ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಸೋಮವಾರ, ಮಾರ್ಚ್ 1, 2010

ಹನಿಗವನಗಳು

ಹಾಳೆಯಲ್ಲಿ ಬರೆದ ಅಕ್ಷರಗಳಿಗೆ
ಅರ್ಥ ತುಂಬಿದರೆ ಚೆಂದಾದ
ಕವನವಾಗುವುದು
ಕನಸುಗಳನ್ನು ನೋಡಿದರೆ ಕಾಲ್ಪನಿಕ
ಮಾತಾಗುವುದು



ಯೌವನ್ ಎಂಬುದೇ
ಒಂದು ರೀತಿಯ ಸುಖ
ಅದರಲ್ಲಿ ಮಾಡುವೆ
ಎಂದರೆ ಅರ್ಥವೇ ದುಃಖ


ಹೊಸ ವರುಷವೆಂದು ತಿಳಿದೆ
ನಾ ನಿನಗೆ ಹೇಳಿದೆ
ಹಳೆಯದನ್ನೆಲ್ಲ ಮರೆತೆ
ತಪ್ಪೇನು ಹೊಸ ಹೆಂಡತಿ ನೋಡಿದೆ


ಹಾ ಹಾ ಎಂದು ನಗುವಾಗ
ಹಲ್ಲು ಮಿನುಗುತ್ತಿತ್ತು 
ರಹಸ್ಯ ಕೇಳಿದಾಗ 
ಸಿಲ್ವರ್ ಕವರ ಎಂದು ತಿಳಿಯಿತು 


ನಗುವ ಮುಖದಲ್ಲಿ ನಾ
ನಿನ್ನ ಚೆಲುವ ಕಂಡೆ
ದುರ್ಬಿನ್ನು ಹಚ್ಚಿ ನೋಡಿದಾಗ
ಕಾನಿದೆ ನೀ ಬರಿ ಬಂಡೆ


ಮದುಮಗಳೆ೦ದು ಹೇಳಿ
ಮುಖಕ್ಕೆ ಬಣ್ಣ ಬಡಿದರು
ನಂತರ ಶಾಭಾಶ್ ಅಂತ ಹೇಳಿ
ಬೆನ್ನು ಬಡಿದರು


ಬಾಲ್ಯದಲ್ಲಿರುವಾಗ ಎಲ್ಲವೂ ಜೋಕೆ
ಮಾಡುವೆ ನಂತರ ಆದೆನು ಮೇಕೆ


ನಿನ್ನ ನೋಡಲೆಂದು
ಮಾತನಾಡಲೆಂದು
ಬಂದೆ ನಾ ಹತ್ತಿರ
ಕಾಣಿಸಿದ ನಿನ್ನ ಗಂಡ ಎತ್ತರ

2 ಕಾಮೆಂಟ್‌ಗಳು: