ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಭಾನುವಾರ, ನವೆಂಬರ್ 8, 2009

ನಿನ್ನ ಜೊತೆ


ನಿನ್ನ ಜೊತೆಯಲ್ಲಿದ್ದು ಜೀವನದ ಎಲ್ಲ

ಸುಖದ ಅನುಭವ ತೆಗೆದುಕೊಳ್ಳುತ್ತಿರುವೆ

ಸಂತೋಷವನ್ನು ಬಣ್ಣಿಸಲು ಬಾರದಷ್ಟು

ಸುಖವನ್ನು ನನಗೆ ನೀಡಿರುವೆ

ನಾನು ನಿನ್ನ ಜೀವಕ್ಕೆ ಜೀವ ಎಂದು

ಹೆಮ್ಮೆಯಿಂದ ಹೇಳಲು ಇಷ್ಟ ಪಡುವೆ

ನಿನ್ನ ಉಸಿರಲ್ಲಿ ನಾನು ಉಸಿರಾಗಿ ಇರಲು

ಹೃದಯದಿಂದ ಮೆಚ್ಚಿ ಹೇಳುವೆ

ನನ್ನ ಮನಸ್ಸಿನಲ್ಲಿ ನಿನ್ನ ಪ್ರೀತಿ ಹಬ್ಬಿರುವಾಗ

ನೀನೆ ಜೀವ ಎಂದು ಪ್ರೀತಿಯಿಂದ

ಮುಗ್ಧವಾಗಿ ಮನಸ್ಸಿನಿಂದ ನಿನ್ನ ಮನಸ್ಸು

ಸಾಕ್ಷಿಯಿಂದ ನನ್ನ ಮನಸ್ಸು ನಿನಗೆ ನೀಡಿರುವೆ



ನನ್ನ ಪ್ರೀತಿಯ ಜೀವ :)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ