ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಶನಿವಾರ, ಡಿಸೆಂಬರ್ 25, 2010

ಹೊಸ ವರುಷದ ಹರುಷ ..


ಬಂತು ನೋಡಿ ಹೊಸ ವರುಷ
ಮರೆಯದಿರಿ ಹಳೆ ವರುಷದ ಹರುಷ
ಸುಖ ಶಾಂತಿಯ ವರುಷ
ನಿಮ್ಮದಾಗಲಿ ಕೋಟಿ ಹರುಷ

ಬಂತು ನೋಡಿ ಹೊಸ ವರುಷ
ಕಿತ್ತೆಸೆಯಿರಿ ದುಃಖದ ವಿರಸ
ಸ್ನೇಹ ಪ್ರೀತಿಯ ಈ ವರುಷ
ನಿಮ್ಮದಾಗಲಿ ಕೋಟಿ ಹರುಷ

ಬಂತು ನೋಡಿ ಹೊಸ ವರುಷ
ಮಾಡದಿರಿ ಕೆಟ್ಟ ಕೆಲಸ
ಒಳಿತು ಭಾವದ ಈ ವರುಷ
ನಿಮ್ಮದಾಗಲಿ ಕೋಟಿ ಹರುಷ

ಬಂತು ನೋಡಿ ಹೊಸ ವರುಷ
ನೀನಾಗು ಸುಗುಣಿ ಬಂಗಾರದ ಮನುಷ್ಯ
ಸುಂದರ ಜೀವನದ ಈ ವರುಷ
ನಿಮ್ಮದಾಗಲಿ ಕೋಟಿ ಹರುಷ

ಬಂತು ನೋಡಿ ಹೊಸ ವರುಷ
ಹಾರೈಸುವೆ ನಾ ಮನಸಾ
ನೀವು ಬಾಳಿರಿ ನೂರು ವರುಷ
ನಿಮ್ಮದಾಗಲಿ ಕೋಟಿ ವರುಷ


ಎಲ್ಲ ಪ್ರಜೆಗಳಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು..


8 ಕಾಮೆಂಟ್‌ಗಳು:

  1. ಬಂತು ನೋಡಿ ಕೀರ್ತಿಯ ಕವನ
    ಮಾಡಿ ಹೊಸವರ್ಷಕೊಂದು ನಮನ
    ನಮ್ಮದೂ ಹಾರೈಕೆ ಕೀರ್ತಿಗೆ ನೂರು ಸರ್ತಿ
    ಬೆಳಗಲಿ ಬ್ಲಾಗು ಬೆಳಕು ಕೀರ್ತಿಗೆ ತಂದು ಕೀರ್ತಿ

    ಪ್ರತ್ಯುತ್ತರಅಳಿಸಿ
  2. ಹೊಸ ವರುಷಕೆ ಹಾರೈಸಿ ಬರೆದ ಕವನ ಚೆನ್ನಾಗಿದೆ! ನಿಮ್ಮ ಆಶಯಗಳು ಈಡೇರಲಿ. ಪುಟ್ಟಿಪ್ರಪಂಚಕ್ಕೆ ಭೇಟಿ ನೀಡಿ ಪ್ರತಿಕ್ರಿಯಿಸಿದಕ್ಕೆ ವಂದನೆಗಳು:)
    ರೂಪ

    ಪ್ರತ್ಯುತ್ತರಅಳಿಸಿ
  3. puttiya amma nanaginnu magu illa aadre nimma blog nodi magu beku matte maguvigaagi blog irabeku anta nann manassu bayasitu... thanx..

    ಪ್ರತ್ಯುತ್ತರಅಳಿಸಿ