ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಮಂಗಳವಾರ, ಫೆಬ್ರವರಿ 2, 2010

ನಾನು ಹೀಗೆ ...

ಕಲ್ಪನೆಯ ಕವಿಯಾದೆ ನಾನು

ಪ್ರೀತಿಯ ಮಗುವಾದೆ  ನೀನು

ಸಂತೋಷದಲ್ಲಿ ಮೋಡವಾದೆ  ನಾನು

ನವಿಲಾಗಿ  ಗರಿಬಿಚ್ಚಿ ಕುಣಿದೆ ನೀನು

ಚಿಗುರುವ ಎಲೆಯಾದೆ ನಾನು

ಮುಂಜಾನಿನ ಹನಿಯಾಗಿ ಮುತ್ತಿದೆ ನೀನು  

ಕನಸಿನ ಕವಿಯಾದೆ ನಾನು

ಬೆರಗಿನ ಬೆಳಗಾದೆ ನೀನು

ನನ್ನ ಪ್ರೀತಿಯ ಜೀವ :)

8 ಕಾಮೆಂಟ್‌ಗಳು:

  1. ಉತ್ತಮ ಸುಧಾರಣೆ..ಕೀರ್ತಿ ನಿಜಕ್ಕೂ ಈ ಪ್ರೇಯಸಿ, ಪ್ರಿಯಕರನ ಸಂಬಂಧಗಳ ಕವನ ಚಿಕ್ಕದಾಗಿ ಚೊಕ್ಕವಾಗಿದೆ....ಮುಂದುವರೆಯಲಿ,,,

    ಪ್ರತ್ಯುತ್ತರಅಳಿಸಿ