ನೆನನಪುಗಳು ನೆನಪಾಗಿ ಬರುವಾಗ
ಹೃದಯದ ಮಿಡಿತವು ಮಂದ
ನೆನಪಲ್ಲಿರುವ ಸುಖವು
ಮನದಾಳದಿ ಹೊಕ್ಕಿ ಮೌನದ ರಾಗ
ಉಸಿರೆಳೆವ ವೇಗದಲಿ
ಬರುವ ನೆನಪುಗಳು
ಹುಡುಕುತಿವೆ ಕ್ಷಣ ಕ್ಷಣಕೂ
ಆ ನಯನಗಳನು, ಹೃದಯಗಳನು
ಮಾಯವಾದ ಮಿಂಚು - ನೆನಪಿನ
ಕಿರಣ ಹಾಯುತಿವೆ ಕಣ್ಣೆದುರು
ನೆನಪಿನಲಿ ತುಂಬಿವೆ ನಸುನಕ್ಕ ಕ್ಷಣಗಳು
ತುಸು ಬಿಕ್ಕ ನೆಪಗಳು
ಮನದ ಪಕ್ಕದ ಮನವೊಂದು
ಮೌನದಿ ಮಾತಾಡಿ ಮನೆಮಾಡಿಹುದು
ನೆನಪಿನ ನೆಪವಾಗಿ ಹೃದಯಕಿಳ್ಳಿದು
ಭಾವದರಸಿಯ ಚುಂಬಿಸುವುದು
ಭಾವಪೂರ್ಣ ಭಾವಗೀತೆ!
ಪ್ರತ್ಯುತ್ತರಅಳಿಸಿdhanyavadagalu
ಪ್ರತ್ಯುತ್ತರಅಳಿಸಿ