ನೀರ್ಜಿವಿ ಆಗಬೇಕಿತ್ತು
ನಾನು ನೀರ್ಜಿವಿ
ಸಹನೆ ಶಾಂತಿ ತಿಳಿಯಬೇಕಿಲ್ಲ
ದ್ವೇಷದ ಕಿಚ್ಚಿಗೆ ಹೆದರಬೇಕಿಲ್ಲ
ಪ್ರೀತಿಯ ಜಾಲಕೆ ಸಿಲುಕಬೇಕಿಲ್ಲ
ಭಾವನೆಗಳ ಸಾಗರದಿ ಮುಳುಗಬೇಕಿಲ್ಲ..
ದು:ಖವೆಂದು ನೋದಬೇಕಿಲ್ಲ
ಸಂಬಂಧ ಸಂತೆಯಲಿ ಕಳೆಯಬೇಕಿಲ್ಲ
ಹಣ ಹಣವೆಂದು ಕೊರಗಬೇಕಿಲ್ಲ
ಅಹಂಕಾರದ ಜ್ವಾಲೆಯಲಿ ಉರಿಯಬೇಕಿಲ್ಲ..
ಮನಸ್ಸನು ಬೆಣ್ಣೆಯಾಗಿಸಿ ಕರಗಬೇಕಿಲ್ಲ
ಚಿಂತೆಯಲಿ ಚಿತೆಯಾಗಬೇಕಿಲ್ಲ
ಕಷ್ಟ ಬಂದರೆ ಕಣ್ಣೀರು ಹಾಕಬೇಕಿಲ್ಲ
ಕೆಟ್ಟ ಕ್ಷಣ ನೆನಸಲು ತಲೆಬೇಕಿಲ್ಲ..
ಸ್ವಾರ್ಥಿ ಜಗತ್ತಿನಲಿ ತ್ಯಾಗಿಸಬೇಕಿಲ್ಲ
ಹಡೆದವ್ವಗೆ ನೋವಿಸಿ ಹುಟ್ಟಬೇಕಿಲ್ಲ
ಾಯುಷ್ಯ ಮುಗಿಯಿತೆಂದು ಸಾಯಬೇಕಿಲ್ಲ
ಸತ್ತವರ ನೆನೆಯುತ ಮರೆಯಬೇಕಿಲ್ಲ
ನೀರ್ಜಿವಿ ಆಗಬೇಕಿತ್ತು
ನಾನು ನೀರ್ಜಿವಿ
ಆಗ ಈ ಪದ್ಯವನ್ನೂ ಬರೆಯಲಾಗುತ್ತಿರಲಿಲ್ಲ :)
ಪ್ರತ್ಯುತ್ತರಅಳಿಸಿಸಾಲುಗಳು ಚೆನ್ನಾಗಿವೆ.
ಸ್ವರ್ಣಾ
ಹ್ಮ ಸ್ವರ್ಣಾ.. ಅದಂತೂ ನಿಜ ಆದರೆ ಬೇಸರವಾದಾಗ ಕವನದ ನೆನಪೆಲ್ಲಿ ಹೇಳಿ..
ಪ್ರತ್ಯುತ್ತರಅಳಿಸಿ