ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಸೋಮವಾರ, ಜನವರಿ 24, 2011

ಮೊದಲ ಸಲ


ಮೊದಲ ಸಲ
ನಾ ನಿನ್ನ ಕಂಡಾಗ
ನೀ ನಕ್ಕಿದ್ದೆ ಮೋಡಿ ಮಾಡಿ
ನಾ ನಾಚಿದ್ದೆ ಸನ್ನೆ ಮಾಡಿ
ಮೊದಲ ಸಲ
ನೀ ಅಪ್ಪಿಕೊಂಡಾಗ
ನಾ ಓಡಿದ್ದೆ ಮುತ್ತು ನೀಡಿ
ನೀ ಬಳಿ ಬಂದೆ ಕಾಡಿ ಬೇಡಿ
ಮೊದಲ ಸಲ
ನಾ ಪ್ರೀತಿಸಿದಾಗ
ನೀ ಕಂಡಿದ್ದೆ ಸ್ವರ್ಗ ಮಹಡಿ
ನಾ ಬಂದಿದ್ದೆ ತನುವ ಮುದುಡಿ
ಮೊದಲ ಸಲ
ನೀ ಖುಷಿಯಾದಾಗ
ನಾ ಕುಣಿದಿದ್ದೆ ಅಪ್ಸರೆಯಾಗಿ
ನೀ ವರ್ಣಿಸಿದ್ದೆ ಕವಿಮನವಾಗಿ 

2 ಕಾಮೆಂಟ್‌ಗಳು:

  1. ಕೀರ್ತಿ ಇದು ಸೂಪರ್ ಆಗಿದೆ...ಬಹಳ ದಿನವಾಯ್ತು ನಿಮ್ಮ ಬ್ಲಾಗ್ ಕಡೆ ಬಂದು...ಬಹಳ ಇಷ್ಟ ಆಯ್ತು,,,ಚಿಕ್ಕ ಮತ್ತು ಚೊಕ್ಕ ಭಾವ ಮಂಥನ

    ಪ್ರತ್ಯುತ್ತರಅಳಿಸಿ
  2. dhanyavaad sir.. innu kelave dinagalu nann kavan sankalan bidugade aagalikke.. nimm yavudaadaru pustak bidugadeya video iddare kaluhisi.. nanage sahaayavaagabahudu..

    ಪ್ರತ್ಯುತ್ತರಅಳಿಸಿ