ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಶನಿವಾರ, ಜನವರಿ 16, 2010

ಪ್ರೀತಿ- ಸ್ನೇಹ ..

ಪ್ರೀತಿ ಎಷ್ಟು ಮಧುರ ಎಂದು ಬಣ್ಣಿಸಲಾರೆನು
ಸ್ನೇಹ ಎಷ್ಟು ಒಳಿತು ಎಂದು ಹೇಳಲಾರೆನು
ಚಿನ್ನದಂತ ಸಂಬಂಧವೇ ಈ ಸ್ನೇಹ - ಪ್ರೀತಿಯು
ಒಲವಿನ ಅಕ್ಕರೆಯೇ ಬಾಳಿನ ಗುರುತಿಗೂ ..
ಮಾನಸ ಸರೋವರದ ಸೌಂದರ್ಯ
ಮನಸಲ್ಲಿ ಕಾಣೆನು
ಚಿಗುರುವ ಎಲೆಗಳ ಗುಣ
ಮಕ್ಕಳಲ್ಲಿ ನೋಡೆನು
ಕಾಮನಬಿಲ್ಲಿನ ರಂಗು
ನಿಜಪ್ರೀತಿಯಲ್ಲಿ ತೋರೆನು
ಹೂವಿನ ಸಂಬಂಧ ಸ್ನೇಹವೆಂದು ಹೇಳೆನು
ಕೋಗಿಲೆಯ ಇಂಪಾದ ಕೂಗನ್ನು ವಾದ್ಯವೆಂದು ಕೇಳೆನು
ಮೋಡಗಳ ಮೌನವೇ ಆತ್ಮವೆಂದು ತಿಳಿದೆನು
ಹೊಳೆಯುವ ಚುಕ್ಕಿಗಳೇ ಖುಷಿಯೆಂದು ಆನಂದಿಸಿದೆನು
ಮುಸ್ಸಂಜೆಯ ತಂಪಿಗೆ ತನು ಮನ ನಾಚಿ ಕುಳಿತೆನು

ನನ್ನ ಪ್ರೀತಿಯ ಜೀವ :)

1 ಕಾಮೆಂಟ್‌:

  1. ಕೀರ್ತಿ ತೇಜಸ್ವಿನಿಯ ಬ್ಲಾಗಿನಲ್ಲಿನ ನಿಮ್ಮಪ್ರತಿಕ್ರಿಯೆ ಕಂಡು ನಿಮ್ಮ ತಾಣಕ್ಕೆ ಬಂದೆ. ಚನ್ನಾಗಿದೆ ಪ್ರಯತ್ನ. ‘ಕೊಳೆಯುವ‘ ಚುಕ್ಕಿ ಅರ್ಥ ವಾಗಲಿಲ್ಲ...ಅಂದರೆ ಬೀಳುವ ಚುಕ್ಕಿಗೆ ಅಂತಲಾ..? ಅಥವಾ ಹೊಳೆಯುವ ಚುಕ್ಕಿ ನಾ?
    ಒಟ್ಟಿನಲ್ಲಿ ಉತ್ತಮ ಪ್ರಯತ್ನ..ನಿಮ್ಮಂತೆಯೇ ಹೊಸಬ ನಾನೂ ಬ್ಲಾಗ್ ದುನಿಯಾಕ್ಕೆ...
    ಅಭಿನಂದನೆ ...

    ಪ್ರತ್ಯುತ್ತರಅಳಿಸಿ