹಸಿರು ಬೆಟ್ಟಗಳ ಸೌಂದರ್ಯದಲ್ಲಿ ಕಣ್ಣಿಗೆ -

ಆನಂದದ ಸಮಾಧಾನ ತೋರಿದ.

ಹರಿಯುವ ನೀರಿನ ಸೂಕ್ಷ್ಮ ಶಬ್ದದಲ್ಲಿ -

ಮುಗ್ಧ ಮನಸ್ಸಿನ ಮಗುವಿನ ನಗು ಕೇಳಿಸಿದ.

ತಂಪಾದ ಮಳೆಯ ಹನಿಗಳಲ್ಲಿ ಪ್ರೀತಿಯ -

ಮಾತುಗಳನ್ನು ಹೊರಡಿಸಿದ.

ಹೀಗೆ ತನು ಮನದಿಂದ ಜನರಿಗೆ

ಸೃಷ್ಟಿಯಲ್ಲಿ ದೇವರನ್ನು ತೋರಿಸಿದ...


ನನ್ನ ಪ್ರೀತಿಯ ಜೀವ :)

ಸ್ರಷ್ಟಿ


ಆಕಾಶ ತಿಳಿಯಾಗಿದೆ ಹ್ರದಯ್ದಲ್ಲಿರುವ ಪ್ರೀತಿಯ ಹಾಗೆ, ಮೋಡ ಕವಿದಿದೆ ಸ್ನೇಹ ಚಿಗುರಿದ ಹಾಗೆ, ತಂಗಾಳಿ ಸೂಸಿದೆ ಮನಸ್ಸು ಖುಷಿಯಿಂದ ತಂಪಾದ ಹಾಗೆ,ಹಕ್ಕಿಗಳು ನಲಿದಾಡುತಿದೆಮನದಾಸೆಯೂ ಹೊರ ಹೊಮ್ಮುವ ಹಾಗೆ ...

ಈ ಸ್ರಷ್ಟಿ ಎಷ್ಟು ಚೆನ್ನ ಎಂದು ಪ್ರೀತಿಯಿಂದ ಹೇಳುವ ಹಾಗೆ ಹ್ರದಯ ಮಿಡಿಯುತಿದೆ.ಈ ಹ್ರದಯ ಮಿಡಿಯುವುದನ್ನು ನೋಡಿ ಸ್ರಷ್ಟಿ ನಗುತಿದೆ.ಕಣ್ಣು ರೆಪ್ಪೆಗಳು ಚುಂಬನ ನೀಡಿ ಕ್ಷಣದಲ್ಲಿ ಸುಖವನ್ನು ಕಾಣುತಿದೆ.. ಎದೆಯ ಪ್ರತಿ ಬಡಿತವು ಒಂದೊಂದು ಮಳೆ ಹನಿಯ ಹಾಗೇ ಭಾವನೆಗಳನ್ನು ಮೂಡಿಸುತ್ತದೆ. ನನ್ನುಸಿರು ಹಸಿರಾಗಲಿ ಎಂದ ಹಾಗೇ ಒಳ್ಳೆಯ ಸುಹಾಸನೆ ಬೀರುತಿದೆ.. ಒಂದೊಂದು ಉಸಿರಿನಲ್ಲಿ ಪ್ರೀತಿಯ ಮಾತು ಕೇಳುತಿದೆ.ಪ್ರೀತಿಯು ಬಂದಾಗ ಸಂಗಾತಿಯ ನೆನಪು ಬರುತಿದೆ.ಸಂಗಾತಿಯ ನೆನಪಾದಾಗ ಸ್ರಷ್ಟಿಯಲ್ಲಿಯೇ ಸ್ವರ್ಗವು ಕಾಣುತಿದೆ..
ಎಷ್ಟು ಸುಂದರ ಈ ಜೀವನ, ಈ ಸ್ರಷ್ಟಿ, ಈ ಸ್ನೇಹ, ಈ ಪ್ರೀತಿ, ಈ ಮನಸ್ಸು ಎಂದು ತುಟಿಗಳು ತೀವಗೊಲ್ಲುತ್ತಿವೆ.ನಿಜವಾದ ಮನಸ್ಸಿನಿಂದ ಜೀವನವನ್ನು,, ಸ್ನೇಹದಿದಂದ ಪ್ರೀತಿಯಾಗಿ ನೋಡಿದರೆ ಈ ಸ್ರಷ್ಟಿಯಲ್ಲಿ ಸ್ವರ್ಗ ಕಾಣಿಸುತ್ತದೆ...
ನನ್ನ ಪ್ರೀತಿಯ ಜೀವ :)