ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಬುಧವಾರ, ಏಪ್ರಿಲ್ 6, 2011

ಆಸೆಗೊಂದು ಕವನ



ಕವಿಯತ್ರಿ ಆಗುವ ಆಸೆ
ಮನ ತುಂಬ ಮಹದಾಸೆ 

ಪದಗಳಿಗೆ ಪದ ಪೋಣಿಸುವಾಸೆ 
ಸ್ವರಗಳಿಗೆ ಸ್ವರ ಸೇರಿಸುವಾಸೆ 
ಪ್ರಾಸಗಳ ಮದುವೆ ಮಾಡಿಸುವಾಸೆ
ಕವನ ಕಟ್ಟುವ ಮಹದಾಸೆ
ನನಗೆ ಕವಿಯತ್ರಿ ಆಗುವ ಆಸೆ

ಕನಸೆಲ್ಲ ನನಸಾಗಿಸುವಾಸೆ 
ದಿನದಲ್ಲಿ ಚಂದ್ರನ ತೋರಿಸುವಾಸೆ 
ಕಲ್ಪನೆಯ ಕಡಲಲ್ಲಿ ತೇಲಾಡುವಾಸೆ
ಕವನ ಕಟ್ಟುವ ಮಹದಾಸೆ
ನನಗೆ ಕವಿಯತ್ರಿ ಆಗುವ ಆಸೆ

ಬುವಿಯ ರೂಪ ವರ್ಣಿಸುವಾಸೆ
ಮೋಡದಲ್ಲಿ ಮನೆ ಕಟ್ಟುವಾಸೆ
ಸೂರ್ಯ ಚಂದ್ರರಲ್ಲಿ ಪ್ರೀತಿ ಹುಟ್ಟಿಸುವಾಸೆ
ಕವನ ಕಟ್ಟುವ ಮಹದಾಸೆ
ನನಗೆ ಕವಿಯತ್ರಿ ಆಗುವ ಆಸೆ

ನಯನಗಳ ಮಾತಿನಲಿ ಸ್ವರ್ಗ ತೋರಿಸುವಾಸೆ 
ಮೌನವಾದ  ಬಂಡೆಯಲ್ಲಿ ಶಬ್ದ ಹೊರಡಿಸುವಾಸೆ 
ಕುರುಡನಿಗೆ ಬಣ್ಣವ ಗುರುತಿಸುವಾಸೆ 
ಕವನ ಕಟ್ಟುವ ಮಹದಾಸೆ
ನನಗೆ ಕವಿಯತ್ರಿ ಆಗುವ ಆಸೆ







2 ಕಾಮೆಂಟ್‌ಗಳು:

  1. ಕೀರ್ತಿ..ಹೌದು ..ಇಂಥ ಸುಂದರ ಕವನ ಬರೆದ ಮೇಲೆ ಕವಿಯತ್ರಿ ಆದಮೇಲೆ ಮತ್ತೆಂಥ ಆಸೆ..?? ಸುಂದರ ಆಸೆಗೆ ಚಂದದ ಪದಗಳ ಬಳಕೆ... ಭುವಿಗೆ- ಆಗಬೇಕು ಬುವಿ ಅಂತಿದೆ..ಹಾಗೇ..ನಿಮ್ಮ ಕವನವಿಡೀ ನೀವೇ ಏನೋ ಮಾಡುವಾಸೆಯನ್ನ ತೋರಿಸಿದ್ದೀರಿ ಅಥವಾ ಹಂಬಲಿಸಿದ್ದಿರಿ...ಆದರೆ ಒಂದು ಸಾಲು ಸ್ವಲ್ಪ ಮಾರ್ಪಡಿಸಿದರೆ ಚಂದ...ಕುರುಡನಿಗೆ ಬಣ್ಣವ ತೋರ್ಪಡಿಸುವಾಸೆ ಅಥವಾ ತೋರಿಸುವಾಸೆ..ಆದ್ರೆ ಹೇಗೆ? ಇದು ನನ್ನ ಅಭಿಪ್ರಾಯ ಅಷ್ಟೇ..ನಿಮ್ಮ ಭಾವಾರ್ಥ ಬೇರೆ ಇದ್ದಿರಬಹುದು...
    ಒಟ್ಟಲ್ಲಿ ಸುಂದರ ಕವನ...

    ಪ್ರತ್ಯುತ್ತರಅಳಿಸಿ
  2. sir .. kaviyatri eno aade anta helidri..
    eeg dodda kaviyaagabekemba mattondu aase manadalli mane kattalu hattide spelling correction maadtini..
    neevu badalaayisida saalu nanage balu ishtavaayitu.
    salahe neediddakke tumba dhanyaavadgal sir ..
    heege bloggige hejje iduttiri nimma gurutininda bahutek naanondu dina kaviyaade enba kaviteyannu neevu kaanabahudu

    ಪ್ರತ್ಯುತ್ತರಅಳಿಸಿ