ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಶುಕ್ರವಾರ, ಏಪ್ರಿಲ್ 23, 2010

ಮನುಷ್ಯನಿಗೆ ಜೀವನ ಬೇಸರ ಕೂಡ ..

ಜೀವನದಲ್ಲಿ ಈ ತರಹದ ದಿನಗಳು
ಬರುವುದು ಎಂದು ತಿಳಿದಿರಲಿಲ್ಲ
ನಮ್ಮಿಂದ ನಮ್ಮವರೇ  ದೂರವಾಗುವರು ಎಂದು ಗೊತ್ತಾಗಲಿಲ್ಲ..
ಒಳ್ಳೆಯವರಿಗೆ ಕೆಟ್ಟದ್ದೂ ಆಗತ್ತೆ ಅಂತ ಕೇಳಿರಲಿಲ್ಲ
ದು:ಖದಲ್ಲಿ ನಮ್ಮವರು ಜೊತೆ
ಇರುವುದಿಲ್ಲವೆಂದು ತಿಳಿದುಕೊಂಡಿರಲಿಲ್ಲ
ಅಳುತ ಅಳುತ ನಗುವುದನ್ನು ಕಲಿತಿರಲಿಲ್ಲ
ಕನಸು ನನ್ನ ಕನಸಾಗಿಯೇ ಉಳಿಯುವುದು ಎಂದು ಗೊತ್ತಿರಲಿಲ್ಲ ..
ಪ್ರೀತಿಯ ಮನುಷ್ಯನ ಮನಸ್ಸು
ನೋವಿಸುವೆನು ಎಂದು ಗೊತ್ತಿರಲಿಲ್ಲ
ಅದೇ ನೋವು ನಾನು ಸಹಿಸಲಾರಳೆಂದು ಅವರಿಗೆ ತಿಳದಿರಲಿಲ್ಲ..
ಹೀಗೆ ಜೀವನದಲ್ಲಿ ಈ ತರಹದ
ದಿನಗಳು ಕೂಡ ಬರುವುದು ಎಂದು ತಿಳಿದಿರಲಿಲ್ಲ...


ನನ್ನ ಪ್ರೀತಿಯ ಜೀವ :)

3 ಕಾಮೆಂಟ್‌ಗಳು:

  1. ಕೀರ್ತಿಯವರೇ ಹಲವು ವಿಷಯಗಳು ನಮಗೆ ಅನುಭವ ಆಗದ ಹೊರತು ತಿಳಿಯುವುದಿಲ್ಲ...ಒಂದು ರೀತಿಯಲ್ಲಿ ಒಳ್ಲೆಯದೇ...ಆದ್ರೆ ಎಲ್ಲಾ ಹಾಗೇ ಆಗಬೇಕೆಂದೇನೂ ಇಲ್ಲ...ಚನ್ನಾಗಿದೆ ನಿಮ್ಮ ಭಾವದ ಮಿಡಿತ...

    ಪ್ರತ್ಯುತ್ತರಅಳಿಸಿ