ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಶುಕ್ರವಾರ, ಆಗಸ್ಟ್ 13, 2010

ನನ್ನ ಭೂಮಿ

ಹೆಮ್ಮೆಯಿಂದ ಹೇಳುವೆ ನಾನು

ಸ್ವಾತಂತ್ರ ದಿನವು ಇಂದು

ಗೌರವದಿಂದ ಮೆಚ್ಚುವೆ ನಾನು

ಭಾರತೀಯನಿರುವೆ ಎಂದು ..

ಒಳ್ಳೆಯ ವಿಚಾರಗಳ

ಪ್ರೀತಿಯ ಹೃದಯಗಳ

ಅಹಿಂಸೆ ತತ್ವ ಹೇಳುವ

ಮತ್ತು ಸತ್ಯವನ್ನೇ ಸಾರುವ

ಭಾರತ ದೇಶವು ಒಂದು ..

ಶಾಂತಿಯ ನೆಲೆಯಿರುವ

ಒಕ್ಕೂಟ ಸಮಾಜದ

ಪ್ರಜೆಗಳೇ ಆಡುವ

ಭೂಮಿಯೇ ಭಾರತವಿದು..

ಭವ್ಯಾತ್ಮರು ಹುಟ್ಟಿದ

ಧರ್ಮವನ್ನು ನಡೆಯುವ

ಜಾತಿ ಭೇದವಿಲ್ಲದ

ಇದೊಂದೇ ಭವ್ಯ ಭೂಮಿಯಿದು ..

ಇದೆ ರಾಷ್ಟ್ರಭೂಮಿ

ಇದೆ ಪ್ರೇಮಭೂಮಿ

ಇದೇ ನನ್ನ ಭೂಮಿಯಿದು

ಜೈ ಭಾರತವಿದು..

ಜೈ ಹಿಂದ್  ...

2 ಕಾಮೆಂಟ್‌ಗಳು:

  1. ದೇಶಪ್ರೇಮದ ಮಾತುಗಳು ಕವನದ ಹಾದಿಯಲ್ಲಿ ಎಷ್ಟು ಚನ್ನಾಗಿರುತ್ತವೆ...?? ಅಲ್ಲವೇ..? ಚನ್ನಾಗಿದೆ ಕವನ...ರಜದಲ್ಲಿದ್ದೆ ಅದಕ್ಕೆ ತಡ...ಕೀರ್ತಿ

    ಪ್ರತ್ಯುತ್ತರಅಳಿಸಿ