ಬರೆಯಬೇಕೆಂದೆ ನಾನೊಂದು ಕವನ ಮುಂಜಾನೆಯಲಿ
ಭಾವದ ಕುಸುಮ ಅರಳಿದ ದಿನವಾಗಲಿ
ಭಾರತಾಂಬೆಯ ಮಡಿಲಿಗೆ ಮತ್ತೆ ಮಹಾತ್ಮರು ಹುಟ್ಟಿ ಬರಲಿ
ನಾನು ನನ್ನ ಸ್ವಾರ್ಥ ತೊಲಗಿ ನಾವು ಎಂಬುದಾಗಲಿ
ಜಾತಿ ಭೇದ ಬೇಡ ನಮಗೆ ನಾವೆಲ್ಲರೂ ಒಂದಾಗಲಿ
ಸಂಸ್ಕ್ರತಿ ಸಂಗಾತಿಯ ಜೊತೆಯೆಂದೂ ಮರೆಯದಿರಲಿ
ದೇಶಕ್ಕಾಗಿ ಮಡಿದ ಸೇವಕರಿಗೆ ಮನದಲ್ಲಿ ಗೌರವವಿರಲಿ
ಮಹಾತ್ಮರಿದ್ದರೆಂದು ಸ್ವಾತಂತ್ರ್ಯ ನಮ್ಮದಾಗಿದೆ ನೆನಪಿರಲಿ
ದೇಶ ಭಕ್ತಿ ಎಂದೆಂದಿಗೂ ಕುಂದದಿರಲಿ
ರಾಮರಾಜ್ಯದ ಕನಸು ನನಸಾಗಿಸುವ ಗುರಿಯಾಗಿರಲಿ
ನಮ್ಮ ಜನನಿ ಭಾರತಾಂಬೆಯು ಶಿಖರದ ಎತ್ತರಕೆ ಹಾರಲಿ
ಅವಳ ಕೀರ್ತಿ ಶಿಖರದ ಕಿರೀಟವಾಗಲಿ
ಎಲ್ಲರಿಗೂ ಗಣರಾಜ್ಯೋತ್ಸವ ಶುಭಾಷಯಗಳು
ಕೀರ್ತಿ..ನಿಮ್ಮದೂ ಅದೇ ವಿಷಯ ಜನನೀ ಜನ್ಮ ಭೂಮಿ...ವಾವ್.. ನನ್ನ ಬ್ಲಾಗ್ ಕವನದ ಸಾಲು ಇಲ್ಲೂ ಪ್ರತಿಬಿಂಬಿತವಾಗಿದೆ....ದೇಶ ಭಕ್ತಿ ಎಂದೆಂದಿಗೂ ಕುಂದದಿರಲಿ...
ಪ್ರತ್ಯುತ್ತರಅಳಿಸಿಚನ್ನಾಗಿದೆ.
nice...
ಪ್ರತ್ಯುತ್ತರಅಳಿಸಿಕೀರ್ತಿ ಮೇಡಮ್,
ಪ್ರತ್ಯುತ್ತರಅಳಿಸಿಮಹತ್ತರವಾದ ಆಶಯಗಳ ಗೀತೆಯನ್ನು ಹಾಡಿರುವಿರಿ. ನಿಮ್ಮ ಕನಸುಗಳು ನನಸಾಗಲಿ ಎಂದು ಹಾರೈಸುವೆ. ನಿಮ್ಮ ಇತರ ಕವನಗಳನ್ನೂ ಓದಿದೆ. ಜೋಗುಳ ಹಾಡು ತೂಂಬ ವಿನೋದಪೂರ್ಣವಾಗಿದೆ!
@ ushoday thanks...
ಪ್ರತ್ಯುತ್ತರಅಳಿಸಿ@ jalanayan :- tumba dhanyavaad sir..
@ sunaath :- nimma haaraikege tumba dhanyavad..