ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಗುರುವಾರ, ಫೆಬ್ರವರಿ 24, 2011

ನಾಚಿಕೆ

ನಾಚಿಕೆಯಲ್ಲೆನಿದೆ ಬಿಡಿ ಸ್ವಾಮಿ 
ಮೂರಕ್ಷರ ಮಾತ್ರ 
ದುಬಾರಿಯಾಗಿದೆ ಬಟ್ಟೆ 
ಹುಡುಗಿಯರಿಗೆ ಮಾತ್ರ 
ಪ್ರೀತಿ ತುಂಬಿರುವುದು 
ಹುಡುಗರಲ್ಲಿ ಮಾತ್ರ 
ಪ್ರೇಮಗೀತೆ ಹಾಡುವರು 
ಕಾಲೇಜಿನಲ್ಲಿ ಮಾತ್ರ 
ಮದುವೆ ಮಗು ಒಮ್ಮೆ ನೀಡುವ 
ಮೂರಕ್ಷರ ಮರೆತಿರುವರು ಮಾತ್ರ
-- 

ಬಜೇಟ ಬಂತು ಬಜೇಟ


ಬಜೇಟ ಬಂತು ಬಜೇಟ 
ಸರಕಾರ ತಂತು ಬಜೇಟ 
ನಾಡಿನ ಅಭಿವೃಧ್ಧಿಗೆ 
ಹಣದಲ್ಲಿರುವ ಬಜೇಟ
ನೂರಕ್ಕಿಲ್ಲ ಬೆಲೆ ಈಗ 
ಕೋಟಿಯಲ್ಲಿದೆ ಖರ್ಚಿನ ವೇಗ 
ರಾಜಕಾರಣಿಗಳ ಆಶ್ವಾಸಣೆ 
ಕುಂದಿದೆ ಸತ್ಯದ ವಾಸನೆ 
ಸಿಂಹಾಸನ ಏರಿದೆ ಬಂಗಾರ 
ನಿಜ ರೂಪವೆ ಸ್ತ್ರೀಗೆ ಶೃಂಗಾರ 
ಸ್ವಾರ್ಥದ ಕೆಲಸಕೆ ಬೇಕಿದೆ ಲಾಭ 
ವ್ಯಾಪಾರಿಗಳ ಮನ ಅಗಲಾದ ನಭ 
ಹೇಳಿದ ಹಾಗೆ ಮಾಡುವರಿಲ್ಲ 
ಮಾಡಿದ್ದನ್ನು ಹೇಳುವರಿಲ್ಲ 
ಬದಲಾಗಿದೆ ಕಾಲ ಈಗ ಕಲಿಯುಗ 
ಒಳೆಯ ಕೆಟ್ಟದ್ದು ತಿಳಿಯುವುದಿಲ್ಲ 
ನಿರುದ್ಯೋಗದ ಚಿಂತೆಗೆ ಕಡಿವಾಣ 
ನಡೆಯದಿರಲಿ ರಾಜಕೀಯದ ರಾಮಾಯಣ
ಬಜೇಟ ಬಂತು ಬಜೇಟ 
ಶುಭವಾಗಲಿ ಎಂದಿತು ಬಜೇಟ

ಬುಧವಾರ, ಫೆಬ್ರವರಿ 23, 2011

ಹೆಂಡತಿಯೊಬ್ಬಳು

ಹೆಂಡತಿಯೊಬ್ಬಳು ಮನೆಯೂಳಗಿದ್ದರೆ
ಮನೆಯಾವುಗುವುದು ಸ್ವರ್ಗ 
ನಾ ಕಂಡೆ ಅವಳಿಗೆ ಚಂದ್ರ 
ಹುಣ್ಣಿಮೆ ಮೂಡಿಸಿದಳು ಅಮವಾಸ್ಯೆಯ ದಿನ 

ಗಂಡ :
ನಾನಾಗದ ನಲ್ಲ 
ಆದರು ಕರೆದಳು ನನ್ನನ್ನು ನಲ್ಲ 
ನಾನಿದ್ದೆ ಬಲು ಸೋಮಾರಿ 
ಅವಳೆಂದಳು ನೀವೇ ನನ್ನ ರಾಜಕುಮಾರ ರ್ರಿ 
ಭಾವನೆ ಇಲ್ಲದ ನಾನಿದ್ದೆ ಬಂಡೆ
ಅವಳೆಂದಳು ಪ್ರೀತಿಯ ಉಂಡೆ 
ನಾ ಆಡಿದ ಮಾತಿಗೆ 
ಅವಳೆಂದಳು ನಾಚಿದ ತದಿಗೆ 
ನಾನಿದ್ದೆ ಖಾಲಿ ಖಾಲಿ 
ಅವಳಿದ್ದರೆ ಜ್ವಾಲಿ ಜ್ವಾಲಿ 

ಶುಕ್ರವಾರ, ಫೆಬ್ರವರಿ 4, 2011

ಬಯಕೆಯ ಪಾಡು


ಬಯಕೆಯ ಬೀಜವೊಂದು ಬೇರು ಬಿಟ್ಟಿದೆ
ಗಟ್ಟಿಯಾಗಿ ಎದೆಗೆ ಅಂಟಿಕೊಂಡಿದೆ
ಕಿತ್ತೆಸೆಯಲು ಬಾರದ ಪ್ರೀತಿ ಬಯಕೆಯಾಗಿದೆ 
ಹೂವಾವಿ ಹಣ್ಣು ಕೊಡುವ ಕನಸು ಕಾಣಿದೆ 
ಬಳ್ಳಿ ಚಿಗುರಿದರೂ ಮೊಗ್ಗು ಕಾಣೆಯಾಗಿದೆ
ದಿನ ಕಳೆದು ಬಯಕೆ ಬಳ್ಳಿ ಗಿಡವಾಗಿ ಬೆಳೆದಿದೆ
ಮೊಗ್ಗು ಬಾರದೆ ಮನಸನ್ನು ಕೊಲ್ಲುತ್ತಿದೆ
ಚಿಗುರುವ ಎಲೆ ದುಃಖದಲಿ ಕಿತ್ತೆಸೆಯುತಿದೆ
ಕತ್ತಲಲಿ ಕುರುಡನೊಬ್ಬ ಕನಸು ಕಂಡಂತಾಗಿದೆ 
ನನಸಾಗುವ ಕೊರಗಲ್ಲಿ ಗಿಡವು ಒಣಗಿ ಮುರಿದಿದೆ 
ಹೊಸ ಬಯಕೆಯ ಬಳ್ಳಿಗೆ ಮೌನದ ಮಾತು ಹೇಳಿದೆ 
ಮೊಗ್ಗು ಕಾಣದ ಈ ಗಿಡವಾ ಸುಡುವೆಯಾ?
ದುಃಖದಲಿ ಕೇಳಿದೆ
ಸಿಗಲಾರದ ಬಯಕೆಯನ್ನು ಕೊಂದಿ 
ಭಸ್ಮ ಮಾಡು ಎಂದಿದೆ
ಕಣ್ಣೀರಿನ ಹಾಗೆ ತನ್ನ ಎಲೆಗಳನ್ನು ಉದುರಿಸಿದೆ 
ಬಯಕೆಯು ಇದ್ದರು ಗಿಡವು ಒನಗಿ ಏಕಾಂಗಿಯಾಗಿದೆ


ಪ್ರೀತಿಯಲ್ಲಿರುವೆ ನೀನು

ಆ ನೋವೆಂಬ ಕತ್ತಲಲಿ
ಸುಖವಾಗಿ ಹೊಳೆಯುವ ನಕ್ಷತ್ರ ನೀನು

ಸದ್ದಿಲ್ಲದೇ ಚೆಲಿಸುವ ಮನದಲಿ
ಮೋಡವಾದೆ ನೀನು

ಪ್ರೀತಿಯ ಬೆಳಕಿನ ಹಸಿವನ್ನು ನೀಗಿಸಲು
ಮೂಡಿದ ಚಂದ್ರ ನೀನು

ಮನದ ಮಾತು ತಿಳಿಯಲು ಆಳ ಹೃದಯ
 ಹೊಂದಿದ ಕಡಲು ತೀರ ನೀನು

ನೀಲ ಸ್ವಚ್ಚಂದ ಪ್ರೀತಿ ಭಾವ ತುಂಬಿರುವ
ವಿಶಾಲ ಮನದ ಗಗನ ನೀನು

ಜೀವದ ದೀಪವನ್ನು ಎದೆಯಲ್ಲಿ ಬಚ್ಚಿಟ್ಟು
ಜಗ ಬೆಳಗುವ ಮಣ್ಣಿನ ಭೂಮಿ ನೀನು

ನನ್ನ ಹೃದಯದಲಿ ಕೇಳುವ ಬಡಿತದ
ಪ್ರೀತಿ ಉಸಿರಿನ ಪ್ರಿಯತಮ ನೀನುಮಂಗಳವಾರ, ಫೆಬ್ರವರಿ 1, 2011

ಕಣ್ಣೀರಿನ ಪುಸ್ತಕ


ದುಃಖದಲಿ ಬರೆದ ನೋವಿನ 
ಅಕ್ಷರಗಳನು ಅಳಿಸಬಾರದೆ
ನೊಂದ ಮನದ ಭಾವನೆಯ 
ಪುಟಗಳನ್ನು ತಿರುವುಬಾರದೆ
ಕಣ್ಣೀರಲ್ಲಿಯೆ ಮುಳುಗಿದ ದಿನಗಳ 
ಪುಸ್ತಕ ಕಳೆಯಬಾರದೆ
ನೋವಿನ ನೆನಪುಗಳ ಸಾಲಿನಲಿ 
ನೀರು ಬಿದ್ದು ಹರೆಯಬಾರದೆ
ಪುಟಗಳು ತುಂಬಿ ಅದರ ಸ್ಥಾನ 
ಮೂಲೆ ತಿಳಿದರು ನೆನಪಿಸುವುದನ್ನು 
ಮರೆಯಬಾರದೆ..?

ನನ್ನ ಪ್ರೀತಿ


ನೀನು ಕಾಯಿಸಿದೆ ಕಾಡಿ ಕೋಪಿಸಿದೆ 
ನಾನು ಸ್ನೇಹಿಸಿದೆ ಮೆಚ್ಚಿ ಪ್ರೀತಿಸಿದೆ 
ನೀನು ನಗಿಸಿದೆ ಮೆಲ್ಲಗೆ ಮುದ್ದಿಸಿದೆ 
ನಾನು ಹಾಡಿದೆ ಪ್ರೀತಿಯ ವರ್ಣಿಸಿದೆ 
ನೀನು ಆಡಿಸಿದೆ ಸರಸದ ಮೋಡಿ ಮಾಡಿಸಿದೆ 
ನಾನು ನಿನ್ನವಳಾದೆ ಜೀವದ ಪ್ರೇಯಸಿಯಾದೆ