ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಶನಿವಾರ, ಜನವರಿ 16, 2010

ಏಕಾಂಗಿ..

ಮನಸ್ಸಿನ ಚಂಚಲೆತೆಗೆ ಸೋತು ಹೋದೆನು

ಜೀವನವೇ ಬೇಸರವೆಂದು ತಿಳಿದೆನು

ಎಕಾಂಗಿತನದಿಂದ ಕಷ್ಟ ಪಟ್ಟೇನು

ಸಂಗಾತಿಯ ನೆನಪಿನಿಂದ ಕ್ಷಣ ಕಳಿದೆನು

ಅಶಾಂತಿಯ ಮನದಿಂದ ಕೋಪಗೊಂಡೆನು

ಪ್ರೀತಿ ಮಾತು ಹೇಳಿದರೂ ದ್ವೇಷ ತಿಳಿದೆನು

ಹತ್ತಾರು - ಜನ ಇದ್ದರೂ ಒಬ್ಬಳೇ ಕುಳಿತೆನು

ಮಾನಸಿಕ ತೊಂದರೆಗೆ ಒಳಗಾದೆನು

ಇಲ್ಲಿ ನಾನು ಕಷ್ಟ ಪಟ್ಟರು ಸಂಗಾತಿಗೆ ನೆನಪಿನ ನೆಪವಿಲ್ಲ

ನನ್ನ ನೋಡುವ ಆಸೆಯೂ ಇಲ್ಲ

ಸಂಗಾತಿಗೆ ನೆನಪು ಬರುವುದಕ್ಕೆ ತಡವಿಲ್ಲ

ನಾನು ಅಗಲಿ ಹೋದರೆ ಅರಿವಾಗುವುದು ಸುಳ್ಳಲ್ಲ

ನನ್ನ ಪ್ರೀತಿಯ ಜೀವ :)

2 ಕಾಮೆಂಟ್‌ಗಳು:

  1. ಪ್ರೀತಿಯ ತುಡಿತ ಪದ - ಸಾಲು ಕವನವಾಗಿ ಹೊರಹೊಮ್ಮಿದೆ, ಕೀರ್ತಿ, ಚನ್ನಾಗಿದೆ ಕವನ ..
    ಹತ್ತಾರು ಜನ ಇದ್ದರೂ ಒಬ್ಬಳೇ ಕುಳಿತಿರುವೆ .. ಎನ್ನುವುದಕ್ಕೆ ಈ ತುಡಿತವೇ ಕಾರಣ ಅಲ್ಲವೇ?

    ಪ್ರತ್ಯುತ್ತರಅಳಿಸಿ