ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಭಾನುವಾರ, ಜನವರಿ 24, 2010

ಕಾಮಿಡಿ ಟೈಮ್ ಗಣೇಶ ..
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ಎಂದು ಗಣೇಶ ಹಾಡು ಹೇಳಿದ ಆದರೂ ದೇವದಾಸ ಆಗಿಯೇ ಉಳಿದ.ಸರ್ಕಸ್ ಫಿಲ್ಮಲ್ಲಿ ಆಟದಲ್ಲಿಯೆ ಪ್ರೀತಿ ಮಾಡಿ ಹುಡುಗಿ ಜೊತೆ ಮಜಾ ಮಾಡಿದ. ಹುಡುಗಾಟದಲ್ಲಿ ತನ್ನ ಹುಡುಗನ ಬುದ್ಧಿಯನ್ನು ತೋರಿಸಿ ಬಿಟ್ಟ. ಓ ಮರೆತೇ ಬಿಟ್ಟಿದ್ದೆ ಆ ಸ್ಕೂಲ್ ಹುಡುಗಿಯ ಚೆಲುವಿನ ಚಿತ್ತಾರದಲ್ಲಂತೂ ಎಲ್ಲ ಹೈಸ್ಕೂಲ್ ಪೋಕರಿಗಳಿಗೆ ಲೈನ್ ಹೊಡೆಯುವುದನ್ನು ಹೇಳಿಕೊಟ್ಟ ಹುಡುಗಿಯರಿಗೂ ಲವ್ ಮಾಡೋ ಚಾನ್ಸ ಕೊಟ್ಟ. ಶಹಜಹಾನ ಮತ್ತು ಮುಮತಾಜ ತರಹ ಐಸು & ಮಾದೇಶ ಎಂಬ ಹೆಸರನ್ನು ಹಬ್ಬಿಸಿ ಬಿಟ್ಟ.time pass ಎಂದು ಹಾಗೆ ಒಳ್ಳೆ ಕಾಣೋ ಜಿಂಕೆಮರಿ ಜೊತೆ ಫಿಲ್ಮ್ ಮಾಡಿದ .ಕೊನೆಗೆ ಹೊಸ heroine ನ್ನು ಪಟಾಯಿಸಿ ಮಳೆಯಲಿ ಜೋತೆಯಲಿನಲ್ಲಿ ಪ್ರೀತಿ ಮಾಡಿದವರಿಗೆ ಮಳೆಯಲ್ಲಿ ನೆನೆಯೋ ಹಾಗೆ ಮಾಡಿದ. ನೆನದಾದ ಮೇಲೆ ಶೀತ-ಜ್ವರ ಇಲ್ಲವಾದರೆ ಅದೇ ನಿಜವಾದ ಪ್ರೀತಿ ಎಂದು ಹೇಳಿಬಿಟ್ಟ .ಹಾರ್ಟ್ ನ್ನ ಪರ ಪರ ಅಂತ ಕೈ ಹಾಕಿ ಕೆರ್ರಕೊಂದು ಗಾಯ ಮಾಡಕೊಂಡು ಮಳೆ ಬಂದಾಗ ಕಾನೊ ಎಲ್ಲ ಹುಡುಗಿಯರಿಗೂ ಪ್ರೀತಿಸ್ತೀನಿ ನೀನು ಪ್ರೀತಿ ಮಾಡ್ತೀಯಾ ಎಂದು ಕೇಳಿದ .ಸಂಗಮ ದಲ್ಲಿ ಸೀರಿಯಸ್ ಆಗಿರದೆ theatre ನಲ್ಲಿ ಬಹಳ ದಿನ ಉಳಿಲಿಲ್ಲ.ಮುಂಗಾರುಮಳೆಯಿಂದ ಚೆಲುವಿನ ಚಿತ್ತಾರಕ್ಕಿಳಿದು ಹುಡುಗಾಟದಿಂದ ಚೆಲ್ಲಾಟವಾಡಿ ಸರ್ಕಸ ಮಾಡ್ತಾ ಅರಮನೆ ಸೇರಿ ಹಾಗೆ ಮಳೆಯಲಿ ಜೊತೆಯಲಿ ಹುಡುಗಿ ಪ್ರೀತಿ ಕೊನೆಗೂ ಗೆದ್ದ ಬಿಟ್ಟ ಕನ್ರಿ.ಹಾರ್ಟ್ ನ್ನ ಪರ ಪರ ಕೆರ್ರಕೊಂಡು ಅಲ್ಲಿ ಗಾಯವನ್ನೇ ತನ್ನ ಹುಡುಗಿ ಅಂತ ತಿಳಿದು ಯಾವಾಗಲೂ ಹಾರ್ಟ್ ಗಾಯದಿಂದಾನೆ ಇರೋ ಹಾಗೆ ಹುಡುಗಿನ ಪ್ರೀತಿ ಮಾಡಿದ ಕನ್ರಿ.ಆ ಗಣೇಶ ನಮಸ್ಕಾರ ನಮಸ್ಕಾರ ನಮಸ್ಕಾರ ಅಂತ ಹೇಳ್ತಾ ಕಾಮೆಡಿ ಟೈಮಲ್ಲಿ ಫೇಮಸ್ ಆದ ಕನ್ರಿ.ಎಲ್ಲ ಹುಡುಗಿಯರಿಗೆ ಗಣೇಶ ಅಂತಾ ಅಂತಿದ್ರೆ ಆ ಶ್ರೀ ಸೊಂಡಿ ಗಣೇಶ ಸಿಟ್ಟ ಮಾಡ್ತಾ ಇದಾನಂತ್ರಿ.ಪಾಪ ಈ ಗಣೇಶ ಎಷ್ಟು ಅಂತಾ ಹುಡುಗಿಯರನ್ನ ಪ್ರೀತಿಸ್ತಾನ್ರಿ .ಆ ಹಾರ್ಟಲ್ಲಿ ಜಾಗಾನೆ ಇಲ್ಲ ಅಂತ್ರಿ.supplement ಅಂತಾ ಮತ್ತೊಂದು ಹಾರ್ಟ್ ಸಲುವಾಗಿ ನಮ್ಮ ಆಸ್ಪತ್ರೆಗೆ ಇವತ್ತು ಬಂದಿದ್ದ ಕನ್ರಿ ಆ ಕಾಮಿಡಿ ಟೈಮ್ ಗಣೇಶ ......


ನನ್ನ ಪ್ರೀತಿಯ ಜೀವ :)

5 ಕಾಮೆಂಟ್‌ಗಳು:

 1. ಗಣೇಶ್ ನನ್ನ ಮೆಚ್ಚಿನ ನಟ ಕೂಡ. ಅವರ "ಮುಂಗಾರು ಮಳೆ" ಚಿತ್ರ ತುಂಬಾ ಇಷ್ಟವಾಗಿತ್ತು. "ಚೆಲುವಿನ ಚಿತ್ತಾರ"ದಲ್ಲಿನ ಅವರ ನಟನೆ ಮೆಚ್ಚಬೇಕಾದ್ದೇ.

  ಅವರ ಡಾಯಲೋಗ್ ತರಹನೇ ಇದೆ ನಿಮ್ಮೀ ಬರಹ ಕೂಡ :)

  ಮತ್ತೆ ನೀವು ಆಸ್ಪತ್ರೆಯಲ್ಲಿ ಕೆಲ್ಸ್ ಮಾಡ್ತಿರೋದಾ? ಅಲ್ಲಿಗೆ ಬಂದಿದ್ದ ಅಂದ್ರಲ್ಲ ಅದ್ಕೇ ಕೇಳ್ದೆ :)

  ಪ್ರತ್ಯುತ್ತರಅಳಿಸಿ
 2. kaamidi ganeshanna kandu sondila ganesh sittagiddekatri? nim aspatreli second hand hrartooo,duplicate heartooo bargining price ge sigutta? sikkre nangoo swalpa tilistiraa.... nagnoo ondu duplicate heart urgent aagi bekaagide!
  Chennagi bariteeri kirti. Bareeta irri. odlik cholo anistada! breebeku....bareeta beleebeku....a belakinalli baduku belagabeku...good luck

  ಪ್ರತ್ಯುತ್ತರಅಳಿಸಿ
 3. ನಿಮ್ಮ ಕಾಮಿಡಿ ಟೈಮ್ಸ್ ಲೇಖನ ಚೆನ್ನಾಗಿದೆ ತುಂಬಾ ಇಷ್ಟವಾಯಿತು. ನೀವು ಗಣೇಶ್ ಮಾತನಾಡುವ ವರಸೆಯಲ್ಲೆ ಬರೆದಿದ್ದೀರಿ ಹಹಹ ತುಂಬಾ ಖುಷಿಯಾಯಿತು ಓದಲು. ಹೀಗೆ ಬರೆಯುತ್ತಲಿರಿ. ನನ್ನ ಬ್ಲಾಗಿಗೆ ಭೇಟಿ ಕೊಟ್ಟು ಮನಸನ್ನು ಹರಸಿದ್ದೀರಿ ಹೀಗೆ ಬರುತ್ತಲಿರಿ.

  ನೀವು ಮುಂದೆ ಬ್ಲಾಗ್ನಲ್ಲಿ ಲೇಖನ ಬಿತ್ತರಿಸುವಾಗ ಅಕ್ಷರಗಳು ಸ್ವಲ್ಪ ದಪ್ಪನಾಗಿ(font size) ಕಾಣುವಂತೆ ಬಿತ್ತರಿಸಿ ಚೆನ್ನಾಗಿರುತ್ತದೆ.

  ಪ್ರತ್ಯುತ್ತರಅಳಿಸಿ