ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಬುಧವಾರ, ಮೇ 4, 2011

ಕವಿಮನ




ನಿರ್ಜೀವ ಕಲ್ಲಿನಲಿ
ಶಿಲಾಬಾಲೆಯ ಜೀವ ತುಂಬಿ 
ಸೌಂದರ್ಯದ ಕಣ್ಮಣಿ ಎಂಬ 
ಹೆಸರಿಟ್ಟವನೇ  ಕವಿ 

ನೀಲಿ ಆಗಸದಲಿ 
ಭಾವನೆಗಳ ಮೋಡ ಬಿತ್ತಿ 
ಖುಷಿಯ ಮುಂಗಾರು 
ಮಳೆ ಸುರಿಸುವವನೆ ಕವಿ 

ಗುಲಾಬಿ ಹೂವಿನಲಿ 
ಪ್ರೇಯಸಿಯ ಮುಖ ಬಿಡಿಸಿ 
ಭ್ರಮರವಾಗಿ ಮಕರಂದ 
ಹೀರುವವನೆ ಕವಿ 

ಇಬ್ಬನಿಯ ಹನಿಯಲಿ 
ವಜ್ರಗಳ ಹಾರ ಪೋಣಿಸಿ 
ಎಳೆಗಳ ಕೊರಳಿಗೆ 
ಹಾರ ಹಾಕುವವನೆ ಕವಿ 

ತುಂತುರು ಮಳೆಯಲಿ 
ಮುತ್ತಿನ ಮಳೆ ಸುರಿಸಿ 
ಪ್ರುಕ್ರತಿಯ ಸ್ನೇಹಿತಿಗೆ 
ನಕ್ಕು ನಲಿಸುವವನೆ ಕವಿ 

ರೈತರ ಬೆವರಿನಲಿ 
ಸುಖ-ದು:ಖಗಳನ್ನು ಬೆರೆಸಿ 
ಗಂಜಿಗೆ ಅಮೃತವೆಂದು 
ಹೆಸರಿಡುವವನೆ ಕವಿ 

ನೋಟಿನ ಅಹಮಿನಲಿ 
ಬಾಳುವ ಧಣಿಗಳ ಮನ 
ಕಲ್ಲು ಬಂಡೆಗೆ 
ಹೋಲಿಸುವವನೆ ಕವಿ 

ಮುಸ್ಸಂಜೆ ತಂಗಾಳಿಯಲಿ 
ಎಲೆಗಳ ಮಿಲನವಾಗಿಸಿ
ಮೊಗ್ಗಿಗೆ ಜೀವ 
ತುಂಬುವವನೆ ಕವಿ 

ಬೇಸಿಗೆಯ ಬಿಸಿಲಿನಲ್ಲಿ 
ಸೂರ್ಯನ ಕೋಪಕೆ ಬೆಂದು 
ಮುದುಡುವ ಹೂವಿಗೆ ಮಳೆ 
ಹನಿಯಾಗಿ ಮುದ್ದಿಸುವವನೆ ಕವಿ 

ದು:ಖಿಸುವ ಕಣ್ಣೀರಿನಲಿ 
ನೆನೆದ ರೆಪ್ಪೆಗಳಿಗೆ 
ಹೊಸ ಕನಸುಗಳನ್ನು 
ಕೊಡುವವನೇ ಕವಿ 

ಮೌನವಾದ ಮನಸಿನಲಿ 
ಪ್ರೀತಿಯ ಬೀಜ ಬಿತ್ತಿ 
ಪ್ರೇಮಲೋಕದ ಸುಖವ 
ಸ್ವರ್ಗವನ್ನಾಗಿಸುವವನೆ ಕವಿ 

ಪುಸ್ತಕದ ಪುಟದಲಿ 
ಪೆನ್ನಿಗೆ ರಾಜಪಟ್ಟ ಕೊಡಿಸಿ 
ಪ್ರಾಸ ಪದಗಳ ಮದುವೆ
ಮಾಡಿಸುವವನೆ ಕವಿ 

ಚಂದಿರನ ರಾತ್ರಿಯಲಿ 
ನೆಲಕೆ ಹೂಹಾಸಿ ಸುಖದ 
ಕನಸಿನಲಿ ದಿಂಬನ್ನು ಇನಿಯನೆಂದು 
ಅಪ್ಪಿಕೊಳ್ಳುವವನೆ ಕವಿ 

ಮುದ್ದು ಮಕ್ಕಳಲಿ 
ಹೊಳೆಯುವ ನಕ್ಷತ್ರ ಕಂಡು 
ಚಂದ್ರಮನ ಜೊತೆಯಲಿ 
ಆಟವಾಡಿಸುವವನೆ ಕವಿ 

ಹಾರುವ ಹಕ್ಕಿಗಳಲಿ 
ಆಕಾಶ ಮುಟ್ಟಿದ ಸಾಹಸ ತುಂಬಿ 
ಹಾಡು ಹಾಡುತಿವೆಂದು 
ಹೊಗಳುವವನೆ ಕವಿ 

ಕನಸಿನ ಕಲ್ಪನೆಯಲಿ 
ಬವಣೆಗಳ ಸುನಾಮಿ  ಎಬ್ಬಿಸಿ 
ವಾಸ್ತವದಲಿ ಕಾಲ್ಪನಿಕತೆ 
ಹುಡುಕುವವನೆ ಕವಿ 

ಅಮವಾಸ್ಯೆಯಲಿ 
ಚಂದ್ರಮನ ತೋರಿಸಿ 
ಬೇಸಗಿಯಲಿ  ತಂಗಾಳಿಗೆ 
ಆಮಂತ್ರಿಸುವವನೆ  ಕವಿ 

ಪ್ರೇಯಸಿಯ ಮೌನದಲಿ  
ಹೃದಯದ ಮಾತು ಕೇಳಿಸಿ 
ಉಸಿರು ನಿಂತರು ಪ್ರೀತಿಯನು 
ನೆನಪಿಸುವವನೆ ಕವಿ .. 


ಭಾನುವಾರ, ಮೇ 1, 2011

ಮುಂಗಾರು ಮಳೆಯಲಿ




ಹನಿ ಹನಿ ಮಳೆ
ನೆನೆದ ಮುಂದಲೆ
ಹಣೆಯ ಮೇಲೆ ಜಾರಿ
ಕಣ್ರೆಪ್ಪೆಯ ಮೇಲುರುಳಿ... .

ಸರಳ ಮೂಗ ಮೇಲೆ
ಸರ್ರ ಭರ್ರನೆ ಜಾರಿ
ಗುಲಾಬಿ ತುಟಿಗೆ
ಪ್ರೀತಿಯ ಮುತ್ತಿಟ್ಟು

ಸುಂದರ ಮಿಲನಕೆ
ಕಾಯುವ ಚಿಪ್ಪೆಯ
ಎದೆಗೆ ಅಪ್ಪಿ
ಮುತ್ತಾಗಿ ಹುಟ್ಟಿ

ಕನಸಿನ ಬೆಡಗಿಗೆ
ಮುತ್ತಿನ ಹಾರಾಗಿ
ಕುತ್ತಿಗೆಗೆ ಮುತ್ತಿಟ್ಟು
ಖುಷಿ ಪಟ್ಟ ಹನಿ...