ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಶುಕ್ರವಾರ, ಸೆಪ್ಟೆಂಬರ್ 9, 2016

ಚೆ೦ದ ನೆನಪು
ನೆನನಪುಗಳು ನೆನಪಾಗಿ ಬರುವಾಗ
ಹೃದಯದ ಮಿಡಿತವು ಮಂದ
ನೆನಪಲ್ಲಿರುವ ಸುಖವು
ಮನದಾಳದಿ ಹೊಕ್ಕಿ ಮೌನದ ರಾಗ
ಉಸಿರೆಳೆವ ವೇಗದಲಿ
ಬರುವ ನೆನಪುಗಳು
ಹುಡುಕುತಿವೆ ಕ್ಷಣ ಕ್ಷಣಕೂ
ಆ ನಯನಗಳನು, ಹೃದಯಗಳನು
ಮಾಯವಾದ ಮಿಂಚು - ನೆನಪಿನ
ಕಿರಣ ಹಾಯುತಿವೆ ಕಣ್ಣೆದುರು
ನೆನಪಿನಲಿ ತುಂಬಿವೆ ನಸುನಕ್ಕ ಕ್ಷಣಗಳು
ತುಸು ಬಿಕ್ಕ ನೆಪಗಳು
ಮನದ ಪಕ್ಕದ ಮನವೊಂದು
ಮೌನದಿ ಮಾತಾಡಿ ಮನೆಮಾಡಿಹುದು
ನೆನಪಿನ ನೆಪವಾಗಿ ಹೃದಯಕಿಳ್ಳಿದು

ಭಾವದರಸಿಯ ಚುಂಬಿಸುವುದು 

2 ಕಾಮೆಂಟ್‌ಗಳು: