ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಗುರುವಾರ, ಜನವರಿ 12, 2012

ಮನಸ್ಸು..

 
   ಕಳೆದು ಹೋಗಿವೆ ಆ ದಿನಗಳು
ನೆನಪುಗಳು ಕಲೆಯಾಗಿ ಮೂಡಿವೆ
   ಗೆಳೆಯ ನಿನ್ನ ಮಾತುಗಳು
ಶಬ್ದಕೋಶವಾಗಿ ಉಳಿದಿವೆ
   ಜೊತೆಗೆ ನೀನಿರುವಾಗ ಸಾಧನೆಗಳು
ಲೋಕಲ್ ಬಸ್ಸಿನ ಕಿಟಕಿಯಂತಿವೆ
   ಆ ಕಿಟಕಿಯಿಂದಲೆ ಕಾಣುವ ಕನಸುಗಳು
ನಡು ದಾರಿಯಲ್ಲಿಯೇ ಕರೆದಿವೆ
   ತಣ್ಣನೆ ಸೂಸುವ ಭಾವನೆಗಳು
ಗಾಳಿಯ ಜೊತೆ ಪಯಣ ಬಯಸಿವೆ
   ಕನಸಿಗಾಗಿ ಹೊರಟ ಮನಸ್ಸಿನ ಬಾಗಿಲುಗಳು
ಲೋಕಲ್ ಬಸ್ ನ ಕಿಟಕಿಗಳ ಮರೆತಿವೆ
   ಮನಸ್ಸಿಗೆ ಮುತ್ತಿದ ಕನಸ್ಸಿನ ರೆಕ್ಕೆಗಳು
ಆಗಸದೆತ್ತರಕೆ ಕರೆದೋಯ್ದಿವೆ
   ನಿಲ್ಲಾಣದಲಿ ಬಸ್ಸಿಗೆ ಬ್ರೇಕ್ ಹಾಕಿದಾಗ
ದೇಹ ತನ್ನ ಮನಸ್ಸಿಗಾಗಿ ಒದ್ದಾಡಿದೆ
   ನೆನಪಿಸಿದೆ ನಾ ನಿನ್ನ ಗೆಳೆಯ
ನೀನೆ ನನ್ನ ಮನಸ್ಸಿನ ಒಡೆಯ
   ನಿನ್ನ ಕಂಡ ಕ್ಷಣವೇ ಮನವು
ನಾಚಿಕೆಯಿಂದ ಕಿಟಕಿಯಲ್ಲೆ ಪ್ರೀತಿಸು ಎಂದಿದೆ


5 ಕಾಮೆಂಟ್‌ಗಳು:

  1. neevu nijavaagi obba kaviyitri.intaha pratibeiddaroo ,naanu obba putta kaviyitri aagabekendiddiralla,adu nimma dodda gunavannu thorisuttade.nimma kavitegalu thumbaa chennaagi moodibartide.

    ಪ್ರತ್ಯುತ್ತರಅಳಿಸಿ
  2. ಉಶೋದಯ ಅವರೆ ವಂದನೆಗಳು..
    ಪುಟ್ಟ ಕವಿಯತ್ರಿ ಆಗಬೇಕನ್ನುವುದೆ ನನ್ನ ಆಸೆ ಮತ್ತು ಗುರಿ..
    ನಾವು ಚಿಕ್ಕವರೆಂದು ತಿಳಿದರೆ ತಾನೆ ಸಾಧನೆ ಎತ್ತರವಾಗಿ ಕಾಣಬಹುದು..
    ನಿಮ್ಮ ಪ್ರೋತ್ಸಾಹಿತ ನುಡಿಗೆ ತುಂಬ ಧನ್ಯವಾದ..

    ಪ್ರತ್ಯುತ್ತರಅಳಿಸಿ