ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಬುಧವಾರ, ಫೆಬ್ರವರಿ 10, 2010

ಹನಿಯ ಸ್ಪರ್ಶ ..



ಮಳೆಯ ಹನಿ ನಿಧಾನವಾಗಿ

ಕಣ್ಣಿನ ಮೇಲೆ ಬಿತ್ತು

ಆಹಾ ಎಷ್ಟು ಸುಂದರ ಎನಿಸುತ್ತದೆ

ನಿನ್ನ ಆ ನಗುಮುಖ ಕಾಣಿಸಿತು 

ನಾನು ಹಾಗೆಯೇ ಕಣ್ಣು ಮುಚ್ಚಿ ನಿಂತೆ

ಮತ್ತೊಂದು ಹನಿ ನನ್ನ ಕೆನ್ನೆ ಮೇಲೆ ಬಿತ್ತು 

ನೀನು ನನ್ನ ಕೆನ್ನೆಗೆ ಸ್ಪರ್ಶ ಮಾಡಿದಂತಾಯಿತು 

ಆಹಾ ಎಷ್ಟು ಚೆನ್ನಾಗಿ ಅನಿಸುತ್ತಿದೆ 

ಎಷ್ಟು ಸುಂದರ ಹೂಗಳು ನಗುತಿವೆ 

ಅವು ಖುಷಿಯಿಂದ ನನ್ನ ತುಟಿಗಳ ಹತ್ತಿರ ಬಂದಿವೆ 

ನನಗೆ ನೀನು ಚುಂಬನ ನೀಡಿದ ಸ್ಪರ್ಶದ ಸುಖ ಸಿಗುತ್ತಿದೆ 

ಈಗ ನೀನು ಹೇಳು ನಿನಗೆ ಹೇಗೆ ಅನಿಸುತ್ತಿದೆ !!

ನನಗೊತ್ತು ನಿನಗೆ ಬಹಳ ಸುಂದರ ಅನಿಸುತ್ತದೆ

ನನ್ನ ಪ್ರೀತಿಯ ಜೀವ :)

2 ಕಾಮೆಂಟ್‌ಗಳು:

  1. ಕೀರ್ತಿ,

    ಪ್ರಯತ್ನ ಚೆನ್ನಾಗಿದೆ. ನಿಮ್ಮ ಬರವಣಿಗೆಯ ಉತ್ಸಾಹ ಮೆಚ್ಚುವಂಥದ್ದು.

    ಆದರೆ ಪ್ರಸ್ತುತ ಕವನದಲ್ಲಿ ಕಾವ್ಯ ಶೈಲಿ ಕಡಿಮೆಯಾಗಿದ್ದು, ಗದ್ಯ ಶೈಲಿಯೇ ಜಾಸ್ತಿಯಾಗಿರುವಂತೆ ನನಗನಿಸಿತು. ಕಾವ್ಯಮಯವಾಗಿ ನಿಮ್ಮ ಭಾವನೆಗಳನ್ನು ಮತ್ತಷ್ಟು ಚೆನ್ನಾಗಿ ಹೇಳಬಹುದಿತ್ತು. ಆದರೆ ಇದೇ ರೀತಿ ನೀವು ಬರವಣಿಗೆಯ ಪ್ರೀತಿಯನ್ನು ಬೆಳೆಸಿಕೊಂಡರೆ ಮುಂದೆ ಮತ್ತಷ್ಟು ಉತ್ತಮ ಕವಿತೆಗಳು ನಿಮ್ಮಿಂದ ಹೊರಬರುವವು.

    ನನಗೆ ಮೈಲ್ ಮಾಡಿದರೆ ಉತ್ತಮ. ಕಮೆಟ್‌ಗಳ ಮೂಲಕವೇ ಸಂಪರ್ಕಿಸಬೇಕೆಂದಿಲ್ಲ. ಅದು ವೈಯಕ್ತಿಕವಾಗುತ್ತದೆ. ಅಲ್ಲವೇ? :)

    ನನ್ನ ಮೈಲ್ ಐಡಿ - tejaswini.bhat@gmail.com

    ಶುಭಂ ಭೂಯಾತ್. (ಒಳಿತಾಗಲಿ)

    ಪ್ರತ್ಯುತ್ತರಅಳಿಸಿ
  2. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ