ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಬುಧವಾರ, ಜನವರಿ 26, 2011

ನಲ್ಲನಿಗೊಂದು ನೆಲುಮೆಯ ಪತ್ರ..

           
            ನನ್ನ ಪ್ರೀತಿಯ ನಲ್ಲನಿಗೆ ಇಂದು ಪ್ರೀತಿಯ ನೆನಪುಗಳ ಕಾಣಿಕೆ. ಇವತ್ತಿನ ದಿನ ಬಹಳ ಸುಖಮಯ ಸಂತೋಷದಿಂದ ಕೂಡಿದ ದಿನ. ನನ್ನ ನಿಮ್ಮ ಮಿಲನವಾಗಿ ಒಂದು ವರ್ಷ ಕಳೆದವು. ಪ್ರೀತಿಯ ಚೆಲ್ಲಾಟದಲ್ಲಿ ದಿನಗಳು ಮಿಂಚಿನಂತೆ ಹೊಳೆದು ಹೋದವು. ನಾವು ಕಳೆದ ಪ್ರತಿ ಕ್ಷಣದ ಮೊತ್ತ ಮುತ್ತಾಗಿತ್ತು. ನಮ್ಮ ಕೋಪವು ಪ್ರೀತಿಯ ಸಂಕೇತವಾಗಿತ್ತು. ಜಗಳವು ನಮ್ಮ ಸರಸದ ಗುರುತಾಗಿತ್ತು. ಮನಸ್ಸಾರೆ ಪ್ರೀತಿಸುವ ಹುಡುಗಾಟವೇ ನಮ್ಮ ಮುದ್ದು ಪ್ರೀತಿಯ ಗುರಿಯಾಗಿತ್ತು. ಎಲ್ಲದಕ್ಕೂ ಮಿಗಿಲಾಗಿ ಸ್ನೇಹದ ಮುಟ್ಟಿಲುಗಳನ್ನು ಹತ್ತಿ ಸ್ನೇಹಲೋಕದಲ್ಲಿ ಪ್ರೇಮಲೋಕವನ್ನು ಸೃಷ್ಟಿಸಿದೆವು. ಜಗತ್ತಿನಲ್ಲಿರುವ ಎಲ್ಲ ಸುಖವನ್ನು ನಮ್ಮ ಸ್ವರ್ಗವಾದ ಜೀವನದಲ್ಲಿ ಕಾಣುವೆವು. ಪ್ರಪಂಚದಲ್ಲಿರುವ ಶ್ರೇಷ್ಠ ಅಮರ ಪ್ರೀತಿ ಪಾತ್ರರಲ್ಲಿ ನಮ್ಮಿಬ್ಬರ ಹೆಸರು ಕೆತ್ತಿದೆವು. ಎರಡು ಜೀವ - ಒಂದೆ ಉಸಿರು ನಮ್ಮ ಪ್ರೀತಿ ಎಂದು ತಿಳಿದೆವು.
               ಕೆಲವು ನುಡಿಮುತ್ತುಗಳು ನನ್ನ ಜೀವದಲ್ಲಿರುವ ನಿಮ್ಮ ಉಸಿರಿಗಾಗಿಃ-ಯಾವ ಜನುಮದ ಪ್ರೀತಿಯ ಬಂಧ ತಿಳಿಯಲಾರೆ,ಯಾವ  ರೀತಿಯ ಪುಣ್ಯ ಫಲ ತಿಳಿಯಲಾರೆ,ನೀವು ನನ್ನನ್ನು ನಿಮ್ಮ ಜೀವನ ಸಂಗಾತಿಯೆಂದು ಭಾವಿಸಿದರೊ ಆ ಕ್ಷಣದಿಂದ ಪ್ರತಿ ಕ್ಷಣವು ಬಹಳ ಅಮೂಲ್ಯವಾದುದು. ನನ್ನ ಮನಸ್ಸಿನ ಮುಂದೆ ನಿಮ್ಮ ಹೃದಯ/ಮನಸ್ಸು ಬಹಳ ದೊಡ್ಡದು. ನಾನು ನಿಮ್ಮನ್ನು ಪತಿಯ ಬದಲಾಗಿ ಪ್ರಿಯತಮ ಎಂದು ಪ್ರೀತಿಸಿರುವೆ. ನೀವು ಕೂಡ ನನ್ನನ್ನು ಬಹಳ ಪ್ರೀತಿಸುತ್ತೀರಿ ಎಂದು ನನ್ನ ಪುಟ್ಟ ಮನಸ್ಸಿಗೂ ತಿಳಿದಿದೆ.
              ನಿಮ್ಮ ಜೊತೆ ಕಳೆದ ಪ್ರತಿ ಕ್ಷಣವು ಅಮರವಾದುದು. ಗೂಡಿನಲ್ಲಿರುವ ಎರಡು ಪಕ್ಷಿಗಳ ಚಿಲಿಪಿಲಿ ಗಾಣದ ಶಬ್ದ ನಮ್ಮ ಗೂಡಲ್ಲಿ ಕೇಳುವುದು. ಇನ್ನೂ ಕೆಲವು ದಿನಗಳ ನಂತರ ಆ ಗೂಡಲ್ಲಿ ಪ್ರೀತಿಯ ಮುದ್ದಾದ ಮರಿಯೊಂದು ಜನಿಸುವುದು. ಅದೆ ನನ್ನ ನಿಮ್ಮ ಪ್ರೀತಿಯ ನಿಜವಾದ ಸಂಕೇತವು. ನಿಮ್ಮ ಸುಃಖ ದುಃಖ ನನ್ನದಾಗಿದೆ. ನಿಮ್ಮ ಉಸಿರು ನನ್ನ ಜೀವವಾಗಿದೆ. ನಿಮ್ಮ ಪ್ರೀತಿ ನನಗೆ ಜೀವನವಾಗಿದೆ.
              ಈ ದಿನ ದೇವರಲ್ಲಿ ಒಂದೇ ಪ್ರಾರ್ಥನೆ ನನ್ನ ನಲ್ಲನನ್ನು ಸಂತೋಷದಿಂದಿಡು ಮತ್ತು ನನ್ನ ಕುಂಕುಮ ಸೌಭಾಗ್ಯವು ಪ್ರೀತಿಯ ಹಾಗೆ ಅಮರವಾಗಿರಲಿ ಮತ್ತು ಸಂತೋಷ ನಕ್ಷತ್ರದ ಹಾಗೇ ಹೊಳೆಯತಿರಲಿ.


MADE FOR EACH OTHER

4 ಕಾಮೆಂಟ್‌ಗಳು:

  1. ಮೇಡಂ, ನಿಮ್ಮ ಬರಹ ಹೃದಯಸ್ಪರ್ಶಿಯಾಗಿದೆ. ನಿಮ್ಮ ಸಮರ್ಪಣಾ ಭಾವನೆ ಮೆಚ್ಚುವಂತಹದು. ಆಲ್ ದಿ ಬೆಸ್ಟ್‌! ಮೇಡಂ ನನ್ನ nalmeyamaathu.blogspot.com ಬ್ಲಾಗ್'ಗೊಮ್ಮೆ ಬೇಟಿ ಕೊಡಿರಿ.
    ಬಿ.ವಿ.ಸತ್ಯಪ್ರಸಾದ್.

    ಪ್ರತ್ಯುತ್ತರಅಳಿಸಿ
  2. ಮೇಡಂ, ನನ್ನ ಬ್ಲಾಗ್'ಗೆ ಬೇಟಿ ನೀಡಿದ್ದಕ್ಕ ಧನ್ಯವಾದಗಳು. ನಿಮ್ಮ ಬ್ಲಾಗ್ ನೋಡಿದೆ. ಬಹಳ ಸೊಗಸಾದ ಕವಿತೆಗಳನ್ನು ರಚಿಸಿದ್ದೀರಿ.ನನಗೆ ಬಹಳ ಮೆಚ್ಚಿಗೆಯಾಯ್ತು. ನಿಮಗೆ ಹೃತ್ಪೂರ್ವಕ ಅಭಿನಂದನೆಗಳು.ಮೇಡಂ ಸಾದ್ಯವಾದಾಗ ನನ್ನ ಬ್ಲಾಗ್'ನಲ್ಲಿರುವ ಕವಿತೆ, ಲೇಖನಗಳ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿರಿ.

    ಪ್ರತ್ಯುತ್ತರಅಳಿಸಿ