ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಗುರುವಾರ, ಫೆಬ್ರವರಿ 4, 2010

ಸ್ಮರಣೀಯ ದಿನಗಳು

ಮರೆಯಲಾರೆನು ಆ ಸವಿ ದಿನಗಳು

ನೆನಪನ್ನು ಕಾಡುವ ಆ ಹಳೆ ದಿನಗಳು

ಶಾಲೆಯಲ್ಲಿದ್ದ ಆ ಗೆಳತಿಯರು

ನಗು ನಗುತಾ ಕಳೆದ ಆ ಸವಿದಿನಗಳು

-ಆಡುವಾಗ ಕಾಲು ಜಾರಿ ಬಿದ್ದು

ನೋವಾದರೂ ನಗುತ ಏಳಿದ್ದೆ

ಪಾಠ ಕಲಿಯುವಾಗ  ನಿದ್ದೆ ಬಂದು

ತೂಕಡಿಸಿ ಗೋಡೆ ಬಡಿದು ಕೊಂಡಿದ್ದೆ

-ಬುಧವಾರ ಬಣ್ಣದ ಬತ್ತೆಯೆಂದು

ಬಣ್ಣ ಹಚ್ಚಿಕೊಂಡು ನಟಿಯಾಗಿ ಹೋಗಿದ್ದೆ

ಬಿಳಿ ರಿಬ್ಬನ್ನು ಹಾಕಬೇಕೆಂದಾಗ

ಬಾಯ್ ಕಟ್ ಮಾಡಿಸಿಕೊಂಡು ಬಂದಿದ್ದೆ

-ಹುಡುಗರೆಂದರೆ ಶತ್ರು ತಿಳಿದರು

ಹಬ್ಬದಲ್ಲಿ ಮಿತ್ರರೆಂದು ಶಾಲೆ ತೊಳಿಸಿಕೊಂಡಿದ್ದೆ

ಲೇಟಾಗಿ ಎದ್ದು ಶಾಲೆಗೇ ಹೋದರೆ

ಬಸ್ಸು ಇರಲಿಲ್ಲವೆಂದು ಕಾರಣ ಹೇಳಿದ್ದೆ

-ಎಲ್ಲರಿಗೂ ನನ್ನ ಕೆನ್ನೆ ಇಷ್ಟವೆಂದು

ಬೆಣ್ಣೆ ಹಚ್ಚಿ ಮಾಲಿಸು ಮಾಡಿದ್ದೆ

ಶಿಕ್ಷಕಿಯರ ಗೆಳೆತನ ಬೆಳೆಸಿ

ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ್ದೆ

-ಶಾಲೆಗೆ ಹೋಗಲು ಬೇಡೆದಾಗ

ಜ್ವರದ ನೆಪ ಮಾಡಿ ಮನೆಯಲ್ಲಿ ಉಳಿಸಿದ್ದೆ

ಬಿಳ್ಕೊಡುಗೆ ಸಮಾರಂಭದಲ್ಲಿ ಸುಮ್ಮನೆ

ಅಳಬೇಕಾದರೂ ಬಹಳ ಕಷ್ಟ ಪಟ್ಟಿದೆ

ಹೀಗೆ ಶಾಲೆಯಲ್ಲಿ  ಕಳೆದ ದಿನಗಳು ಬಹಳ ಸವಿನೆನಪು ನೀಡಿದೆ

ನನ್ನ ಪ್ರೀತಿಯ ಜೀವ :)

3 ಕಾಮೆಂಟ್‌ಗಳು: