ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಸೋಮವಾರ, ಮಾರ್ಚ್ 21, 2011

ಕವಿತೆ..

ಯಾರೋ ಬಡವರು ಬೆವರು ಸುರಿಸಿ 
ಮೈಯ್ಯ ದಣಿಸಿ ಕಲ್ಮಣ್ಣು ಹೇರಿ 
ಹಾಡು ಹಾಡುತ 
ಸುಖ ದು:ಖ ಹಂಚುತ 
ಒಡತಿಯ ನೆನಪಿಸಿ 
ಕಟ್ಟಿದರು ಬಾನಿನುದ್ದಕೆ ಕಟ್ಟಡದ ಗೋಪುರ 

ಕಲಾವಿದರು ಭಾವಗಳ ಬಣ್ಣ ಬಳಿದು 
ಹೊಸತು ರೂಪ ತಂದು 
ಕಣ್ಣಿಗೆ ಕ್ಷೇಮವಾಗಿ ಮನಸಿಗೆ ಮೌಲ್ಯವಾಗಿ 
ಮೆಚ್ಚುಗೆಯ ಬಣ್ಣವಾಗಿ 
ಗೋಡೆಗೆ ಅಂದವಾಗಿ 
ಅರಮನೆಯ ಸುಂದರತೆ ಹೆಚ್ಚಿಸಿದ 

ಆಳಿದವ ರಾಜ ಅವನ ಪ್ರೀತಿಯ ರಾಣಿ 
ಮುದ್ದಾದ ಮಗುವಿಗೆ 
ಹೊಸ ಜನುಮ ನೀಡಿದ 
ಸುಖಸಾಗರ ಅವರದು ಪ್ರೀತಿಯ ಹೊಳೆ ಹರಿವುದು 
ನರ್ತಕಿ ಕುಣಿದರೆ ಅಂಗಳವು ಸ್ವರ್ಗ 
ಪ್ರಜೆಗಳ ಸೌಖ್ಯವೆ ಮಂಗಳ ಕಾರ್ಯ 
ರಾಜ ರಾಣಿಗೆ ಪ್ರೀತಿಯೇ ಜೀವನ 

ಕವಿಯೊಬ್ಬ ಹೇಳಿದ ರಾಜ ರಾಣಿಯ ಕಥೆಯ 
ಜನ ಮೆಚ್ಚಿದರು ಅವರ ನೆನಪಿನ ಪುಟವ 
ವರ್ಣಿಸಿದ ಬಣ್ಣದ ಅರಗಿಣಿಯ 
ಕನಸಲಿ ಕಂಡ ಸುಂದರ ಅರಮನೆಯ 
ರತಿಯಾಗಿ ಬಂದ ರಾಜಕುಮಾರಿಯ 
ಸ್ನೇಹಿಸಿದ ಪ್ರೀತಿಸಿದ 
ಅವಳ ರೂಪಕೆ ಸೋತು ಹೃದಯ  ನೀಡಿದ 
ಕಾಣಿಕೆಗೆ ನೆನಪಿನ ಪ್ರೀತಿಯ ಕವಿತೆ 
ಪುಟದಲಿ ಬರೆದು ಮುದ್ದಾಡಿದ 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ