ಮುಸ್ಸಂಜೆಯ ಮಾತನ್ನು ಹೇಳಲು ಬಯಸುವೆ..
ನಿನ್ನ ಪ್ರೀತಿಯನ್ನು ನಾನು ಅನುಭವಿಸುವೆ
ತಂಪಾದ ಗಾಳಿಯಲ್ಲಿ
ನಿನ್ನ ಇಂಪಾದ ಧ್ವನಿ ಕೇಳುತಿದೆ..
ಹಕ್ಕಿಗಳ ಚಿಲಿಪಿಲಿ ಶಬ್ದದಲ್ಲಿ
ನಿನ್ನ ಮುಗುಳ್ನಗೆಯು ತೋರುತಿದೆ ..
ಸುಂದರವಿರುವ ಮೋಡಗಳಲ್ಲಿ
ನಿನ್ನ ಪ್ರೀತಿಯ ಮುಖವು ಕಾಣುತಿದೆ..
ಸೂರ್ಯಾಸ್ತದ ಕಂಪಿನಲ್ಲಿ
ನಿನ್ನ ಶಾಂತತೆಯ ಮನ ಹೇಳುತಿದೆ..
'ನೀನು ನನ್ನ ಒಡತಿ
ನೀನು ನನ್ನ ಗೆಳತಿ'
ಆಲಿಸಿದ ಈ ಮನ ಪ್ರೀತಿಯಿಂದ ತುಂಬಿದೆ.
ಹೀಗೆ ಮುಸ್ಸಂಜೆಯ ಮಾತನ್ನು ಹೇಳಲು ಬಯಸುವೆ...
ನನ್ನ ಪ್ರೀತಿಯ ಜೀವ :)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ