ಪ್ರೀತಿ ಮಾಡಲು ಕಾರಣ ಕೇಳಿದರೆ
ಏನೆಂದು ಹೇಳಲಿ
ಈ ಜೀವ ನಿನಗಾಗಿ ಉಸಿರಾಡುವುದು
ನಾ ಹೇಗೆ ಮರೆಯಲಿ
ಉಸಿರಲ್ಲಿರುವ ನಿನ್ನ ಪ್ರೀತಿ ನನ್ನ
ಜೀವ ಉಳಿಸಿದೆ ತಿಳಿದಿರಲಿ
ಜೀವನವನ್ನು ನಿನ್ನ ಪ್ರೀತಿಗಾಗಿ
ಮುಡಿಪಾಗಿಟ್ಟಿರುವೆ ಎಂದು ಹೇಳಲಿ
ಈ ಮನಸಲ್ಲಿ ನಿನ್ನ ಸುಖವನ್ನು
ಕಲ್ಪಿಸಿರುವೆ ಹೇಗೆ ಬಣ್ಣಿಸಲಿ
ಬಣ್ಣಿಸಲಾಗದಷ್ಟು ಪ್ರೀತಿ ನೀಡುವ
ಎಂದು ಜೀವ ಪ್ರಮಾಣ ಮಾಡಲಿ
ಜೀವಕ್ಕೂ ಪ್ರೀತಿಗೂ ನಂಟು
ಸಾಯುವವರೆಗೂ ಗಟ್ಟಿಯಾಗಿರಲಿ
ಮುಂದಿನ ಜೀವನದಲ್ಲೂ ನೀನೆ
ನನ್ನ ಪ್ರೀತಿಯಾಗಿ ಹುಟ್ಟಿ ಬರಲಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ