ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಶುಕ್ರವಾರ, ಮೇ 25, 2012

ಜನುಮದಾತರು

ಅಳುತ ಬರುವೆ ನಾನು 
ನಕ್ಕು ನಲಿದಿರಿ ನೀವು 
ಬೆತ್ತಲೆ ಇದ್ದ ನನಗೆ 
ಬಣ್ಣದ ಬಟ್ಟೆ ನೀಡಿದರಿ ನೀವು 
ನಕ್ಕರೆ ನಾನು 
ನಗುವಿರಿ ನೀವು 
ಅತ್ತರೆ ನಾನು ಅಳುವಿರಿ ನೀವು 
ಮುಟ್ಟಿದರೆ ನಾನು 
ಮುದ್ದಾಡುವಿರಿ ನೀವು 
ಹಾಸಿಗೆ ಒದ್ದೆಯಾದರೆ 
ಬೈಯ್ಯದೆ ಬದಲಿಸುವಿರಿ ನೀವು 
ನಿದ್ದೆಯಲೂ ಕಾಡಿದರೂ 
ಲಾಲಿ ಹಾಡುವಿರಿ ನೀವು 
ಹಸಿವ ಎನ್ನುವ ಮೊದಲೆ 
ಹೊಟ್ಟೆ ತುಂಬಿಸುವಿರಿ ನೀವು 
ಅಜ್ಞಾನಿಯಾದ ನನ್ನಲಿ 
ಜ್ಞಾನದ ದೀಪ ಬೆಳಗಿಸಿದಿರ ನೀವು 
ಬದುಕಿನ ಜಟಕಾಬಂಡಿಯಲಿ 
ನಿಮ್ಮ ಬದುಕನ್ನೆ ಬದಿಗಿಟ್ಟಿರಿ ನೀವು 
ನನ್ನ ಬಾಳ ನಂದಾದೀಪವಾಗಲು 
ತ್ಯಾಗಿಸಿರುವಿರಿ ಬಾಳನು ನೀವು 
ನಾನು ನಿಮ್ಮವನು 
ಪ್ರೀತಿಯ ಪಾತ್ರರಿರುವೆನು 
ನೀವು ನಮ್ಮವರು 
ಬದುಕ ನೀಡಿದ ಜನುಮದಾತರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ