ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಬುಧವಾರ, ಅಕ್ಟೋಬರ್ 28, 2009

ಹೀಗಿರುವೆ ನಾನು


ನಾನು ನಿಮ್ಮನ್ನು ಪ್ರೀತಿ ಮಾಡಿದೆ

ನನ್ನ ಮನಸ್ಸನ್ನು ನಿಮಗೆ ನೀಡಿದೆ

ನಿಮ್ಮ ಮನಸ್ಸಿಗಾಗಿ ಕಾದು ನೋಡಿದೆ

ನಿಮ್ಮ ಸುಖವನ್ನೇ ಬಯಸಿದೆ

ಜೀವನ ಎಂಬ ಪದದಲ್ಲಿ

ನಿಮ್ಮ ಅರ್ಥ ತುಂಬಿದೆ..

ನೀವು ದೂರವಿದ್ದರು ಹತ್ತಿರವಿರುವ

ಹಾಗೆ ಒಬ್ಬಳೇ ಮಾತನಾಡಿದೆ

ಕೋಪ ಬಂದರು ನಿಮ್ಮ ನಗು

ನೆನೆಸಿಕೊಂಡು ನಾನು ನಕ್ಕಿದ್ದೆ..

ನಿಮ್ಮ ಮನಸ್ಸು ನೋವಿಸಿದೆ ಎಂದು

ತಿಳಿದು ನಾನು ಅಳುತಿರುವೆ

ನಾನು ಅಳುವುದು ನಿಮಗೆ ಇಷ್ಟವಾಗದು

ಎಂದು ದು:ಖವಾದರು ಮನಸ್ಸಿನಲ್ಲಿಡುವೆ

ಆದರೆ ಮನಸ್ಸು ನಿಮಗೆ ಕೊಟ್ಟಿರುವೆ

ಎಂದು ನೆನೆಸಿಕೊಂಡು ದು:ಖವನ್ನೇ ಮರೆತೆ..

ನಿಮಗೆ ನಾನು ಇಷ್ಟವಾಗದ ಹುಡುಗಿ

ಎಂದು ಭಾವಿಸಿ ಏಕಾ೦ಗಿಯಾಗಿರುವೆ

ನಿಮ್ಮ ಮನಸ್ಸನ್ನು ಅರ್ಥಿಸಿಕೊಳ್ಳುವ

ಪ್ರಯತ್ನ ಮಾಡಿರುವೆ..

ಸೂಕ್ಷ್ಮ ಚಿಂತನೆಯ ಈ ಹುಡುಗಿ

ಪ್ರೀಯವಾದ ನಿಮ್ಮ ಮನಸ್ಸಿನ

ಶಾಂತಿಯೇ ದೂರ ಮಾಡಿರುವಳು
ಮುಗ್ಧ ಮನಸ್ಸಿನವಳು ಎಂದು ತಿಳಿದು ತಪ್ಪನ್ನು ಕ್ಷಮಿಸಿಬಿಡಿ

ಮತ್ತು ನಿಮ್ಮ ಹೃದಯದಿಂದ ಸ್ವಲ್ಪ ಪ್ರೀತಿ ಕೊಡಿ.


ನನ್ನ ಪ್ರೀತಿಯ ಜೀವ :)

2 ಕಾಮೆಂಟ್‌ಗಳು:

 1. WOW, this is an awesome poem, it can really touch every ones heart.The following lines are superb.
  "ನಾನು ಅಳುವುದು ನಿಮಗೆ ಇಷ್ಟವಾಗದು
  ಎಂದು ದು:ಖವಾದರು ಮನಸ್ಸಿನಲ್ಲಿಡುವೆ
  ಆದರೆ ಮನಸ್ಸು ನಿಮಗೆ ಕೊಟ್ಟಿರುವೆ
  ಎಂದು ನೆನೆಸಿಕೊಂಡು ದು:ಖವನ್ನೇ ಮರೆತೆ.."

  To be frank I really read the above 4 lines aroud 4-5 times.These are really touching lines.

  ಪ್ರತ್ಯುತ್ತರಅಳಿಸಿ