ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಬುಧವಾರ, ಫೆಬ್ರವರಿ 10, 2010

ಮನಸ್ಸಿನ ಗುಟ್ಟು ..


ಪ್ರೀತಿಯ ಗುಟ್ಟು ನಿನಗೆ ತಿಳಿಯದು

ನೋವಿನ ಹೃದಯ ನಿನಗೆ ಅರ್ಥವಾಗದು

ಮೌನದ ಮನಸ್ಸು ನಿನಗೆ ಸಿಗಲಾರದು

ಪಿಸುಗುಡುವ ಮಾತು ನಿನಗೆ ಕೇಳಿಸದು

ಯಾವ ತಪ್ಪಿಗೆ ಈ ಪ್ರೀತಿ ಪರೀಕ್ಷೆಯು

ನಿಜವಿದ್ದರು ಕನಸೆಂಬ ಕಲ್ಪನೆಯಾಗುವುದು

ದಾರಿಯೇ ಕಾಣದ ಯಾವ ಸ್ಥಳವಿದು

ಜೀವವಿಲ್ಲಾದರು  ಉಸಿರಾಡುವ ಶಬ್ದವಿದು

ಸ್ವರೂಪವೇ ಕಾಣದ ಪ್ರೀತಿಯ ಪ್ರತಿಬಿಂಬವಿದು

ನೀನು ಏಕಾಂಗಿ ಎಂದು ಕೂಗಿ ಹೇಳುವುದು

ಯಾವ ಪ್ರೀತಿಯಿದು ನಿನಗೆ ಅರಿಯದು

ನನ್ನ ಪ್ರೀತಿಯ ಜೀವ :)

2 ಕಾಮೆಂಟ್‌ಗಳು: