ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಮಂಗಳವಾರ, ಅಕ್ಟೋಬರ್ 27, 2009

ನಿಸರ್ಗವೇ ದೇವರು..


ಸೃಷ್ಟಿ ಎಷ್ಟು ಸುಂದರ..

ಸೃಷ್ಟಿಕರ್ತ ದೇವರ ಸ್ಥಳ ಮಂದಿರ

ಆ ದೇವರು.. ನಿಸರ್ಗ ಎಂಬಲ್ಲಿ

ಏನೋ ಒಂಥರಾ ಭಾವನೆ ಮೂಡಿಸಿದ

ಮನದಲ್ಲಿ ಖುಷಿಯ ನಗು ತೋರಿಸಿದ

ತನ್ನದೇ ಆದ ಕಲೆಯಿಂದ ಸುಂದರ

ನಿಸರ್ಗದ ಚಿತ್ರ ಬಿಡಿಸಿದ

ಮಾಯಾಲೋಕದ ರೂಪವನ್ನು ಇದರಲ್ಲಿ ಬಣ್ಣಿಸಿದ..

ತಂಪಾದ ಗಾಳಿಯಲ್ಲಿ ಉಸಿರಿನ -

ಪವಿತ್ರತೆಯನ್ನು ತೋರಿಸಿದ.

ಇಂಪಾದ ಪಕ್ಷಿಗಳ ಚಿಲಿಪಿಲಿ ಶಬ್ದದಲ್ಲಿ -

ಸ್ವರಗಳನ್ನು ನುಡಿಸಿದ.

ಆ ಬಿಳಿ ಮೋಡದಲ್ಲಿ ಮನಸ್ಸಿನ ಶುದ್ಧ -

ಭಾವನೆಗಳನ್ನು ಹೊಮ್ಮಿಸಿದ.

ಹಸಿರು ಬೆಟ್ಟಗಳ ಸೌಂದರ್ಯದಲ್ಲಿ ಕಣ್ಣಿಗೆ -

ಆನಂದದ ಸಮಾಧಾನ ತೋರಿದ.

ಹರಿಯುವ ನೀರಿನ ಸೂಕ್ಷ್ಮ ಶಬ್ದದಲ್ಲಿ -

ಮುಗ್ಧ ಮನಸ್ಸಿನ ಮಗುವಿನ ನಗು ಕೇಳಿಸಿದ.

ತಂಪಾದ ಮಳೆಯ ಹನಿಗಳಲ್ಲಿ ಪ್ರೀತಿಯ -

ಮಾತುಗಳನ್ನು ಹೊರಡಿಸಿದ.

ಹೀಗೆ ತನು ಮನದಿಂದ ಜನರಿಗೆ

ಸೃಷ್ಟಿಯಲ್ಲಿ ದೇವರನ್ನು ತೋರಿಸಿದ...


ನನ್ನ ಪ್ರೀತಿಯ ಜೀವ :)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ