ಅರಳಿದ ಹೂವನ್ನು
ನೋಡಿದರೆ ಖುಷಿಯು
ಸುವಾಸನೆ ಸವಿದರೆ
ದುಂಬಿಯ ರೂಪ ಮನವು
ಬಾಡಿದ ಹೂವಿಗೆಕಿಲ್ಲ ?
ಭಾವನೆಗಳ ತೆರವು
ಕಾಡುವುದು ಪ್ರಶ್ನೆ
ಸೋಲಿನಲ್ಲಿಲ್ಲವೆಕೆ ! ಗೆಲುವು
ಅರಳಿದ ಸುಮವು
ಮೆಲ್ಲನೆ ನುಡಿಯಿತು
ಮುದುಡಿದಾಗ ಅಲ್ಲವೇ
ಹೊಸ ಮೊಗ್ಗು ಬಿಡುವುದೆಂದಿತು
ಹೂವಿಗೆ ಗೊತ್ತುಂಟು
ಸೋತ ಮೇಲೆಯೇ ಗೆಲುವೆಂದು
ಬಾಡಿದ ಹೂವು ದು:ಖದಿ
ಮರೆತಿದೆ ಮತ್ತೆ ಗೆಲ್ಲುವುದನ್ನು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ