ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಭಾನುವಾರ, ನವೆಂಬರ್ 22, 2009

ನನ್ನ ಮನ

ಯಾರಿಗೂ ಯಾರು ಇರುವುದಿಲ್ಲ

ಎಂದು ಹೇಳುವ ಮಾತು ನಿಜವೆನಿಸುತ್ತಿದೆ

ದು:ಖವನ್ನು ಹಂಚಿಕೊಳ್ಳಲು

ಒಬ್ಬ ಸ್ನೇಹಿತನು ಬೇಕೆನಿಸುತ್ತಿದೆ  

ಮನಸ್ಸಿಗೆ ನೋವಾದರೂ ಕಣ್ಣಿರುಬಾರದು

ಎಂದು ರೆಪ್ಪೆಗಳಿದ್ದಕ್ಕೆ ಒಳ್ಳೆಯದೆನಿಸುತ್ತಿದೆ

ನಾನು ಕೆಟ್ಟ ಹುಡುಗಿ ಎಂದು

ಈಗ ಪ್ರೀಯವಾದವರಿಂದ ತಿಳಿಯುತ್ತಿದೆ

ನನ್ನ ಮನಸ್ಸೇ ಈಗ ಧೈರ್ಯ

ಹೇಳುವ ಪರಿಸ್ಥಿತಿಯು ಉಂಟಾಗಿದೆ

ಸುಖವನ್ನು ಅನುಭವಿಸಿ ದು:ಖವನ್ನು

ಮರೆಯುವುದೇ ಜೀವನವೆನಿಸುತ್ತಿದೆ

ಸಹನಶೀಲತೆಯೇ ನನಗೆ ಆಧಾರ

ಎಂದು ಇನ್ನು ಬದುಕಬೇಕೆನಿಸುತ್ತಿದೆ ..ನನ್ನ ಪ್ರೀತಿಯ ಜೀವ :)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ