ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಶನಿವಾರ, ಮಾರ್ಚ್ 26, 2011

ಗಗನ ಮುಟ್ಟುವ ಬಯಕೆ

ಬಡವಿ ನಾನು ಈ ಭೂಮಿಗೆ 
ಎಡವಿದೆ ಆಸೆಯ ಲೋಕಕೆ 
ಹೆಜ್ಜೆ ಹೆಜ್ಜೆಗೂ ಬಯಕೆಯೇ 
ಮನಸು ಕರಗಿದೆ ಕಾವ್ಯಕೆ 

ಮೊಗ್ಗಿಲ್ಲದ ಹೂವು ಅರಳಿದೆ 
ದಿಕ್ಕು ಕಾಣದೆ ಮನ ಸೋತಿದೆ 
ಚಂದರನ ಹತ್ತಿರ ಹೋಗಬೇಕೆ 
ಹಕ್ಕಿಯ ರೆಕ್ಕೆಯಾಗಿ ಹಾರಬೇಕೆ 

ಅಂಗಾಲು ಭೂಮಿಯ ಎದೆಗೆ ಅಪ್ಪಿದೆ 
ಮನಸು ಗಗನಕೆ ಮುಟ್ಟಿದೆ 
ಬೇಡವೆಂದರು ಮಾತು ಕೇಳದೆ 
ಕನಸಲಿ ಬಯಕೆಯು  ಹುಟ್ಟಿ ಖುಷಿಯಿದೆ 

ಅನಂತ ಬೆಳಗುವ ಜೀವನದ ದೀಪ 
ಬಯಕೆಯ ಎಣ್ಣೆಯಾಗಿ ಕರಗಿದೆ 
ಗಗನ ಮುಟ್ಟುವ ಬಯಕೆ ಬಿಡದು 
ಕನಸು ಕಾಣುವ ಮನಸು ಇರದು 



ಕನಸಿನ ಹುಡುಗಿ


ಬಿಳಿ ಬಟ್ಟೆ ಧರಿಸಿ 
ತುಟಿಗೆ ಬಣ್ಣ ಬಳಸಿ 
ಸದ್ದಿಲ್ಲದೇ ಹೆಜ್ಜೆ ಹಾಕುತ 
ಮನದ ದಾರಿಯಲಿ ಸಾಗುತ 
ಬರುತಿಹಳು ನನ್ನೆಡೆಗೆ ಕನಸಿನ ಹುಡುಗಿ 

ಬೆಳದಿಂಗಳ ಬಾಲೆ 
ಮುಡಿದಳು ಮಲ್ಲಿಗೆ ಮಾಲೆ 
ಭಾವನೆಗಳ ಕಣ್ಣಿನಲಿ 
ಕಾಣಿದಳು ಹೃದಯದ ಗಲ್ಲಿಯಲಿ 
ಬರುತಿಹಳು ನನ್ನೆಡೆಗೆ ಕನಸಿನ ಹುಡುಗಿ 

ನಗುವನ್ನು ಚೆಲ್ಲುತ 
ನನ್ನೆದೆಯ ಗೆಲ್ಲುತ 
ಬಯಕೆ ಬಳ್ಳಿ ಬೆಳೆಸಿ 
ಪ್ರೀತಿ ಮೊಗ್ಗು ಕಲ್ಪಿಸಿ 
ಬರುತಿಹಳು ನನ್ನೆಡೆಗೆ ಕನಸಿನ ಹುಡುಗಿ 

ಹೃದಯ ಕದ್ದಳು 
ಮನಸ್ಸು ಗೆದ್ದಳು
ಭವ್ಯ ಪ್ರೆಮಲೋಕದಲಿ 
ನನ್ನ ಪ್ರೀತಿಯ ದೇಗುಲದಲಿ 
ಬರುತಿಹಳು ನನ್ನೆಡೆಗೆ ಕನಸಿನ ಹುಡುಗಿ 

ಗುರುವಾರ, ಮಾರ್ಚ್ 24, 2011

ನನ್ನ ಕಂದ


ಮುದ್ದು ಮುದ್ದಾದ ಕಂದ 
ಮೊದಲ ದಿನದ ನೆನಪು ಚೆಂದ 
ಹೊಸ ಜಗಕೆ ನೀ ಬಂದಾಗ 
ನಕ್ಕು ನಕ್ಕು ನಲಿದಾಡಿದೆ 
ಮುದ್ದಾದ ಮುಖ ಕಂಡು 
ಮುತ್ತಿಟ್ಟು ಬೆರಗಾದೆ 
ಕರಳು ಕುಡಿ ನೀನು 
ಮನೆ ದೀಪ ಬೆಳಗಿದೆ 
ನೀ ಬಂದ ಹೊತ್ತಿಗೆ 
ಎಲ್ಲರ ಮನ ಸೇರಿದೆ 
ಮೊದಲ ಹೆಜ್ಜೆ ಇಡುವಾಗ 
ಗೆಜ್ಜೆ ಹಾಕಿ ಕುಣಿದಾಡಿದೆ 
ತೊದಲು ನುಡಿ ಸವಿದು 
ಮುಖವೆಲ್ಲ ಅರಳಿದೆ 
ಮುದ್ದು ಮುದ್ದಾದ ಕಂದ 
ನಿನ್ನ ನೆನಪುಗಳೇ ಬಲು ಅಂದ 

ಬೇಸಿಗೆ



ಬಂತು ಬೇಸಿಗೆ ನೋಡಿ 
ಬಿಸಿ ಬಿಸಿ ಕಾಡು ಬಿಡಿ 
ಬೆವರಿನಲ್ಲಿಯೇ ಸ್ನಾನ 
ಬಿಸಿಲಿನಲ್ಲೂ ಪಯಣ 
ಕರವಸ್ತ್ರದ ಕಪ್ಪು ವರ್ಣ 
ನೀರದಿಕೆಯಾಗುವುದು ಚೆನ್ನ 
ವಿದ್ಯುತ್ ಸಮಸ್ಯೆ ಅಣ್ಣ 
ಸೊಳ್ಳೆಯ ಕೆಂಪು ಬಣ್ಣ 
ಪಾನೀಯ ಕುಡಿಯುವ ಮುನ್ನ 
ಎಚ್ಚರವೆಂದು ಹೇಳುವರಣ್ಣ
ಕಣ್ಣುಗಳಿಗೆ ಕನ್ನದಕವೇ ಅಂದ 
ಖಾದಿ ಬಟ್ಟೆ ಧರಿಸುವುದು ಚೆಂದ 
ಬಿಸಿಲೆಮ್ದು ಮರುಗಬೇಡ 
ಇದು ಬೇಸಿಗೆ ಕಾಲ ಮರೆಯಬೇಡ 

ಹೇಳು ಕಾರಣ ?



ನಾ ಸನಿಹ ಬಂದರೆ 
ದೂರವೇಕೆ ಸಾಗುವೆ 
ಪ್ರೀತಿ ನೀಡುವೆ ನಾನು 
ಬೆದವೆಂದೇಕೆ  ಹೇಳುವೆ 
ಜೀವದ ಗೆಳತಿ ನೀನು 
ಏಕೆ ಮರೆತಿರುವೆ 
ಸಿರಿವಂತ ನಾನು ಹೃದಯದಿಂದ 
ಪ್ರೀತಿಸು ಮನ ಹೇಳಿದೆ 
ಸುಂದರ ನೆನಪಿನ ಅಲೆಗಳು 
ಬಂದು ಅಪ್ಪಳಿಸಿದೆ 
ನಾ ನಿನ್ನ ನೋಡುವಾಗ 
ನೀನೇಕೆ ಮರೆಯಾಗುವೆ 
ನಗು ಮುಖವ ನೋಡಲು 
ನಯನಗಳು ಕಾದಿವೆ 
ಹೇಳದೆ ಕಾರಣ ಪ್ರೀತಿಯಲಿ 
ದೂರಾಗಿ ಉಸಿರು ನಿಂತಿದೆ 
ಬಾ ಬೇಗ ಸಂಗಾತಿ 
ಈ ಜೀವ ನಿನಗಾಗಿ ಹುಟ್ಟಿದೆ 

ಸೋಮವಾರ, ಮಾರ್ಚ್ 21, 2011

ಕವಿತೆ..

ಯಾರೋ ಬಡವರು ಬೆವರು ಸುರಿಸಿ 
ಮೈಯ್ಯ ದಣಿಸಿ ಕಲ್ಮಣ್ಣು ಹೇರಿ 
ಹಾಡು ಹಾಡುತ 
ಸುಖ ದು:ಖ ಹಂಚುತ 
ಒಡತಿಯ ನೆನಪಿಸಿ 
ಕಟ್ಟಿದರು ಬಾನಿನುದ್ದಕೆ ಕಟ್ಟಡದ ಗೋಪುರ 

ಕಲಾವಿದರು ಭಾವಗಳ ಬಣ್ಣ ಬಳಿದು 
ಹೊಸತು ರೂಪ ತಂದು 
ಕಣ್ಣಿಗೆ ಕ್ಷೇಮವಾಗಿ ಮನಸಿಗೆ ಮೌಲ್ಯವಾಗಿ 
ಮೆಚ್ಚುಗೆಯ ಬಣ್ಣವಾಗಿ 
ಗೋಡೆಗೆ ಅಂದವಾಗಿ 
ಅರಮನೆಯ ಸುಂದರತೆ ಹೆಚ್ಚಿಸಿದ 

ಆಳಿದವ ರಾಜ ಅವನ ಪ್ರೀತಿಯ ರಾಣಿ 
ಮುದ್ದಾದ ಮಗುವಿಗೆ 
ಹೊಸ ಜನುಮ ನೀಡಿದ 
ಸುಖಸಾಗರ ಅವರದು ಪ್ರೀತಿಯ ಹೊಳೆ ಹರಿವುದು 
ನರ್ತಕಿ ಕುಣಿದರೆ ಅಂಗಳವು ಸ್ವರ್ಗ 
ಪ್ರಜೆಗಳ ಸೌಖ್ಯವೆ ಮಂಗಳ ಕಾರ್ಯ 
ರಾಜ ರಾಣಿಗೆ ಪ್ರೀತಿಯೇ ಜೀವನ 

ಕವಿಯೊಬ್ಬ ಹೇಳಿದ ರಾಜ ರಾಣಿಯ ಕಥೆಯ 
ಜನ ಮೆಚ್ಚಿದರು ಅವರ ನೆನಪಿನ ಪುಟವ 
ವರ್ಣಿಸಿದ ಬಣ್ಣದ ಅರಗಿಣಿಯ 
ಕನಸಲಿ ಕಂಡ ಸುಂದರ ಅರಮನೆಯ 
ರತಿಯಾಗಿ ಬಂದ ರಾಜಕುಮಾರಿಯ 
ಸ್ನೇಹಿಸಿದ ಪ್ರೀತಿಸಿದ 
ಅವಳ ರೂಪಕೆ ಸೋತು ಹೃದಯ  ನೀಡಿದ 
ಕಾಣಿಕೆಗೆ ನೆನಪಿನ ಪ್ರೀತಿಯ ಕವಿತೆ 
ಪುಟದಲಿ ಬರೆದು ಮುದ್ದಾಡಿದ 


ಶನಿವಾರ, ಮಾರ್ಚ್ 19, 2011

ಬಣ್ಣ ಬಣ್ಣದ ಹುಡುಗಿ



ಮನಮೋಹಿತೆ ಚೆಲುವ 


ಚಂದ್ರನ ಅರಗಿಣಿಯೇ

ನಯನಗಳು ಕಂಡ 

ನಿನ್ನ ರೂಪವ ವರ್ಣಿಸಲೇ 

ನಗುವೆಂದು ಹೇಳುತ 

ನಕ್ಕಿದ ಆ ತುಟಿ ಕೆಂಪಾದವೇ

ನಾಚಿಕೆ ಭಾವ ಮೂಡಿ 

ಕೆನ್ನೆ ಅರಳಿದ ಗುಲಾಬಿ ಕಂಡಿತೇ

ಹೊಳೆಯುವ ಭಾವಗಳ ಆಗಸದ

ನೀಲಿ ಬಣ್ಣ ಕಣ್ಣಲ್ಲಿ ಮೂಡಿತೇ

ಮೆಲ್ಲನೆಯ ಮನಸ್ಸು ಕದ್ದ

ಹಲ್ಲುಗಳು ಮುತ್ತಾಗಿ ಮಾತಾಡಿತ್ತು 

ಸರಳ ರೇಖೆಯ ರಂಗೋಲಿ 
ಮೂಗಿನ ಬಂಗಾರದ ಮೂಗುತಿಯು ಹೊಳೆಯಿತೇ
ನಿನ್ನ ಕೈ ಸ್ಪರ್ಶದಲ್ಲಿ 
ಹಸಿರು ಬಳೆಗಳು ರಾಗ ಹಾಡಿತೇ
ಮೆದುವಾದ ರೇಷ್ಮೆಯ ಎಳೆಗಳ 
ಕಪ್ಪು ಕೂದಲು ಮಲ್ಲಿಗೆ ಮುಡಿಯಿತೇ
ಮೈ ತುಂಬ ಉಟ್ಟ ಬಣ್ಣ 
ಚಿಟ್ಟೆಯ ಸೀರೆ ಸೊಂಟದ ಬದಿಗೆ ಸರಿಯಿತೇ
ದಿನದಲ್ಲೂ ಚಂದ್ರ ಭೂಮಿಗೆ 
ಬಂದನೆಂದು ರೂಪಸಿಯ ನೋಡಿ ಮನ ಬೆರಗಾಯಿತೇ ...


ಬುಧವಾರ, ಮಾರ್ಚ್ 16, 2011

ಬೆಳಗಾಂವ ದೇವರು

ಈ ಕವಿತೆಯನ್ನು ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶ್ರೀ ಇಟಗಿ ಈರನ್ನನವರು  ಹೇಳಿದ್ದು 
ಬಹು ಸುಂದರ ಕವಿತೆ ರಚಿಸಿ ಎಲ್ಲರ ಮನ ಸೆಳೆದರು .. ಬೆಳಗಾವಿಯಲ್ಲಿ ಎಲ್ಲರ ಮನ ಸೆಳೆದ 
ಈ ಕವಿತೆಯನ್ನು ನಿಮ್ಮೆಲ್ಲರ ಮುಂದೆ ಹಂಚಿಕೊಳ್ಳಲು ಇಷ್ಟಪಟ್ಟಿರುವೆ .... 


ನಮ್ಮದು ಬೆಳಗಾಂವ 
ನಿಮ್ಮದು ಬೆಳಗಾಂವ 
ಎಲ್ಲರದೂ ಬೆಳಗಾಂವ 
ಹಗಲೂ ಬೆಳಗಾಂವ
ರಾತ್ರಿ ಬೆಳಗಾಂವ 
ಹಗಲೂ ಬೆಳಗಾಂವ ಸೂರ್ಯ 
ರಾತ್ರಿ ಬೆಳಗಾಂವ ಚಂದ್ರ 
ಬೆಳಗು ಸೂರ್ಯನ್ನು 
ಬೆಳಗು ಚಂದ್ರನ್ನು
ಬೆಳಗಾಂವ ಯಾರು 
ಬೆಳಗಾಂವ ದೇವರು 
ಬೆಳಗಾಂವ ದೇವರು 
ಬೆಳಗಾಂವ ದೇವರು 

ನಮ್ಮ ಒಳಗೆ ಬೆಳಗಾಂವ 
ನಮ್ಮ ಹೊರಗೂ ಬೆಳಗಾಂವ 
ನಮ್ಮ ನಿಮ್ಮ ಒಳ ಹೊರಗೂ ಬೆಳಗಾಂವ 
ನಮ್ಮ ನಿಮ್ಮ ಈ ಬಾಳ ಬೆಳಗಾಂವ
ನಮ್ಮ ನಿಮ್ಮ ಈ ಲೋಕ ಬೆಳಗಾಂವ 
ಬೆಳಗು ಗುಣ ಇರಾಂವ
ಬೆಳಗಾಂವ ನಮ್ಮ ದೇವರು 
ನಾವು ಕೊಡುವವರಲ್ಲಿ
ನಾವು ಬಿಡುವವರಲ್ಲಿ
ನಮ್ಮ ಬೆಳಗಾಂವ 
ನಿಮ್ಮ ಬೆಳಗಾಂವ 
ನಮ್ಮೆಲ್ಲರಿಗೂ ಬೆಳಗಾಂವ 
ನಮ್ಮೆಲ್ಲರಿಗಂತೂ ನಮ್ಮ ಬೆಳಗಾಂವ ದೇವರು 
ಇಂದು ನಾಳೆ ಮುಂದು ಬೆಳಗಾಂವ ದೇವರು 
ಬೆಳಗಾಂವ ದೇವರು 
ಬೆಳಗಾಂವ ದೇವರು 
ಬೆಳಗಾಂವ ದೇವರು 

ನಮ್ಮ ತ್ರಿಕಾಲ ಪ್ರೀತಿಯ ಸಂಕೇತ 
ವಿಶ್ವ ಕನ್ನಡ ಸಾಹಿತ್ಯದ ಜಾತ್ರೆ 
ಸಂತಸದ ಜಾತ್ರೆ ಈ ತೇರು 
ಬೆಳಗಾಂವ ಯಾವತ್ತು ದೇವರು 
ಅದಕ್ಕಿಲ್ಲಿ ವಿಶ್ವದ ತೇರು 
ಬೆಳಗಾಂವ ನಮ್ಮ ದೇವರು 
ವಿಶ್ವಕ್ಕೆಲ್ಲ ನೀ ಈ ಮಾತು ಸಾರು 
ಬೆಳಗಾಂವ ನಮ್ಮ ದೇವರು 
ಕನ್ನಡ ಬೆಳಗಾಂವ ನಮ್ಮ ದೇವರು 
ಇಲ್ಲೇ ನಮ್ಮ ತೇರು 
ಇಲ್ಲೇ ನಮ್ಮ ಜೋರು 
ಏಕೆಂದರೆ ಬೆಳಗಾಂವ ನಮ್ಮ ದೇವರು 
ಬೆಳಗಾಂವ ದೇವರು 
ಬೆಳಗಾಂವ ದೇವರು 
ಬೆಳಗಾಂವ ದೇವರು 


ಸೋಮವಾರ, ಮಾರ್ಚ್ 7, 2011

ಸ್ವಾಗತ

ಪ್ರೀತಿ ತುಂಬಿದ 
"ಭಾರತ" ದಲ್ಲಿ 
ಕನಸು ತುಂಬಿದ 
"ಕರ್ನಾಟಕ"ದಲ್ಲಿ 
ಭಾವನೆ ತುಂಬಿದ 
"ಬೆಳಗಾವಿ"ಯಲ್ಲಿ 
ಮಾರ್ಚ್ ೧೧,೧೨,೧೩ ರಂದು 
"ವಿಶ್ವ ಕನ್ನಡ ಸಮ್ಮೇಳನ "
ಆಯೋಜಿಸಲಾಗಿದೆ ಸರ್ವ ಕನ್ನಡಿಗರಿಗೂ 
ಒಂದುಗೂಡುವ  ನಮ್ಮ ಈ ಕನ್ನಡ ಹಬ್ಬಕೆ 
ಆಗಮಿಸಿ ಯಶಸ್ವಿಯಾಗಲು ಸಹಕರಿಸಿ 
ಜೈ ಕರ್ನಾಟಕ 
ಜೈ ಬೆಳಗಾವಿ 


ಶುಕ್ರವಾರ, ಮಾರ್ಚ್ 4, 2011

ಏಕೆ


ಗೋಡೆ ಬದಿಗೆ ಅಡುಗಿ
ಏಕೆ ನಿಂತಿಹೆ
ಕಾಡಿ ಬೇಡಿ ಪ್ರೀತಿ
ಏಕೆ ಮಾಡಿದೆ
ಮೋಸ ಬೇಡ ಪ್ರೀತಿಯಲ್ಲಿ
ಏಕೆ ನಂಬಿದೆ 
ಹೃದಯ ಕದ್ದ ನಲ್ಲನೆ 
ಏಕೆ ಮಂಕಾದೆ 
ಭಾವನೆಯ ಬೀಜವ 
ಏಕೆ ಹುಟ್ಟಿಸಿದೆ 
ಬೇಡೆಂದರೂ ಬಳಿಗೆ 
ಏಕೆ ಬಂದಿಹೆ 
ಮರೆತಿರುವೆ ನನ್ನನು
ಏಕೆ ಪ್ರೀತಿಸಿದೆ 
ಹೇಳು ನೀನು ಕಾರಣ
ಏಕೆ ಪ್ರೀತಿಸಿದೆ 
ಎದೆಗೆ ಚೂರಿ ಎರಗಿ
ಏಕೆ ಪ್ರೀತಿಸಿದೆ

ಕಣ್ತೆರೆದು ನೋಡು

ಹೊಸ ಕನಸು ಹೊತ್ತು
ಸೂರ್ಯ ಬಂದ ನೋಡು
ನವನವೀನ ಖುಷಿಯ
ಸವಿಯಲು ಸಿಧ್ಧನಾದ ನೋಡು
ದು:ಖವೆಲ್ಲ ಮರೆಸಿ
ಮನಸು ಹಗುರಾಯಿತು ನೋಡು
ನೀಲ ಆಗಸ ತಲುಪುವ
ಬಯಕೆ ಹುಟ್ಟಿದೆ ನೋಡು
ಖುಷಿಯಾದ ಮನಸೊಂದು
ಬಳಿ ಬಂದಿದೆ ನೋಡು
ಸ್ನೇಹದ ಬಂಧಕೆ ಹೆಜ್ಜೆ
ಇಟ್ಟು ನೋಡು
ಪ್ರೀತಿ ದುಂಬಿಯು
ಮಕರಂದ ಹೀರುವುದು ನೋಡು
ಜೀವನದಲಿ ಸುಖಸಾಗರ
ಹರಿಯುವುದು ನೋಡು

ಬಯಕೆ


ಬಯಕೆಯ ಬೀಜವೊಂದು 
ಬೇರು ಬಿಟ್ಟಿದೆ 
ಗಟ್ಟಿಯಾಗಿ ಎದೆಗೆ 
ಅಂಟಿಕೊಂಡಿದೆ 
ಕಿತ್ತೆಸೆಯಲು ಬಾರದ 
ಪ್ರೀತಿಯ ಬಯಕೆಯಾಗಿದೆ 
ಹೂವಾಗಿ ಹಣ್ಣು ಕೊಡುವ 
ಕನಸು ಕಾಣಿದೆ 
ಬಳ್ಳಿ ಚಿಗುರಿದರು ಮೊಗ್ಗು 
ಕಾಣೆಯಾಗಿದೆ 
ಹಲವು ದಿನ ಕಳೆದು ಬಯಕೆಯ 
ಬಳ್ಳಿ ಗಿಡವಾಗಿ ಬೆಳೆದಿದೆ 
ಮೊಗ್ಗು ಬಾರದ ಕಾರಣಕೆ 
ಮನಸ್ಸನ್ನು ಕೊಲ್ಲುತಿದೆ 
ಚಿಗುರುವ ಎಲೆಯನ್ನು 
ದು:ಖದಲಿ ಕಿತ್ತೆಸೆಯುತಿದೆ 
ಕತ್ತಲಲಿ ಕುರುಡನೊಬ್ಬ 
ಕನಸು ಕಂಡಂತಾಗಿದೆ 
ಹೊಸ ಬಯಕೆಯ ಬಳ್ಳಿಗೆ 
ಮೌನದ ಮಾತು ಹೇಳಿದೆ 
ಮೊಗ್ಗು ಕಾಣದ ಈ ಗಿಡವ
ಸುಡುವೆಯಾ? ದು:ಖದಲಿ ಕೇಳಿದೆ 
ಸಿಗಲಾಗದ ಬಯಕೆ ಕೊಂದು 
ಭಸ್ಮ ಮಾಡು ಎಂದಿದೆ
ಕಣ್ಣೀರಿನ ಹಾಗೆ 
ಎಲೆ ಉದುರಿಸಿದೆ
ನನಸಾಗುವ ಕೊರಗಲ್ಲಿ 
ಗಿಡವು ಒಣಗಿ ಮುರಿದಿದೆ

ಗುರುವಾರ, ಮಾರ್ಚ್ 3, 2011

ಕಣ್ತೆರೆದು ನೋಡು



ಹೊಸ ಕನಸು ಹೊತ್ತು
ಸೂರ್ಯ ಬಂದ ನೋಡು
ನವನವೀನ ಖುಷಿಯ
ಸವಿಯಲು ಸಿಧ್ಧನಾದ ನೋಡು
ದು:ಖವೆಲ್ಲ ಮರೆಸಿ
ಮನಸು ಹಗುರಾಯಿತು ನೋಡು
ನೀಲ ಆಗಸ ತಲುಪುವ
ಬಯಕೆ ಹುಟ್ಟಿದೆ ನೋಡು
ಖುಷಿಯಾದ ಮನಸೊಂದು
ಬಳಿ ಬಂದಿದೆ ನೋಡು
ಸ್ನೇಹದ ಬಂಧಕೆ ಹೆಜ್ಜೆ
ಇಟ್ಟು ನೋಡು
ಪ್ರೀತಿ ದುಂಬಿಯು
ಮಕರಂದ ಹೀರುವುದು ನೋಡು
ಜೀವನದಲಿ ಸುಖಸಾಗರ
ಹರಿಯುವುದು ನೋಡು