ಬಿಸಿಲೆನ್ನದೆ ಮಳೆಯೆನ್ನದೆ
ಹಸಿವ ತಡೆದು ಬದುಕುವರು
ಆಯಾಸವೆಂದು ಬೆವರು ಸುರಿಸಿ
ಬೇಸಗಿಯಲಿ ಕಣ್ಣೀರು ಹರಿಸಿ
ಊಳುವ ನೆಲ ಕಂಡಾಗ ಹಸಿರು
ರೈತನ ದೇಹದಲಿ ಕೇಳಿತ್ತು ಉಸಿರು
ಹರಕು ಬಟ್ಟೆ ಮುರುಕು ಮನೆ
ಊಟದಲ್ಲಿ ಮೊಸರು ಕೆನೆ
ಸಾಲ ಒಂದೆ ಇವರ ಚಿಂತೆ
ಆದ್ರೂ ಮಲಗು ಪರಿ ನೋಡಲಾಗದು ಅಂತೆ
ದಣಿದು ದುಡಿದು ಗಳಿಸುವರು ಹಣ
ಸುಖಿಯೆಂದರೆ ರೈತ ಜನರ ಮನ
ಹೃದಯಾ ತುಂಬ ಪ್ರೀತಿಯ ಶ್ರೀಮಂತ
ನಲಿಯುವರು ಬಂದರೆ ಋತು ವಸಂತ
ಹಾಸಿಗೆಯಷ್ಟು ಕಾಲು ಚಾಚು
ಇಲ್ಲಾದರೆ ಬೋಳು ತಲೆ ಬಾಚು
ಜಾಣರಿವರು ಪ್ರಾಣಿ ಸ್ನೇಹಿಗಳು
ಭಾರತದ ಹೆಮ್ಮೆಯ ಒಕ್ಕಲಿಗರು
Tumba Chenagidhe... Namma Annadatha
ಪ್ರತ್ಯುತ್ತರಅಳಿಸಿdhanyavad umesh avare..
ಪ್ರತ್ಯುತ್ತರಅಳಿಸಿ