ಕಂಡ ಕಂಡವರನ್ನ ಕಂಡಿದ್ದೆ
ಕೆಂಡದಲ್ಲಿ ಅರಳಿದ ಸಂಪಿಗೆಯನ್ನ
ಸಂಪಿಗೆಯಲ್ಲಿರುವ ಸುವಾಸನೆಯನ್ನ
ಸುವಾಸನೆಯಲಿ ಮುಳುಗಿ ನಗುವವರನ್ನ ಕಂಡಿದ್ದೆ
ಕಂಡ ಕಂಡವರನ್ನ ಕಂಡಿದ್ದೆ
ಕೆಂಪಗೆ ಕಂಡರು ಕೆಟ್ಟವರಿರುವುದನ್ನ
ಕೆಟ್ಟವರಲ್ಲಿಯ ದ್ವೇಷದ ಕೆಂಡವನ್ನ
ಕೆಂಡದಲ್ಲಿಯೇ ಕ್ರೋಧಕೆ ಬಲಿಯಾದವರನ್ನ ಕಂಡಿದ್ದೆ
ಕಂಡ ಕಂಡವರನ್ನ ಕಂಡಿದ್ದೆ
ಗುಡಿಸಲಲ್ಲಿರುವ ಬಡವರನ್ನ
ಬಡವರ ದುಡಿಮೆಯ ಬೆವರನ್ನ
ಬೆವರಿದ ಮೈಗೆ ಅನ್ನ ಉಣಿಸಿ ಖುಷಿಯಾಗಿರುವವರನ್ನ ಕಂಡಿದ್ದೆ
ಕಂಡ ಕಂಡವರನ್ನ ಕಂಡಿದ್ದೆ
ಕತ್ತಲನ್ನ ಬೆಳಕೆಂದು ತಿಳಿದವರನ್ನ
ತಿಳಿದ ಮನಸ್ಸಿನ ಭಾವಗಳ ದೀಪವನ್ನ
ದೀಪದಿಂದ ಕತ್ತಲನು ಓಡಿಸಿ ಬೆಳಗುವವರನ್ನ ಕಂಡಿದ್ದೆ
ಕಂಡ ಕಂಡವರನ್ನ ಕಂಡಿದ್ದೆ
ದೇಶಸೇವೆಯೆ ಈಶಸೇವೆ ಎಂದುವರನ್ನ
ಎಂದಿಗೂ ಅಳಿಸದ ದೇಶಪ್ರೇಮವನ್ನ
ದೇಶಪ್ರೇಮದಲ್ಲಿ ರಕ್ಷಣೆಗಾಗಿ ಮಡಿದವರನ್ನ ಕಂಡಿದ್ದೆ
ಕಂಡ ಕಂಡವರನ್ನ ಕಂಡಿದ್ದೆ
ಒಂದು ತುತ್ತು ಅನ್ನಾದರೂ ಹಂಚುವವರನ್ನ
ಹಂಚಿದ ಹೃದಯಕೆ ಸಿಗುವ ತೃಪ್ತಿಯನ್ನ
ತೃಪ್ತಿಯಲ್ಲಿ ತಾವು ಹಸಿದವರೆಂದು ಮರೆಯುವವರನ್ನ ಕಂಡಿದ್ದೆ
ಕಂಡ ಕಂಡವರನ್ನ ಕಂಡಿದ್ದೆ
ರಕ್ತಸಂಬಂಧವಿಲ್ಲದೆ ಜೀವಾಳವಾಗುವವರನ್ನ
ಜೀವಾಳ ಜೀವಿಗಾಗಿ ತ್ಯಾಗಿಸುವ ಭಾವವನ್ನ
ಭಾವನೆಯಲಿ ಬಂಧಿಸಿ ಅಮರ ಪ್ರೀತಿಸುವವರನ್ನ ಕಂಡಿದ್ದೆ
ಕಂಡ ಕಂಡವರನ್ನ ಕಂಡಿದ್ದೆ
ಕೆಂಡದಲಿ ಬೆಂದರೂ ನಗುವವರನ್ನ
ನಗುತ ನಗಿಸುತ ನವಿರಾಗುವುದನ್ನ
ನವಿರಾಗಿ ಕೆಂಡವ ಕೆಂಪು ಸುಮವಾಗಿ ಅರಳಿಸುವವರನ್ನ ಕಂಡಿದ್ದೆ
ಬದುಕಿನ ಹಲವು ಮುಖಗಳನ್ನ
ಪ್ರತ್ಯುತ್ತರಅಳಿಸಿಕೆಂಪಿನೊಡನೆ ಚೆನ್ನಾಗಿ ಚಿತ್ರಿಸಿದ್ದಿರಿ.
ಸ್ವರ್ಣಾ
ಧನ್ಯವಾದ.. ಸ್ವರ್ಣಾ
ಅಳಿಸಿ