ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಸೋಮವಾರ, ಏಪ್ರಿಲ್ 25, 2011

ಬೇಸರವೇಕೆ ?



ಕಪ್ಪು ಮೋಡಗಳೇ ಏಕಿಷ್ಟು ಬೇಸರ 
ಮೌನವೇಕೆ ಮನದಲಿ ಕೊರಗುತಿಹನು ನೇಸರ 

ತಂಗಾಳಿ ಮೇಲೇಕೆ ಸಿಟ್ಟು 
ಬಿಸಿಲು ಕುಂದಿದೆ ತಲೆ ಕೆಟ್ಟು 
ನಿನ್ನ ಕೋಪಕೆ ಏನು ಕಾರಣ 
ಪ್ರೀತಿಯಿಂದ ಕೇಳಿದ ವರುಣ 
ಮುಗಿಲಿನ ಬೇಸರಕೆ ನಾನಾದೆ ಮೋಡ
ಕವಿ ಮನ ನುಡಿದಿದೆ ದು:ಖಿಸ ಬೇಡ 
ಸುಂದರವಾಗಿ ವರ್ಣಿಸಿದ ಕವಿ ಕಪ್ಪು ಕಾರ್ಮೋಡ 
ಖುಷಿಯಾದ ಮೋಡ ಕರಗಿದೆ ನೋಡ 
ದು:ಖದ ಹನಿಗಳು ಖುಷಿಯಾಗಿ ಕೊಟ್ಟು 
ಮನಗಳ ಬೇಸರ ಓಡಿಸಿ ಬಿಟ್ಟು 
ಸ್ವಾತಿ ಮುತ್ತಿನ ಮಳೆಹನಿಯಾಗಿ 
ಸಂತಸದ ಮಾತು ಕವಿಗಲಿಗಾಗಿ 
ಹನಿ ಹನಿಗಳ ಪದ ಜೋಡಿಸಿ 
ಕವನ ಬರೆದ ಪ್ರೀತಿ ಮೂಡಿಸಿ 
ಕೊನೆಯಾಗಿದೆ ನೋವು ಮೋಡಗಳಿಗೆ 
ಸಂತೋಷ ಮೂಡಿದೆ ಪ್ರಕೃತಿಯ ಸೌಂದರ್ಯಕೆ

ಕಪ್ಪು ಮೋಡಗಳೇ ಏಕಿಷ್ಟು ಬೇಸರ 
ಮೌನವೇಕೆ ಮನದಲಿ ಕೊರಗುತಿಹನು ನೇಸರ 




.

14 ಕಾಮೆಂಟ್‌ಗಳು:

  1. hai
    nim kavite e
    ಮುಗಿಲಿನ ಬೇಸರಕೆ ನಾನಾದೆ ಮೋಡ
    ಕವಿ ಮನ ನುಡಿದಿದೆ ದು:ಖಿಸ ಬೇಡ salugalu nange
    tumbha istavadavu sahaj sundar kavite

    ಪ್ರತ್ಯುತ್ತರಅಳಿಸಿ
  2. ಪ್ರಿಯ ಕೀರ್ತಿ, 'ಕವಿಮನ'ಕ್ಕೆ ಪ್ರವೇಶಿಸಿದ್ದಕ್ಕೆ ವಂದನೆ. ನಿಮ್ಮ ಭಾವನೆಗಳಿಗೂ ವಾಸ್ತವತೆಗೂ ಹೊಂದಾಣಿಕೆಯಾಗಲಿ, ಶುಭವಾಗಲಿ ಎಂದು ಹಾರೈಸುವೆ.

    ಪ್ರತ್ಯುತ್ತರಅಳಿಸಿ
  3. @ manasa:- thank u madam..
    @ nararaj:-ಧನ್ಯವಾದಗಳು
    @ dinkar:- ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  4. ಕೀರ್ತಿ ಮೋಡದ ಮಾಯೆ ..ಕರಗಿದ ಛಾಯೆ ...ಎಲ್ಲ ಹರಿದಿತ್ತು ನೀರಾಗಿ...ಭುವಿಯ ವಾಹಿನಿಯಾಗಿ....ಒಳ್ಲೆ ವಿಷಯ ಮತ್ತು ಚಂದದ ಸಾಲುಗಳು...

    ಪ್ರತ್ಯುತ್ತರಅಳಿಸಿ
  5. ಜಲನಯನ ಸರ್..
    ನಿಮ್ಮ ಪ್ರತಿಕ್ರಿಯೆಗೆ ತುಂಬ ಧನ್ಯವಾದಗಳು.. ಭೇಟಿ ನೀಡುತ್ತಿರಿ..:)

    ಪ್ರತ್ಯುತ್ತರಅಳಿಸಿ