ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಗುರುವಾರ, ನವೆಂಬರ್ 5, 2009

ಓ ನನ್ನ ಗೆಳೆಯ

ಓ ನನ್ನ ಗೆಳೆಯ , ಸ್ವಲ್ಪ ಹತ್ತಿರ ಬಾ ..
ಮನಸ್ಸಿನ ಮಾತನ್ನು ಕದ್ದು ಕೇಳು ಬಾ
ಹೃದಯದ ಬಡಿತವನ್ನು ಕೇಳಿಸುವೆ ಬಾ
ಕನಸು ಕಾಣುವ ಈ ಹುಡುಗಿಗೆ ಸಂಜೆಯ ತಂಗು ತಾ.
ನಿನ್ನ ನೋಟಕ್ಕೆ ಇವಳು ನಾಚಿ ಬಿಡುವಳು
ಆ ನಗುವಿಗೆ ಕಣ್ಣಿನ ಭಾಷೆ ಕಲಿಸುವಳು
ಮೌನದಲ್ಲಿಯೇ ನಿನ್ನ ಮನಸ್ಸನು ಸೆರೆ ಹಿಡಿಯುವಳು
ಓ ನನ್ನ ಗೆಳೆಯ ,ಸ್ವಲ್ಪ ಹತ್ತಿರ ಬಾ..
ನೀನು ಪ್ರೀತಿಸುವೆ ಎಂದು ಹೇಳಿದಾಗ
ಆ ತುಟಿಗಳ ಮೇಲೆ ನಗುವು ಚಿಮ್ಮುವಳು
ನಾ ನಿನ್ನ ಪ್ರೀತಿಸುವೆ ಎಂದು ಮೆಲ್ಲನೆ ಹೇಳುವಳು
ಓ ನನ್ನ ಗೆಳೆಯ , ಸ್ವಲ್ಪ ಹತ್ತಿರ ಬಾ..
ಇವಳ ಕೈಯನ್ನು ನೀನು ಮುಟ್ಟಿದಾಗ
ಕಣ್ಣು ಮುಚ್ಚಿ ನಿನ್ನನು ಅಪ್ಪಿಕೊಳ್ಳುವಳು
ನಿನ್ನ ಮನಸ್ಸಿಗೆ ಅವಳ ಮನಸ್ಸನ್ನು ಪ್ರೀತಿಯಿಂದ ಅರ್ಪಿಸುವಳು
ಓ ನನ್ನ ಗೆಳೆಯ , ಸ್ವಲ್ಪ ಹತ್ತಿರ ಬಾ
ನನ್ನ ಮನಸ್ಸಿನ ಮಾತನ್ನು ಮುಚ್ಚಿ ಕೇಳು ಬಾ..

ನನ್ನ ಪ್ರೀತಿಯ ಜೀವ :)

2 ಕಾಮೆಂಟ್‌ಗಳು:

  1. This poem is very well written. The emotion you conveyed in this writing is amazing. I enjoyed reading it. ಆ ಗೆಳತಿಗೆ ನಿಜವಾದ ಗೆಳಯ ಸಿಕ್ಕರೆ, ಅದು ಆ ಸ್ವರ್ಗಕಿಂತ ಮಿಗಿಲು.

    ಪ್ರತ್ಯುತ್ತರಅಳಿಸಿ