ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಭಾನುವಾರ, ನವೆಂಬರ್ 22, 2009

ಮನಸ್ಸಿನ ದು:ಖ


ಮನಸ್ಸಿನ ಶಾಂತಿಗೆ ನೆಲೆಯಿಲ್ಲದೆ

ಅಶಾಂತಿಯಾದ ಮನ ಹುಚ್ಚು ಹಿಡಿದ

ನಾಯಿಯ ಹಾಗೆ ಪರದಾಡುತ್ತಿದೆ

ಮನಸ್ಸಿನ ನೋವಿಗೆ ತಾಳ್ಮೆಯಿಲ್ಲದೆ

ಕಣ್ಣೀರಿನಿಂದ ಮನ ಪ್ರವಾಹ ಬಂದ

ಜನರ ಪರಿಸ್ಥಿತಿ ಉಂಟಾಗುತ್ತಿದೆ

ಮನಸ್ಸಿನ ದು:ಖಕ್ಕೆ ಸೋಲು ಇಲ್ಲದೆ

ಸಂಕಟದಿಂದ ಮನ ಅನಾಥರಾದ

ಮಕ್ಕಳ ಹಾಗೆ ಅಲೆದಾಡುತ್ತಿದೆ

ಮನಸ್ಸಿನ ಅಶಾಂತಿಯೇ ದು:ಖಕ್ಕೆ

ಕಾರಣ ಎಂದು ನನ್ನ ಮನ ಕೂಗಿ ಹೇಳುತ್ತಿದೆ

ಅಶಾಂತಿಯೇ ನೋವಿನ ಕಣ್ಣೀರಿಗೆ

ಕಾರಣ ಎಂದು ಈ ಮನ ದು:ಖದಿಂದ ಹೇಳುತ್ತಿದೆ


ನನ್ನ ಪ್ರೀತಿಯ ಜೀವ :)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ