ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಬುಧವಾರ, ಮೇ 9, 2012

ಉಳಿಸಿರಿ ಹೆಣ್ಣು ಕಂದಮ್ಮನ ಜೀವ




ಹೆಣ್ಣು ಹೆಣ್ಣೆಂದರೆ
ಕೊರಗುವಿರೇಕೆ ನೀವಿಂದು
ಈ ಹೆಣ್ಣೆ ಅಲ್ಲವೇ?
ನಿಮಗೆ ಜನ್ಮ ನೀಡಿದವಳು
ಮರೆಯದಿರಿ ನೀವು
ಭೂಮಿ ತಾಯಿಯ ಹೆಣ್ಣೆಂದು
ಮಮತೆಯ ಮಡಿಲಲಿ
ಸಾಕುತಿರುವಳು ಜಗದ ಜೀವಿಗಳನು
ಕ್ರೋಧಿಯಾದರೆ ಅವಳು
ಕೊಲೆಗಾರನನ್ನೆ ಕೊಲ್ಲಬಲ್ಲಳು
ಪೂಜಿಸುವ ತಾಯಿ
ಭಾರತಾಂಬೆಯು ಕೂಡ ಹೆಣ್ಣು
ಮರೆಯದಿರಿ ಕಟುಕರೆ
ಹೆಣ್ಣು ಹೊಣ್ಣೆಂದು

ಹೆಣ್ಣು ಹೆಣ್ಣೆಂದರೆ
ಕೊರಗುವಿರೇಕೆ ನೀವಿಂದು ?
ಕ್ಷಮಯಾ ಧರಿತ್ರಿ
ಹೆಣ್ಣೆಂಬ ಹೆಣ್ಣು
ದು:ಖದಿ ಕ್ಷಣದಿ
ಮರೆಸುವಳು ನೋವನ್ನು
ನಗಿಸುವಳು ನಿಮ್ಮನ್ನು
ಈ ಕಲಾಕಾರ ಹೆಣ್ಣು
ತನ್ನ ಹಸಿವು ಕಾಣದೆ
ಹಸಿದ ಜೀವಕೆ ಅನ್ನ ನೀಡುವಳು ಹೆಣ್ಣು
ಪರರ ಸುಖಕೆ ತನ್ನ ಸುಖವ
ತ್ಯಾಗಿಸುವಳು ಹೆಣ್ಣು
ಕಣ್ಣೀರಿನ ಕಥೆಯ
ಸೆರಗಿನಲಿ ಕಟ್ಟಿ ಹಾಕುವಳು ಹೆಣ್ಣು

ದಾನಗಳಲ್ಲಿ ಶ್ರೇಷ್ಠವು ಒಂದು
ನೀಡಿರಿ ಜೀವದಾನ ಹೆಣ್ಣಿಗಿಂದು
ಹೆಣ್ಣೆಂದರೆ ಜೀವಿ ಹೆಣ್ಣು
ಉಳಿಸಿರಿ ಆಕೆಯ ಪ್ರಾಣವನ್ನು
ನೀಡಿರಿ ಜೀವದಾನ ಹೆಣ್ಣಿಗಿಂದು
ಕೊಲ್ಲದಿರಿ ಹೊಣ್ಣೆಂಬ ಹೆಣ್ಣನ್ನು
ಮಾಡದಿರಿ ಭ್ರೂಣ ಹತ್ಯೆಯನ್ನು
ಕತ್ತರಿಸದಿರಿ ಮಮತೆಯ ಬಳ್ಳಿಯನ್ನು
ಕೊಲ್ಲದಿರಿ ಹೊಣ್ಣೆಂಬ ಹೆಣ್ಣನ್ನು
ಆರಿಸದಿರಿ ಬೆಳಗುವ ದೀಪವನ್ನು
ಹಸಿಗೂಸಿನ  ಕೂಗು ಕೇಳುತ್ತಿಲ್ಲವೇ ನಿಮಗೆ
ಕೊಲ್ಲುತ್ತಿರುವಿರಿ ಹೆಣ್ಣನ್ನು
ಕತ್ತರಿಸಿರುವಿರಿ ಬಳ್ಳಿಯನ್ನು
ಮಾಡುತ್ತಿರುವಿರಿ ಭ್ರೂಣ ಹತ್ಯೆಯನ್ನು
ಬೆಳಗುವ ಮೊದಲೆ ಆರಿಸುತ್ತಿರುವಿರಿ
ಮನೆ ಮನೆಗಳ ಮನ ಮನಗಳ
ಹೆಣ್ಣೆಂಬ ನಂದಾದೀಪವನ್ನು
ಕತ್ತಲು ಹರಡುತಿದೆ ! ಮಾನವ ..
ಇನ್ನಾದರೂ ಬೆಳಗು ನೀ ಹೆಣ್ಣೆಂಬ ಬೆಳಕನ್ನು
ಮರೆತುಬಿಡು ಗಂಡು ಹೆಣ್ಣೆಂಬ
ಜಾತಿಭೇದವನ್ನು
ಶುರುವಾಗಲಿ ಹೃದಯದಿಂದ ಮನೆವರೆಗೆ
ಮನೆಯಿಂದ ಊರೊಳಗೆ
ಊರಿನಿಂದ ನಗರದೊಳಗೆ
ನಗರದಿಂದ ರಾಜ್ಯದೊಳಗೆ
ರಾಜ್ಯದಿಂದ ದೇಶದೊಳಗೆ
ದೇಶದಿಂದ ಇಡೀ ಪ್ರಪಂಚದೊಳಗೆ
ಶುರುವಾಗಲಿ ಸ್ತ್ರೀ ಲಿಂಗ ಭ್ರೂಣಹತ್ಯೆ ಅಳಿಸುವ ಹೋರಾಟ

ನೀಡಿರಿ ಮಹತ್ವ ಹೆಣ್ಣಿಗೆ
ಜನ್ಮ ನೀಡಿರಿ ಹೆಣ್ಣೆಂಬ ಮುಗ್ಧ ಜೀವಕೆ ..

3 ಕಾಮೆಂಟ್‌ಗಳು: