ಹೊಟ್ಟೆಗಿಲ್ಲ ವೇಳೆ
ಸುರಿಯುವುದು ಚಿಂತೆಗಳ ಮಳೆ
ಮುಖದ ಮೇಲಿಲ್ಲ ಮಮತೆಯ ಕಳೆ
ಮಾಲಿನ್ಯದಿಂದ ನಶಿಸಿದೆ ಹಳ್ಳಿಯ ಬೆಳೆ
ಸಂಬಂಧಗಳಲ್ಲೂ ನೋಡುವರು ವಾಸ್ತು
ಚಿಕ್ಕ ಚಿಂದಿ ಬಟ್ಟೆಗಳೆ ಶಿಸ್ತು
ಹಣವೇ ಪ್ರೀತಿಯ ವಸ್ತು
ವಾರಕ್ಕೊಂದು ಪಾರ್ಟಿ ನೈಟ್ ಮಸ್ತು
ದಾರಿಯಲೆ ಸಿಲುಕಿದೆ ಮನಸ್ಸಿನ ಟ್ರಾಫಿಕ್ಕು
ಪೋಜು ನೀಡೊ ಕೆಲಸ ಓದುವುದು ಮ್ಯಾಟ್ರಿಕ್ಕು
ಸರ್ಕಾರ ಸಹಾಯಕೆ ನಗರವೇ ಹ್ಯಾಟ್ರಿಕ್ಕು
ಕೆಟ್ಟ ಚಟ ನೀಡುವುದು ಯಮನ ಟಿಕೆಟ್ಟು
ಬಿಂದಾಸ್ ಆಗಿರೊದೆ ಕೆಲವರ ಲೈಫು
ಮದುವೆ ಮೊದಲೇ ಆಗುವರು ವೈಫು
ಜೇಬಿನಲ್ಲಿದೆ ಅಹಂಕಾರದ ನೈಫು
ಹೀಗಿದೆ ನೋಡಿ ಕೆಲವರ ಪ್ಯಾಟೆ ಲೈಫು
( ಎಲ್ಲ ಪ್ಯಾಟೆಯವು ಹೀಗಿರುವುದಿಲ್ಲ.. ಕೆಲವರು ಮಾತ್ರ)
ಪ್ಯಾಟೆ ಲೈಫ್ ಅನ್ನ ಚೆನ್ನಾಗಿ ಚಿತ್ರಿಸಿದ್ದಿರಿ.
ಪ್ರತ್ಯುತ್ತರಅಳಿಸಿಸ್ವರ್ಣಾ
ಧನ್ಯವಾದ.. ಗೊಲ್ದರಾಣಿ..
ಪ್ರತ್ಯುತ್ತರಅಳಿಸಿ