ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಬುಧವಾರ, ಜನವರಿ 25, 2012

ಭಾರತಾಂಬೆ



ಬರೆಯಬೇಕೆಂದೆ ನಾನೊಂದು ಕವನ ಮುಂಜಾನೆಯಲಿ
ಭಾವದ ಕುಸುಮ ಅರಳಿದ ದಿನವಾಗಲಿ
ಭಾರತಾಂಬೆಯ ಮಡಿಲಿಗೆ ಮತ್ತೆ ಮಹಾತ್ಮರು ಹುಟ್ಟಿ ಬರಲಿ
ನಾನು ನನ್ನ ಸ್ವಾರ್ಥ ತೊಲಗಿ ನಾವು ಎಂಬುದಾಗಲಿ
ಜಾತಿ ಭೇದ ಬೇಡ ನಮಗೆ ನಾವೆಲ್ಲರೂ ಒಂದಾಗಲಿ
ಸಂಸ್ಕ್ರತಿ ಸಂಗಾತಿಯ ಜೊತೆಯೆಂದೂ ಮರೆಯದಿರಲಿ
ದೇಶಕ್ಕಾಗಿ ಮಡಿದ ಸೇವಕರಿಗೆ ಮನದಲ್ಲಿ ಗೌರವವಿರಲಿ
ಮಹಾತ್ಮರಿದ್ದರೆಂದು ಸ್ವಾತಂತ್ರ್ಯ ನಮ್ಮದಾಗಿದೆ ನೆನಪಿರಲಿ
ದೇಶ ಭಕ್ತಿ ಎಂದೆಂದಿಗೂ ಕುಂದದಿರಲಿ
ರಾಮರಾಜ್ಯದ ಕನಸು ನನಸಾಗಿಸುವ ಗುರಿಯಾಗಿರಲಿ
ನಮ್ಮ ಜನನಿ ಭಾರತಾಂಬೆಯು ಶಿಖರದ ಎತ್ತರಕೆ ಹಾರಲಿ
ಅವಳ ಕೀರ್ತಿ ಶಿಖರದ ಕಿರೀಟವಾಗಲಿ

ಎಲ್ಲರಿಗೂ ಗಣರಾಜ್ಯೋತ್ಸವ ಶುಭಾಷಯಗಳು

4 ಕಾಮೆಂಟ್‌ಗಳು:

  1. ಕೀರ್ತಿ..ನಿಮ್ಮದೂ ಅದೇ ವಿಷಯ ಜನನೀ ಜನ್ಮ ಭೂಮಿ...ವಾವ್.. ನನ್ನ ಬ್ಲಾಗ್ ಕವನದ ಸಾಲು ಇಲ್ಲೂ ಪ್ರತಿಬಿಂಬಿತವಾಗಿದೆ....ದೇಶ ಭಕ್ತಿ ಎಂದೆಂದಿಗೂ ಕುಂದದಿರಲಿ...
    ಚನ್ನಾಗಿದೆ.

    ಪ್ರತ್ಯುತ್ತರಅಳಿಸಿ
  2. ಕೀರ್ತಿ ಮೇಡಮ್,
    ಮಹತ್ತರವಾದ ಆಶಯಗಳ ಗೀತೆಯನ್ನು ಹಾಡಿರುವಿರಿ. ನಿಮ್ಮ ಕನಸುಗಳು ನನಸಾಗಲಿ ಎಂದು ಹಾರೈಸುವೆ. ನಿಮ್ಮ ಇತರ ಕವನಗಳನ್ನೂ ಓದಿದೆ. ಜೋಗುಳ ಹಾಡು ತೂಂಬ ವಿನೋದಪೂರ್ಣವಾಗಿದೆ!

    ಪ್ರತ್ಯುತ್ತರಅಳಿಸಿ
  3. @ ushoday thanks...
    @ jalanayan :- tumba dhanyavaad sir..
    @ sunaath :- nimma haaraikege tumba dhanyavad..

    ಪ್ರತ್ಯುತ್ತರಅಳಿಸಿ