ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಶುಕ್ರವಾರ, ಫೆಬ್ರವರಿ 5, 2010

ಹಳೆ ನೆನಪುಗಳು..

ಹೊಸ ವರುಷವೆಂಬ ಹರುಷದಲ್ಲಿ

ಹಳೆಯಾದ ಸವಿ ನೆನಪುಗಳ ಮರೆಯಬೇಡ

ತಂಗಾಳಿಯ ಸೂಸನ್ನು ಸವಿದು

ಬೇಸಿಗೆಯ ರಜೆಯ ರುಚಿ ಮರೆಯಬೇಡ

ಹೊಸದಿನಗಳಾದರೂ ಭಾವನೆಗಳು

ಹೊಸ ಪ್ರೀತಿ ಹೆಚ್ಚಿಸಲಿ ಮರೆಯಬೇಡ

ಸಂಬಂಧಗಳು ಹೊಸದಾದರೂ

ಹಳೆ ಬಂಧನಗಳ ಸವಿ ಋಣ ಮರೆಯಬೇಡ

ಸಂಗಾತಿಯ ಪ್ರೀತಿ ದೊರೆತರು

ಚಿಕ್ಕಂದಿನ ಗೆಳೆಯರ ಸ್ನೇಹ ಮರೆಯಬೇಡ


ನನ್ನ ಪ್ರೀತಿಯ ಜೀವ :)

4 ಕಾಮೆಂಟ್‌ಗಳು: