ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಶುಕ್ರವಾರ, ಸೆಪ್ಟೆಂಬರ್ 9, 2016

ನಿನ್ನದಾಗಿರುವ ನಾನು    


  


ನಯನಗಳ ಬದಿಯಲ್ಲಿ ಅಂಟಿಕೊಂಡಿರುವ
ರೆಪ್ಪೆಯಡಿ ಅಡಗಿಕೊಂಡಿರುವೆ ನೀನು
ನಯನ ನಾ ಮುಚ್ಚಿದರೆ ಮೆಲ್ಲನೆ
ಮನಸ್ಸಿನ ದಾರಿ ಹುಡುಕುವೆ ನೀನು
ಎದೆ ಬಡಿತದ ಸದ್ದಿಗೂ ಹೆದರದೆ
ಮನಸಲ್ಲಿ ಕಾಲಿಡುವೆ ನೀನು
ಭಾವ ಭಾವಗಳ ಜೊತೆಯಾಟದಲಿ
ಮನ ಗೆಲ್ಲುವೆ ನೀನು
ಭಾವನೆಯ ಗೆಲುವಿನಲಿ ಮರಳುವೆ
ರೆಪ್ಪೆಯಡಿ ನೀನು
ಮನಸ್ಸು ನಿನ್ನ ನೆಪದ ಭಾವದಲಿ
ಬೆರೆತು ಕಣ್ಣರೆಪ್ಪೆಗೆ ಸ್ಪರ್ಶಿಸಿದ

ಹನಿ ಕಣ್ಣೀರು ನೀನು


2 ಕಾಮೆಂಟ್‌ಗಳು: