ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಬುಧವಾರ, ನವೆಂಬರ್ 4, 2009

ಇಂದು ಏನಾಗಿದೆ

ಏನಾಗಿದೆ ಎಂದು ತಿಳಿಯಲಾಗಿದೆ
ಮನಸ್ಸಿನಲ್ಲಿ ಮೌನ ಮಾತ್ರ ತುಂಬಿದೆ
ನಾನು ಒಬ್ಬಂಟಿ ಎಂಬ ಭಾವನೆಯಾಗಿದೆ
ನಿನ್ನ ಜೊತೆ ಮಾತನಾಡುವ ಆಸೆಯಾಗಿದೆ
ನೀನು ನನ್ನ ಹತ್ತಿರ ಬೇಕಾಗಿದೆ
ನಿನ್ನ ಕೈ ಹಿಡಿದು ಕುಳಿತು ಕೊಳ್ಳುವ ಮನಸ್ಸಾಗಿದೆ
ನಿನ್ನನ್ನು ಅಪ್ಪಿಕೊಂಡು ಅಳಬೇಕಾಗಿದೆ
ನನ್ನ ಮನಸ್ಸನ್ನು ನಿನಗೆ ನೀಡುವ ಹಾಗಿದೆ
ಹೃದಯದ ಪ್ರತಿ ಬಡಿತವು ನಿನ್ನ ನೆನಪಿನಿಂದ ಕಾಡುತಿದೆ
ಕತ್ತಲಲ್ಲಿ ಕಣ್ಣು ಮುಚ್ಚಿ ಕುಳಿತುಕೊಳ್ಳುವ ಮನಸ್ಸಾಗಿದೆ
ಜೀವನದಲ್ಲಿ ಮೌನ ಮಾತ್ರ ಪ್ರೀತಿಯಾಗಿದೆ
ಏನಾಗಿದೆ ಎಂದು ತಿಳಿಯಲಾಗಿದೆ
ಮನಸ್ಸಿನಲ್ಲಿ ಮೌನ ಮಾತ್ರ ತುಂಬಿದೆ..

ನನ್ನ ಪ್ರೀತಿಯ ಜೀವ :)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ