ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಸೋಮವಾರ, ಆಗಸ್ಟ್ 9, 2010

ಬೃಂದಾವನ...ಬಣ್ಣ ಬಣ್ಣದ ಮೀನು 
ಮಿಂಚಿ ಮಿರುಗುವ ಕಣ್ಣು 
ಅದರ ಜೊತೆಗಿನ ಆಟ
ನಯನಗಳ ಬಲು ಓಟ 
ಮುತ್ತು ಕೊಡಲು ಬಂದೆವು 
ಮುಟ್ಟಿ ನೋಡು ಎಂದವು 
                                 ಪ್ರೀತಿ ಮಾಡಿದ ಹಾಗೆ ಕಣ್ಣೋ೦ದು  ಹೊಡೆದವು 
                                          ಬೃಂದಾವನದ ಮೀನುಗಳು ಈ ರೀತಿ ಕಂಡವು 
ಹಸಿರು ಹುಲ್ಲಿನ ಹೊದಿಕೆ 
ಅಪ್ಪಿಕೊಳ್ಳುವ ಬಯಕೆ 
ಮಂಜು ಹನಿಗಳ ಮುತ್ತು 
ನಕ್ಷತ್ರ ಕಾಣುವುದು ಗಮ್ಮತ್ತು 
ಅರಳಿದ ಹೂಗಳ ನಗುವು 
ಪ್ರೀತಿಯ ನೋಟದ ಮಿಲನವಾಗಿತ್ತು
                                             ನಿಸರ್ಗದ ಸುಖವನ್ನು ಅನುಭವಿಸು ಎಂದವು 
                                             ಬೃಂದಾವನದ ಹಸಿರು ಉಸಿರಲ್ಲಿ ಕಂಡೆವು 
                                                
ಕಾರಂಜಿಯ ರಂಗು ಕಾಮನಬಿಲ್ಲು 
ಚಿಮ್ಮುವ ವೇಗ ಜಿಂಕೆಯ ಮೇಲೂ 
ಹನಿಯ ಸ್ಪರ್ಶ ಸುಖದ  ಸಂಕೇತ 
ಅಲ್ಲಿಯ ನೋಟ ಪ್ರೀಯ ಅತ್ಯಂತ 
ನಾದಕ್ಕೆ ತಾಳ ಹಾಕುವ ಕಾರಂಜಿಯಿದು
ಕಣ್ಣಿನ ಆತ್ಮಕ್ಕೆ ಪುನ್ಯಕೊಟ್ಟ ಸ್ಥಳವಿದು 
                                        ಕಾರಂಜಿಯ ನೋಡಿ ನೀ ನಲಿದಾಡು ಅಂದವು 
                                        ಬೃಂದಾವನದ ಕಾರಂಜಿಗೆ ನಾವೆಲ್ಲರೂ ಮೈನೀದವು 

ಕೃಷ್ಣಸಾಗರ ನಿರ್ಮಿಸಿರುವ ಪುನ್ಯಾತ್ಮನಾರು
ಸರ್.ಎಂ.ವಿಶ್ವೇಶ್ವರಯ್ಯರನ್ನು ಮರೆಯುವರಾರು 
ಕನ್ನಡ ನಾಡಿನ ಹೆಮ್ಮೆಯ ಪುತ್ರ ನೀನು 
ಮೈಸೂರಿನ ಖ್ಯಾತಿಗೆ ಶ್ರಮಿಸಿದ ಕೀರ್ತಿವಂತ ನೀನು 
ಇಲ್ಲಿಯ ಹಸಿರು ನಿನ್ನ ಉಸಿರು 
ನೀರು ಕಾರಂಜಿ  ನಿನ್ನ ಕಣ್ಣು 
ಈ ಕೃಷ್ಣಸಾಗರ ನಿನ್ನ ದೊಡ್ಡ ಮನಸ್ಸು 
                                             ಬೃಂದಾವನದ ಸೊಗಸು ನಿನ್ನ ನನಸಾದ ಕನಸು 
                                             ಈ ಬೃಂದಾವನ ಕಂಡು ನನ್ನ ಮನ ನುಡಿಯಿತು 


ನನ್ನ ಪ್ರೀತಿಯ ಜೀವ :)