ಕಾಯುವೆ ನಿನಗಾಗಿ
ಗಡಿಯಾರದ ಮುಳ್ಳಾಗಿ
ಚಂದ್ರಮನ ಜೊತೆಗೆ
ಬೆಳಂದಿಗಳ ಬೆಳಕಾಗಿ
ನೀ ಬರುವ ವೇಳೆಯಲಿ
ರಂಗೋಲಿಯ ಬಣ್ಣವಾಗಿ
ಸ್ವಾಗತಿಸುವೆ ನಿನ್ನ
ಇಂಪಾದ ಕೋಗಿಲೆಯಾಗಿ
ಅಲಂಕರಿಸುವೆ ನನ್ನ
ಶಿಲ್ಪಿಯ ಶಿಲೆಯಾಗಿ
ಮುಖ ತುಂಬ ನಗುವು
ಅರಳಿದ ತಾವರೆಯಾಗಿ
ಕೊರಳಿಗೆ ಕೋಮಲ
ಮುತ್ತಿನ ಹಾರ ಧರಿಸಿ
ಭಾವನೆಗಳ ಮನದಿ
ನವಿರಾದ ನವಿಲ ನಲಿಸಿ
ಹೃದಯ ತುಂಬ
ಪ್ರೇಮದ ವೀಣೆ ಬಾರಿಸಿ
ಪ್ರೀತಿಸುವೆ ಜೀವದ
ಎದೆಬಡಿತವಾಗಿ
ಎಲ್ಲಿರುವೆ ? ಇನಿಯ..!
ನಿನ್ನ ಕಾಯುತ
ಗಡಿಯಾರದ ಮುಳ್ಳು ಮುರಿದಿವೆ
ಬೆಳಂದಿಗಳು ದೂರಾಗಿ
ಅಮವಾಸ್ಯೆ ಬಂದಿದೆ
ಮನಸ್ಸು ಕೇಳದು
ಪ್ರೀತಿ ಬಿಡದು
ಕಾಯುವೆ ನಿನ್ನ.. ಮುಂಬರುವ
ಹುಣ್ಣಿಮೆ ರಾತ್ರಿಗಾಗಿ
Very nice. Wow you write almost every day. Good :)
ಪ್ರತ್ಯುತ್ತರಅಳಿಸಿSwarna
ಕವಿತೆ ತು೦ಬಾ ಚೆನ್ನಾಗಿ ಮೂಡಿ ಬ೦ದಿದೆ.
ಪ್ರತ್ಯುತ್ತರಅಳಿಸಿ@ swarna - ಧನ್ಯವಾದ ... ಭಾವನೆಗಳು ನನ್ನನ್ನು ಕವನ ಬರೆಯುವ ಹಾಗೆ ಮಾಡುತ್ತವೆ ಅದಕ್ಕೆ ಮುಂಜಾನೆ ಚಹಾ ಜೊತೆ ಭಾವನೆಗಳಿಗೂ ಗರಮ ಆರಾಮ ಕನ್ರಿ..
ಪ್ರತ್ಯುತ್ತರಅಳಿಸಿ@ ushodaya - ಧನ್ಯವಾದ.. ಸಲಹೆಗಳನ್ನು ಆವ್ಹಾನಿಸುವೆ...