ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಗುರುವಾರ, ನವೆಂಬರ್ 5, 2009

ಎಂಥ ಸುಖ

ಹೇ ಎಂಥ ಸುಖ ಈ ಜೀವನದಲ್ಲಿ
ಎಂದು ನಿನ್ನಿಂದ ತಿಳಿಯುತ್ತಿದೆ
- ಈ ಬೆಳಗಿನ ಮಂಜಿನ ಹನಿಗಳಲ್ಲಿ
ಮಂಜು ಮಂಚಾಗಿರುವ ನೀನು ದೂರದಿಂದ
ಹತ್ತಿರವಿರುವ ಹಾಗೆ ಅನಿಸುತ್ತಿದೆ..
ಹೇ ಗೊತ್ತಾ ಈಗ ಮಂಜು ಮಾಯವಾಗಿ
ನೀನು ನನ್ನ ಪಕ್ಕಕ್ಕೆ ಕುಳುತಿರುವೆ ಎಂದೆನಿಸುತ್ತಿದೆ ..
ಹಾ೦ ಎಂಥ ಸುಖ ನಿನ್ನ ಜೊತೆಯಲ್ಲಿ
ಎಂದು ಇಂದು ತಿಳಿಯುತ್ತಿದೆ
ಈ ಬೆಳಗಿನ ತಂಪಾದ ಗಾಳಿಯಲ್ಲಿ
ತಂಪು ತಂಪಾಗಿರುವ ನಿನ್ನ ಪ್ರೀತಿಯ
ಭಾವನೆಗಳು ಸೂಸಿ ಬರುವ ಹಾಗೇ ಕಾಣುತ್ತಿದೆ
ಹೇ ಗೊತ್ತಾ ಈಗ ತಂಪು ಸೂಸಿ ಹೋಗಿ
ನೀನು ನನ್ನ ದೇಹದಲ್ಲಿರುವ ಹೃದಯ
ಎಂದು ಕೂಗಿ ಹೇಳಿದೆ..
ಹಾ೦ ಎಂಥ ಸುಖ ನಿನ್ನ ಹೃದಯದ ಪ್ರೀತಿಯಲ್ಲಿ
ಎಂದು ಇಂದು ತಿಳಿಯುತ್ತಿದೆ
ಹೀಗೆ ಎಂಥ ಸುಖ ಈ ಜೀವನದಲ್ಲಿ
ಎಂದು ನಿನ್ನಿಂದ ತಿಳಿಯುತ್ತಿದೆ ..

ನನ್ನ ಪ್ರೀತಿಯ ಜೀವ :)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ